Advertisement

ಗೆಲ್ಲಲು ಉತ್ತಮ ಮಾರ್ಗ ಹುಡುಕಿ..: ಡಿಆರ್ ಎಸ್ ನಿರ್ಧಾರಕ್ಕೆ ಕೊಹ್ಲಿ ತೀವ್ರ ಅಸಮಾಧಾನ

08:59 AM Jan 14, 2022 | Team Udayavani |

ಕೇಪ್ ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯು ರೋಚಕ ಘಟ್ಟ ತಲುಪಿದೆ. ಮೂರನೇ ಟೆಸ್ಟ್ ನಲ್ಲಿ ಗೆದ್ದು, ಸರಣಿ ಜಯ ದಾಖಲಿಸುವತ್ತ ದಕ್ಷಿಣ ಆಫ್ರಿಕಾ ಮುಂದಾಗಿದ್ದರೆ, ಬೌಲಿಂಗ್ ಮ್ಯಾಜಿಕ್ ನಡೆಸಲು ಭಾರತ ತಂಡ ಸಜ್ಜಾಗಿದೆ.

Advertisement

ಗುರುವಾರದ ಪಂದ್ಯ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. 212 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ಡೀನ್ ಎಲ್ಗರ್ ಮತ್ತು ಕೀಗನ್ ಪೀಟರ್ಸನ್ ನೆರವಾದರು. ಇವರಿಬ್ಬರ ಜೊತೆಯಾಟ ಮುರಿಯಲು ಭಾರತ ತಂಡ ಹಲವು ಪ್ರಯತ್ನ ನಡೆಸಿತು.

ಅಶ್ವಿನ್ ಎಸೆತದಲ್ಲಿ ಡೀನ್ ಎಲ್ಗರ್ ಎಲ್ ಬಿ ಬಲೆಗೆ ಬಿದ್ದರು. ಅಂಪೈರ್ ಎರಾಸ್ಮಸ್ ಕೂಡಾ ಔಟ್ ನೀಡಿದರು. ಆದರೆ ಡೀನ್ ಎಲ್ಗರ್ ರಿವೀವ್ ತೆಗೆದುಕೊಂಡರು. ರಿವೀವ್ ನಲ್ಲಿ ನೋಡಿದಾಗ ಬಾಲ್ ವಿಕೆಟ್ ಗಿಂತ ಮೇಲೆ ಹೋಗಿರುವುದು ಕಂಡಿತ್ತು. ಹೀಗಾಗಿ ಅಂಪೈರ್ ನಾಟೌಟ್ ತೀರ್ಪು ನೀಡಬೇಕಾಯಿತು.

ಇದನ್ನೂ ಓದಿ:ಕೆರಿಬಿಯನ್‌ನಲ್ಲಿ ಕ್ರಿಕೆಟ್‌ ಹಬ್ಬ: ಇಂದಿನಿಂದ ವೆಸ್ಟ್‌ ಇಂಡೀಸ್‌ನಲ್ಲಿ ಕಿರಿಯರ ವಿಶ್ವಕಪ್‌

ಮೂರನೇ ಅಂಪೈರ್ ನಿರ್ಧಾರಕ್ಕೆ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸೇರಿದಂತೆ ಭಾರತೀಯ ಆಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಟಂಪ್ ಮೈಕ್ ಬಳಿ ತೆರಳಿದ ನಾಯಕ ವಿರಾಟ್, “ನಿಮ್ಮ ತಂಡದ ಮೇಲೂ ಫೋಖಸ್ ಮಾಡಿ, ಎದುರಾಳಿಯ ಮೇಲೆ ಮಾತ್ರವಲ್ಲ.” ಎಂದು ಬ್ರಾಡ್ ಕಾಸ್ಟ್ ಚಾನಲ್ ಸೂಪರ್ ಸ್ಪೋರ್ಟ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

“ ಹನ್ನೊಂದು ಮಂದಿಯ ವಿರುದ್ಧ ಸಂಪೂರ್ಣ ದೇಶ ಆಡುತ್ತಿದೆ” ಎಂದು ರಾಹುಲ್ ಹೇಳಿದರೆ, “ ನೀವು ಜಯ ಗಳಿಸಲು ಉತ್ತಮ ವಿಧಾನವನ್ನು ಹುಡುಕಬೇಕು ಸೂಪರ್ ಸ್ಪೋರ್ಟ್” ಎಂದು ಅಶ್ವಿನ್ ಕೂಗಾಡಿದರು.

ದಿನದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಗೆಲುವಿಗೆ ಇನ್ನು 111 ರನ್ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next