Advertisement

ಮಗಳ ಫೋಟೊ ವೈರಲ್‌ ಮಾಡದಿರಿ: ಕೊಹ್ಲಿ-ಅನುಷ್ಕಾ ಮನವಿ

10:44 PM Jan 24, 2022 | Team Udayavani |

ಹೊಸದಿಲ್ಲಿ: ಮಗಳು ವಮಿಕಾಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವುದಕ್ಕೆ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮ ತೀವ್ರ ಅಸಮಾಧಾನಗೊಂಡಿದ್ದಾರೆ. ಇದನ್ನು ದಯವಿಟ್ಟು ವೈರಲ್‌ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Advertisement

ಭಾರತ-ದಕ್ಷಿಣ ಆಫ್ರಿಕಾ ನಡುವಿನ 3ನೇ ಏಕದಿನ ಪಂದ್ಯದ ವೇಳೆ ವಿರಾಟ್‌ ಕೊಹ್ಲಿ ಅರ್ಧ ಶತಕ ಪೂರ್ತಿಗೊಳಿಸಿದಾಗ ಗ್ಯಾಲರಿಯಲ್ಲಿ ಮಗಳನ್ನು ಎತ್ತಿಕೊಂಡಿದ್ದ ಅನುಷ್ಕಾ ಕಾಣಿಸಿಕೊಂಡರು. ಈ ವೇಳೆ ಕೊಹ್ಲಿ ಜೋಗುಳ ಹಾಡುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಕ್ರಿಕೆಟ್‌ ನೇರ ಪ್ರಸಾರದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ವಮಿಕಾ ಚಿತ್ರ ವೈರಲ್‌ ಆಗಿತ್ತು. ಅಭಿಮಾನಿಗಳು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರವನ್ನು ಹಂಚಿಕೊಂಡಿದ್ದರು.

ಕೋರಿಕೆಯಲ್ಲಿ ಬದಲಾವಣೆ ಇಲ್ಲ
ಇದೀಗ ಮಗಳ ಫೋಟೋ ವೈರಲ್‌ ಆದ ವಿಚಾರ ತಿಳಿದ ಬಳಿಕ ಪ್ರತಿಕ್ರಿಯೆ ನೀಡಿರುವ ವಿರಾಟ್‌ ಕೊಹ್ಲಿ, “ಸ್ನೇಹಿತರೇ, ರವಿವಾರ ಮಗಳ ಚಿತ್ರಗಳನ್ನು ಕ್ರೀಡಾಂಗಣದಲ್ಲಿ ಸೆರೆಹಿಡಿಯಲಾಗಿದ್ದು, ಬಳಿಕ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಕ್ಯಾಮರಾ ಕಣ್ಣುಗಳು ನಮ್ಮ ಮೇಲಿದ್ದವು ಎಂಬ ವಿಚಾರ ತಿಳಿದಿರಲಿಲ್ಲ. ಆದರೂ ಈ ವಿಚಾರದಲ್ಲಿ ನಮ್ಮ ನಿಲುವು ಹಾಗೂ ಕೋರಿಕೆಯಲ್ಲಿ ಬದಲಾವಣೆಯಿಲ್ಲ. ನಾವು ಈ ಹಿಂದೆ ತಿಳಿಸಿದ ಕಾರಣಗಳಿಗಾಗಿ ವಮಿಕಾಳ ಚಿತ್ರಗಳನ್ನು ಸೆರೆಹಿಡಿಯದಂತೆ, ಪ್ರಕಟಿಸದಂತೆ ವಿನಂತಿಸುತ್ತೇವೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next