Advertisement

ಏಕದಿನ ಸರಣಿಯಿಂದ ಹೊರಗುಳಿವರೇ ಕೊಹ್ಲಿ?

11:15 PM Dec 14, 2021 | Team Udayavani |

ಹೊಸದಿಲ್ಲಿ: ವಿರಾಟ್‌ ಕೊಹ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತದ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿರುವುದಕ್ಕೆ ಅವರು ಬಿಸಿಸಿಐ ಮೇಲೆ ಮುನಿಸಿಕೊಂಡಂತಿದೆ. ಕೇವಲ ಟೆಸ್ಟ್‌ ತಂಡಕ್ಕಷ್ಟೇ ನಾಯಕನಾಗಿರುವ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ತನಗೆ ವಿರಾಮ ನೀಡುವಂತೆ ಕೇಳಿಕೊಂಡಿ¨ªಾರೆ ಎಂಬುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ ಬಿಸಿಸಿಐ ಇದನ್ನು ನಿರಾಕರಿಸಿದೆ. ಈ ಕುರಿತು ಕೊಹ್ಲಿ ಯಾವುದೇ ಮನವಿ ಸಲ್ಲಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

Advertisement

ಜನವರಿ 11ರಂದು ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮ ದಂಪತಿಯ ಪುತ್ರಿ ವಮಿಕಾಳ ಮೊದಲ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಕುಟುಂಬದ ಜತೆ ಸಮಯ ಕಳೆಯಲು ವಿರಾಟ್‌ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿಯಲು ಬಯಸಿದ್ದಾರೆ ಎಂಬುದು ಸುದ್ದಿ.

ಆದರೆ ಜ. 11ರ ವೇಳೆ ಭಾರತ-ದಕ್ಷಿಣ ಆಫ್ರಿಕಾ ನಡುವೆ ಸರಣಿಯ ಅಂತಿಮ ಟೆಸ್ಟ್‌ ಪಂದ್ಯ ನಡೆಯುತ್ತಿರುತ್ತದೆ. ಅದು ಕೊಹ್ಲಿ ಅವರ 100ನೇ ಟೆಸ್ಟ್‌ ಕೂಡ ಆಗಿರುತ್ತದೆ. ಹೀಗಾಗಿ ಮಗಳ ಜನ್ಮದಿನದ ಕಾರಣವನ್ನು ಮುಂದೊಡ್ಡಿ ಕೊಹ್ಲಿ ಇಂಥದೊಂದು ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದೊಂದು ಸಾಮಾನ್ಯ ಲೆಕ್ಕಚಾರ.

ನಾಯಕತ್ವದ ತಿಕ್ಕಾಟ?
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಯಿಂದ ಹೊರಗುಳಿಯಲು ಕೊಹ್ಲಿ ನಿರ್ಧಾರ ತೆಗೆದುಕೊಂಡಿ¨ªಾರೆ ಎಂಬ ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆದಿವೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮ ನಡುವೆ ನಾಯಕತ್ವ ವಿಚಾರಕ್ಕೆ ಜಗಳವಾಗಿದೆ, ಹೀಗಾಗಿ ಕೊಹ್ಲಿ ಅವರ ನಾಯಕತ್ವದಲ್ಲಿ ಆಡದಿರಲು ನಿರ್ಧರಿಸಿದಂತಿದೆ ಎಂಬುದು ಚರ್ಚೆಯ ಮರ್ಮ!

ಇದಕ್ಕೆ ಸರಿಯಾಗಿ, ಸೋಮವಾರದ ಅಭ್ಯಾಸದ ವೇಳೆ ರೋಹಿತ್‌ ಶರ್ಮ ಕೈಗೆ ಏಟು ತಿಂದು ಟೆಸ್ಟ್‌ ಸರಣಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇದನ್ನು ಹೇಗೂ ಅರ್ಥೈಸಿಕೊಳ್ಳಬಹುದು!

Advertisement

ಬಿಸಿಸಿಐ ಸ್ಪಷ್ಟನೆ
ಈ ಕುರಿತು ಸ್ಪಷ್ಟನೆ ನೀಡಿದ ಬಿಸಿಸಿಐ ಅಧಿಕಾರಿಯೊಬ್ಬರು, ವಿರಾಟ್‌ ಕೊಹ್ಲಿ ಇಂಥ ಯಾವುದೇ ಮನವಿ ಸಲ್ಲಿಸಿಲ್ಲ ಎಂದಿದ್ದಾರೆ.

“ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಾನು ಲಭ್ಯನಿಲ್ಲ ಎಂದು ಕೊಹ್ಲಿ ನಮ್ಮ ಬಳಿ ತಿಳಿಸಿಲ್ಲ. ಇಂಥ ಯಾವುದೇ ಮನವಿ ಮಾಡಿಲ್ಲ. ಆದರೆ ರೋಹಿತ್‌-ಕೊಹ್ಲಿ ನಡುವೆ ಭಿನ್ನಾಬಿಪ್ರಾಯವಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳೆಲ್ಲ ಸುಳ್ಳು. ಇದನ್ನು ನಂಬಬೇಡಿ. ಇವರಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ’ ಎಂದಿದ್ದಾರೆ.

ಅಭ್ಯಾಸಕ್ಕೆ ಕೊಹ್ಲಿ ಗೈರು!
ಮುಂಬಯಿಯಲ್ಲಿ ಆಯೋಜಿಸಿದ್ದ ಅಭ್ಯಾಸಕ್ಕೂ ವಿರಾಟ್‌ ಕೊಹ್ಲಿ ಹಾಜರಾಗಿಲ್ಲ ಎನ್ನಲಾಗಿದೆ. ಹಾಗೆಯೇ ದಕ್ಷಿಣ ಆಫ್ರಿಕಾಕ್ಕೆ ತೆರ ಳುವ ಆಟಗಾರರೆಲ್ಲ ಈಗಾಗಲೇ ಕ್ವಾರಂಟೈನ್‌ಗೆ ಒಳಗಾಗಿದ್ದರೂ ಕೊಹ್ಲಿ ಇನ್ನೂ ಕ್ವಾರಂಟೈನ್‌ಗೆ ಒಳಪಟ್ಟಿಲ್ಲ ಎಂದೂ ವರದಿಯಾಗಿದೆ.

ಇದನ್ನೂ ಓದಿ:ಭೂ ಪರಿವರ್ತನೆ ಸಮಸ್ಯೆ ಪರಿಹಾರಕ್ಕಾಗಿ ಸಭೆ: ಬೈರತಿ

ಟೀಮ್‌ ಇಂಡಿಯಾಕ್ಕೆ ಒಂದೇ ದಿನ ಕ್ವಾರಂಟೈನ್‌
ಜೊಹಾನ್ಸ್‌ಬರ್ಗ್‌: ಟೆಸ್ಟ್‌ ಹಾಗೂ ಏಕದಿನ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾಕ್ಕೆ ತೆರಳುವ ಭಾರತೀಯ ಕ್ರಿಕೆಟ್‌ ತಂಡದ ಆಟಗಾರರು ಕೇವಲ ಒಂದು ದಿನ ಮಾತ್ರ ಕ್ವಾರಂಟೈನ್‌ನಲ್ಲಿ ಉಳಿದುಕೊಂಡರೆ ಸಾಕು ಎಂಬುದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಟೀಮ್‌ ಇಂಡಿಯಾ ಆಟಗಾರರು ಈಗಾಗಲೇ ತವರಲ್ಲಿ ಮೂರು ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಿದ್ದು, ಈಗಿನ ವೇಳಾಪಟ್ಟಿಯಂತೆ ಬುಧವಾರ ರಾತ್ರಿ ಚಾರ್ಟೆಡ್‌ ವಿಮಾನದ ಮೂಲಕ ಜೊಹಾನ್ಸ್‌ಬರ್ಗ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಈ ಅವಧಿಯಲ್ಲಿ ಭಾರತೀಯ ಕ್ರಿಕೆಟ್‌ ತಂಡದ ಆಟಗಾರರು ಮೂರು ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಲಿ¨ªಾರೆ. ಹೀಗಾಗಿ ಇವರು ದಕ್ಷಿಣ ಆಫ್ರಿಕಾಕ್ಕೆ ಬಂದಿಳಿದ ಬಳಿಕ ಕೇವಲ ಒಂದು ದಿನ ಹೊಟೇಲ್‌ ಕ್ವಾಟಂಟೈನ್‌ನಲ್ಲಿದ್ದು, ಬಳಿಕ ಅಭ್ಯಾಸ ನಡೆಸಬಹುದು ಎಂದು ಕ್ರಿಕೆಟ್‌ ದಕ್ಷಿಣ ಆಫ್ರಿಕಾದ ವಕ್ತಾರರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next