Advertisement

ಅಂದು ಟೀಮ್ ಮೇಟ್ಸ್- ಇಂದು ಗುರು ಶಿಷ್ಯರು: ವಿಶೇಷ ಪೋಸ್ಟ್ ಹಂಚಿಕೊಂಡ ವಿರಾಟ್ ಕೊಹ್ಲಿ

10:58 AM Jul 10, 2023 | Team Udayavani |

ಡೊಮಿನಿಕಾ: ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಜುಲೈ 12ರಿಂದ ವಿಂಡೀಸ್ ಸರಣಿ ಆರಂಭವಾಗಲಿದ್ದು, ಮೊದಲ ಟೆಸ್ಟ್ ಪಂದ್ಯವು ಡೊಮಿನಿಕಾದಲ್ಲಿ ನಡೆಯಲಿದೆ.

Advertisement

ಡೊಮಿನಿಕಾ ಮೈದಾನದಲ್ಲಿ ಆರು ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 2011ರ ಬಳಿಕ ಭಾರತ ಇಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡುತ್ತಿದೆ. 12 ವರ್ಷಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಇಲ್ಲಿ ಸರಣಿ ಗೆಲುವು ಸಾಧಿಸಿತ್ತು.

ಮುರಳಿ ವಿಜಯ್, ಹರ್ಭಜನ್ ಸಿಂಗ್ ಮತ್ತು ರಾಹುಲ್ ದ್ರಾವಿಡ್ ಅಂದಿನ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದರು. ಡೊಮಿನಿಕಾ ಟೆಸ್ಟ್ ಪಂದ್ಯ ಡ್ರಾ ಆದರೂ ಭಾರತ 1-0 ಅಂತರದಿಂದ ಸರಣಿ ಜಯಿಸಿತ್ತು. ಅಂದು ಯುವ ವಿರಾಟ್ ಕೊಹ್ಲಿಯೂ ಭಾರತ ತಂಡದ ಸದಸ್ಯರಾಗಿದ್ದರು.

ಇದನ್ನೂ ಓದಿ:Chikkamagaluru: ಚಾರ್ಮಾಡಿ ಘಾಟ್‌ ನಲ್ಲಿ ಪ್ರವಾಸಿಗರ ಹುಚ್ಚು ಮೋಜು-ಮಸ್ತಿ

ಇಂದು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಚ್ ರಾಹುಲ್ ದ್ರಾವಿಡ್ ಜೊತೆಗಿರುವ ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಂದು ಒಂದೇ ತಂಡದಲ್ಲಿ ಆಡಿದ್ದ ವಿರಾಟ್ ಮತ್ತು ದ್ರಾವಿಡ್ ಇಂದೂ ತಂಡದಲ್ಲಿದ್ದಾರೆ. ಆದರೆ ಜವಾಬ್ದಾರಿಗಳು ಬೇರೆ. ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ. ಬೇರೆ ಯಾವ ಆಟಗಾರನೂ ಈಗ ತಂಡದಲ್ಲಿಲ್ಲ. ಆಗ ತಂಡದಲ್ಲಿದ್ದ ಇಶಾಂತ್ ಶರ್ಮಾ ಈ ಸರಣಿಗೆ ವೀಕ್ಷಕ ವಿವರಣೆ ಮಾಡಲಿದ್ದಾರೆ.

Advertisement

“2011 ರಲ್ಲಿ ಡೊಮಿನಿಕಾದಲ್ಲಿ ನಾವು ಆಡಿದ ಕೊನೆಯ ಟೆಸ್ಟ್‌ ನಲ್ಲಿದ್ದ ಇಬ್ಬರು ವ್ಯಕ್ತಿಗಳು. ಪ್ರಯಾಣವು ನಮ್ಮನ್ನು ಇಲ್ಲಿಗೆ ವಿಭಿನ್ನ ಸಾಮರ್ಥ್ಯಗಳಲ್ಲಿ ಮರಳಿ ತರುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಭಾರತ ತಂಡವು ವೆಸ್ಟ್ ಇಂಡೀಸ್ ಸರಣಿಯೊಂದಿಗೆ ಹೊಸ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆವೃತ್ತಿಯನ್ನು ಆರಂಭಿಸಲಿದೆ. ವಿಂಡೀಸ್ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next