ದುಬೈ: ಐಸಿಸಿ ಟಿ20 ವಿಶ್ವಕಪ್ ಆರಂಭವಾಗಿದೆ. ಸೋಮವಾರ ಭಾರತ ತನ್ನ ಮೊದಲ ಅಭ್ಯಾಸ ಪಂದ್ಯವನ್ನಾಡಿದೆ. ಇಂಗ್ಲೆಂಡ್ ವಿರುದ್ದ ದುಬೈ ನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸುಲಭ ಗೆಲುವು ಸಾಧಿಸಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಆರಂಭಿಕರಾಗಿ ಕೆ.ಎಲ್.ರಾಹುಲ್ ಮತ್ತು ಇಶಾನ್ ಕಿಶನ್ ಕಣಕ್ಕಿಳಿದಿದ್ದರು. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿತ್ತು. ರಾಹುಲ್ ಮತ್ತು ಇಶಾನ್ ಇಬ್ಬರೂ ತಲಾ ಅರ್ಧಶತಕ ಬಾರಿಸಿ ಭಾರತದ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು.
ಐಪಿಎಲ್ ಆರಂಭಕ್ಕೂ ಮೊದಲು ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ನಲ್ಲಿ ತಾನೇ ರೋಹಿತ್ ಜೊತೆ ಆರಂಭಿಕನಾಗಿ ಆಡುತ್ತೇನೆ ಎಂದಿದ್ದರು. ಹೀಗಾಗಿ ಐಪಿಎಲ್ ನಲ್ಲೂ ವಿರಾಟ್ ಓಪನರ್ ಆಗಿ ಆಡಿದ್ದರು. ಆದರೆ ಇದೀಗ ಈ ಯೋಜನೆಯನ್ನು ಕೈಬಿಟ್ಟಿದ್ದು, ತಾನು ಮೂರನೇ ಕ್ರಮಾಂಕದಲ್ಲೇ ಆಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಫೆಬ್ರವರಿಯಲ್ಲಿ ವಿನಯ್ ರಾಜ್‌ಕುಮಾರ್ ರ ‘ಅಂದೊಂದಿತ್ತು ಕಾಲ’ ಚಿತ್ರ ಬಿಡುಗಡೆ
ಸೋಮವಾರ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಈ ಬಗ್ಗೆ ಹೇಳಿದ್ದಾರೆ. ಐಪಿಎಲ್ ಪ್ರದರ್ಶನದ ಬಳಿಕ ಕೆ ಎಲ್ ರಾಹುಲ್ ರನ್ನು ಕೈಬಿಡಲು ಅಸಾಧ್ಯವಾಗಿದೆ. ಹೀಗಾಗಿ ರೋಹಿತ್ ಜೊತೆಗೆ ಅವರೇ ಆರಂಭಿಕನಾಗಿ ಆಡಲಿದ್ದಾರೆ ಎಂದಿದ್ದಾರೆ. ಇಶಾನ್ ಕಿಶನ್ ಅವರು ಹೆಚ್ಚುವರಿ ಆರಂಭಿಕನಾಗಿರಲಿದ್ದಾರೆ.