ಅಹಮದಾಬಾದ್: ಭಾನುವಾರ ಅಹಮದಾಬಾದ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ವಿಕೆಟ್ ಕೀಪರ್-ಬ್ಯಾಟರ್ ವೃದ್ಧಿಮಾನ್ ಸಹಾ 43 ಎಸೆತಗಳಲ್ಲಿ 81 ರನ್ ಗಳಿಸಿದ ನಂತರ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಅವರು ವೃದ್ಧಿಮಾನ್ ಸಹಾ ಅವರನ್ನು ಹೊಗಳಿದರು.
ವೃದ್ಧಿಮಾನ್ ಸಹಾ ಅವರ ಆಟವನ್ನು ಶ್ಲಾಘಿಸಿ ಕೊಹ್ಲಿ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದು, “ಎಂತಹ ಆಟಗಾರ” ಎಂದರು.
ಶುಭಮನ್ ಗಿಲ್ (ಔಟಾಗದೆ 94) ಮತ್ತು ವೃದ್ಧಿಮಾನ್ ಸಹಾ (81) ಅವರ ನೆರವಿನಿಂದ ಗುಜರಾತ್ ಟೈಟಾನ್ಸ್ 2 ವಿಕೆಟ್ ನಷ್ಟಕ್ಕೆ 227 ರನ್ ಪೇರಿಸಿತು. ಸಹಾ ಅವರು ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ವೇಳೆ ಸಹಾ ಟೈಟಾನ್ಸ್ ಇತಿಹಾಸದಲ್ಲಿ ವೇಗವಾಗಿ ಅರ್ಧಶತಕ ಗಳಿಸಿದರು.
ಸಹಾ ಮತ್ತು ಗಿಲ್ ಮತ್ತು ಮೊದಲ ವಿಕೆಟ್ ಗೆ 142 ರನ್ ಜೊತೆಯಾಟವಾಡಿದರು.