ಮುಂಬೈ: “ಪಂದ್ಯಾವಳಿಗಳನ್ನು ಆಡುವುದು ಗೆಲ್ಲಲೆಂದು. ನಾನು ನಾಯಕನಾಗಿದ್ದ 2017 ಚಾಂಪಿಯನ್ಸ್ ಟ್ರೋಫಿ ಫೈನಲ್, 2019 ವಿಶ್ವಕಪ್ ಸೆಮಿಫೈನಲ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವರೆಗೆ ತಲುಪಿದ್ದೇವೆ. ಈ ಮೂರು ಐಸಿಸಿ ಪಂದ್ಯಾವಳಿಗಳ ಬಳಿಕವೂ ನನ್ನನ್ನು ವಿಫಲ ನಾಯಕ ಎಂದು ಪರಿಗಣಿಸಲಾಗಿದೆ” ಇದು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಮಾತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಡ್ ಕಾಸ್ಟ್ ನಲ್ಲಿ ಮಾತನಾಡಿದ ವಿರಾಟ್, ಐಸಿಸಿ ಟ್ರೋಫಿ ಗೆಲ್ಲದ ಬಗ್ಗೆ ಮಾತನಾಡಿದರು.
ಟೀಕೆಗಳು ಯಾವುದೇ ಹಂತದಲ್ಲೂ ತನ್ನನ್ನು ತಾನೇ ಜಡ್ಜ್ ಮಾಡುವಂತೆ ಮಾಡಲಿಲ್ಲ. ತನ್ನ ಅಡಿಯಲ್ಲಿ ಬಂದ ಸಾಂಸ್ಕೃತಿಕ ಬದಲಾವಣೆಯ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ವಿರಾಟ್ ಹೇಳಿದರು.
ಇದನ್ನೂ ಓದಿ:ಔರಂಗಾಬಾದ್ ಮತ್ತು ಒಸ್ಮಾನಾಬಾದ್ ನಗರಗಳ ಹೆಸರು ಬದಲಿಸಲು ಕೇಂದ್ರ ಒಪ್ಪಿಗೆ…ಹೊಸ ಹೆಸರೇನು?
“ನಾನು ಆ ದೃಷ್ಟಿಕೋನದಿಂದ ಯಾವತ್ತೂ ನನ್ನನ್ನು ನಾನು ಜಡ್ಜ್ ಮಾಡಿಲ್ಲ. ನಾವು ತಂಡವಾಗಿ ಸಾಧಿಸಿರುವುದು ಮತ್ತು ಸಾಂಸ್ಕೃತಿಕ ಬದಲಾವಣೆಯು ನನಗೆ ಯಾವತ್ತೂ ಹೆಮ್ಮೆಯ ವಿಚಾರ. ಒಂದು ಟೂರ್ನಮೆಂಟ್ ಕೆಲಸ ಸಮಯ ಮಾತ್ರ ಇರುತ್ತದೆ. ಆದರೆ ಒಂದು ಸಂಸ್ಕೃತಿಯು ದೀರ್ಘಕಾಲದವರೆಗೆ ನಡೆಯುತ್ತದೆ. ಅದಕ್ಕಾಗಿ ನಿಮಗೆ ಸ್ಥಿರತೆ ಬೇಕು” ಎಂದು ವಿರಾಟ್ ಹೇಳಿಕೊಂಡಿದ್ದಾರೆ.
“ನಾನು ಆಟಗಾರನಾಗಿ ಐಸಿಸಿ ಟ್ರೋಫಿ ಗೆದ್ದುಕೊಂಡಿದ್ದೇನೆ. ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದೇನೆ. ಐದು ಟೆಸ್ಟ್ ಪಂದ್ಯ ಗೆದ್ದ ತಂಡದ ಸದಸ್ಯನಾಗಿದ್ದೆ. ಈ ದಿಕ್ಕಿನಲ್ಲಿ ನೀವು ಯೋಚಿಸಿದರೆ, ವಿಶ್ವಕಪ್ ಗೆಲ್ಲದೇ ಇರುವ ಅದೆಷ್ಟೋ ಆಟಗಾರರಿದ್ದಾರೆ” ಎಂದು ದ್ಯಾನಿಶ್ ಸೇಠ್ ಜತೆ ಮಾತನಾಡುತ್ತಾ ವಿರಾಟ್ ಹೇಳಿದರು.