Advertisement
ನಾಯಕ ಕೊಹ್ಲಿ, ಮಾಜಿ ನಾಯಕ ಧೋನಿ, ತರಬೇತುದಾರ ರವಿಶಾಸ್ತ್ರಿ ಸೇರಿ ಬಿಸಿಸಿಐಯನ್ನು ಒತ್ತಾಯಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ ಬಿಸಿಸಿಐಯಲ್ಲಿ ಎ ದರ್ಜೆಯ ಗುತ್ತಿಗೆ ಹೊಂದಿರುವ ಆಟಗಾರರಿಗೆ 2 ಕೋಟಿ ರೂ. ನೀಡಲಾಗುತ್ತಿದೆ. ಬಿ ದರ್ಜೆಗೆ ಒಂದು ಕೋಟಿ ರೂ., ಸಿ ದರ್ಜೆಗೆ 50 ಲಕ್ಷ ರೂ. ವೇತನವಿದೆ. ಆದರೀಗ ವಿವಿಧ ನೇರ ಪ್ರಸಾರದ ಆದಾಯದಿಂದಲೇ 3,000 ಕೋಟಿ ರೂ.ಗೂ ಅಧಿಕ ಹಣ ಹರಿದು ಬರುತ್ತಿದೆ. ಇನ್ನು ಬೇರೆ ಬೇರೆ ಮೂಲಗಳಿಂದಲೂ ಬಿಸಿಸಿಐಗೆ ಕೋಟಿಗಟ್ಟಲೆ ಆದಾಯವಿದೆ. ಆದ್ದರಿಂದ ಕ್ರಿಕೆಟಿಗರು ವೇತನ ಹೆಚ್ಚಳಕ್ಕಾಗಿ ಮನವಿ ಸಲ್ಲಿಸುವುದರಲ್ಲಿ ತಪ್ಪೇನಿಲ್ಲ ಎಂದು ಕೆಲವು ಮೂಲಗಳು ಹೇಳಿವೆ. Advertisement
ಕ್ರಿಕೆಟಿಗರ ವೇತನ ಹೆಚ್ಚಳಕ್ಕೆ ಒತ್ತಾಯ
02:24 PM Nov 29, 2017 | |
Advertisement
Udayavani is now on Telegram. Click here to join our channel and stay updated with the latest news.