ಮುಂಬೈ: ಟೀಂ ಇಂಡಿಯಾಗೆ ಮೇಜರ್ ಸರ್ಜರಿ ಮಾಡುವ ಕಾಲ ಸನ್ನಿಹಿತವಾಗಿದೆಯೇ? ಹೌದು ಎನ್ನುತ್ತಿದೆ ಹಲವು ವರದಿಗಳು. ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ನಾಯಕ ವಿರಾಟ್ ಕೊಹ್ಲಿ ಅವರು ಏಕದಿನ ಮತ್ತು ಟಿ20 ತಂಡದ ನಾಯಕತ್ವವನ್ನು ತ್ಯಜಿಸಲಿದ್ದಾರೆ ಎಂದು ವರದಿಗಳು ತಿಳಿಸಿದೆ.
ಬ್ಯಾಟಿಂಗ್ ನತ್ತ ಹೆಚ್ಚು ಗಮನ ನೀಡಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದು, ಹೀಗಾಗಿ ಮೂರು ಮಾದರಿಯಲ್ಲಿ ನಾಯಕನಾಗಿ ಮುಂದುವರಿಯುವ ಬದಲು, ಟೆಸ್ಟ್ ತಂಡದಲ್ಲಿ ಮಾತ್ರ ನಾಯಕನಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ.
ಏಕದಿನ ಮತ್ತು ಟಿ20 ತಂಡಗಳಿಗೆ ರೋಹಿತ್ ಶರ್ಮಾ ನಾಯಕನಾಗಲಿದ್ದಾರೆ ಎನ್ನಲಾಗಿದೆ. ಕನಿಷ್ಠ ಟಿ20 ತಂಡದ ನಾಯಕತ್ವವಾದರೂ ರೋಹಿತ್ ಪಾಲಾಗುವುದು ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇದನ್ನೂ ಓದಿ:ಜೊಕೊವಿಕ್ ಕನಸು ನುಚ್ಚುನೂರು ಮಾಡಿದ ಮೆಡ್ವೆಡೆವ್ ಗೆ ಯುಎಸ್ ಓಪನ್ ಕಿರೀಟ
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಉತ್ತಮ ಸಾಧನೆ ಮಾಡಿದರೂ ಯಾವುದೇ ಐಸಿಸಿ ಕಪ್ ಗೆಲ್ಲಲಾಗಿಲ್ಲ. ಕಳೆದ ಏಕದಿನ ವಿಶ್ವಕಪ್ ನಲ್ಲೂ ಸೆಮಿ ಫೈನಲ್ ನಲ್ಲಿ ಸೋಲನುಭವಿಸಿದೆ. ಆದರೆ ರೋಹಿತ್ ಶರ್ಮಾ ಅವರು ಐಪಿಎಲ್ ನಲ್ಲಿ ಐದು ಬಾರಿ ಕಪ್ ಗೆದ್ದಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ ಒಮ್ಮೆಯೂ ಚಾಂಪಿಯನ್ ಆಗಿಲ್ಲ.