Advertisement

ವಿರಾಟ್ ಕೊಹ್ಲಿಗೆ ವಿಸ್ಡನ್ ದಶಕದ ಏಕದಿನ ಆಟಗಾರ ಗೌರವ

04:26 PM Apr 15, 2021 | Team Udayavani |

ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಸ್ಡನ್ ಅಲ್ ಮನ್ಯಾಕ್ 2010ರ ದಶಕದ ಏಕದಿನ ಆಟಗಾರ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಮಾಜಿ ಆಟಗಾರರಾದ ಕಪಿಲ್ ದೇವ್ 1980ರ ದಶಕದ ಆಟಗಾರ, ಸಚಿನ್ ತೆಂಡೂಲ್ಕರ್ 1990ರ ದಶಕದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ವಿರಾಟ್ ಕೊಹ್ಲಿ 2008ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಇದುವರೆಗೆ 254 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ 12,169 ರನ್ ಗಳಿಸಿದ್ದಾರೆ.

ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯದ 50ನೇ ವಾರ್ಷಿಕೋತ್ಸವದ ಸ್ಮರಣೆಗಾಗಿ ವಿಸ್ಡನ್ ಕ್ರಿಕೆಟರ್ಸ್ ಅಲ್ಮನ್ಯಾಕ್‌ನ 2021ರ ಆೃತ್ತಿಯಲ್ಲಿ ಕಳೆದೈದು ದಶಕದ ಐವರು ಕ್ರಿಕೆಟಿಗರನ್ನು ಹೆಸರಿಸಲಾಗಿದೆ. ವಿಸ್ಡನ್ ಪುಸ್ತಕವು ‘ಕ್ರಿಕೆಟ್‌ನ ಬೈಬಲ್’ ಎಂದೇ ಪ್ರಖ್ಯಾತಿ ಪಡೆದಿದೆ.

1970: ವಿವಿಯನ್ ರಿಚರ್ಡ್, 1980: ಕಪಿಲ್ ದೇವ್, 1990: ಸಚಿನ್ ತೆಂಡೂಲ್ಕರ್, 2000: ಮುತ್ತಯ್ಯ ಮರಳೀಧರನ್ ಮತ್ತು 2010ರ ದಶಕದ ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next