Advertisement

ಅಭ್ಯಾಸದ ವೇಳೆ ಬೆಕ್ಕೊಂದನ್ನು ಮುದ್ದಾಡಿದ ವಿರಾಟ್: ಪೋಸ್ಟ್‌ ವೈರಲ್

04:04 PM Nov 23, 2021 | Team Udayavani |

ಮಂಗಳವಾರ ಬೆಳಿಗ್ಗೆ ಅಭ್ಯಾಸದ ನಂತರವೂ ವಿರಾಟ್ ಕೊಹ್ಲಿ ಕೂಲಾಗಿದ್ದಾರೆ. ಇದಕ್ಕೆ ಕಾರಣ ಇವರಿಗೆ ದೊರಕಿದ ಹೊಸ ಫ್ರೆಂಡ್. ಭಾರತೀಯ ಕ್ರಿಕೆಟ್ ತಂಡದ ನಾಯಕ ಮುದ್ದಾದ ಬೆಕ್ಕನ್ನು ಹಿಡಿದುಕೊಂಡು ಅದರೊಂದಿಗೆ ಕಳೆದ ಅನುಭವವನ್ನು ಹಂಚಿಕೊಳ್ಳುವ ಮೂಲಕ ಕ್ರಿಕೇಟ್‌ ಅಭ್ಯಾಸಕ್ಕೆ ಹೊಸ ಮೆರಗು ನೀಡಿದ್ದಾರೆ.

Advertisement

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಅವರು ಆ ಮುದ್ದಾದ ಕಿಟ್ಟಿ ಬಗ್ಗೆ ಬರೆದುಕೊಂಡಿದ್ದಾರೆ ಮತ್ತು ಅವರ ಹೊಸ ಸ್ನೇಹಿತನೊಂದಿಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.ಕೆಲ ಹೊತ್ತಿನಲ್ಲೇ ಈ ಪೋಸ್ಟ್ ಭಾರಿ ವೈರಲ್ ಆಗಿದೆ.

ಅಭ್ಯಾಸದ ವೇಳೆ ದೊರೆತ ಈ ಕೂಲ್‌ ಬೆಕ್ಕಿನಿಂದ ನಿಮಗೆಲ್ಲಾ ಒಂದು ಹಲೋ ಎಂದು ವಿರಾಟ್ ಬರೆದಿದ್ದಾರೆ.  ಈ ಪೋಸ್ಟ್ ಕೇವಲ ಒಂದು ಗಂಟೆಯ ಒಳಗೆ 1.2 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ ಗಳನ್ನು ಪಡೆದಿದೆ ಮತ್ತು ರಾಶಿ ಕಾಮೆಂಟ್‌ಗಳನ್ನೂ  ಪಡೆದುಕೊಂಡಿದೆ.

Advertisement

ಅನುಷ್ಕಾ ಕೂಡ ಈ ಪೋಸ್ಟ್‌ ಗೆ ಪ್ರತಿಕ್ರಿಯಿಸಿ ಹಲೋ ಬಿಲ್ಲಿ ಎಂದು ಕಮೆಂಟ್‌ ಮಾಡಿದ್ದಾರೆ. ಇದಕ್ಕೆ ಹಲವರು ತಮಾಷೆ ಮಾಡಿದ್ದು ಜೊತೆಗೆ ಒಬ್ಬ ಬಳಕೆದಾರ, “ಆ ಬೆಕ್ಕು ಅದೃಷ್ಟದ ಬೆಕ್ಕು” ಎಂದು ಬರೆದರೆ, “ಹಾಯ್ ಕಿಟ್ಟಿ ಕ್ಯಾಟ್” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next