ನವದೆಹಲಿ : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಗುರುವಾರ ಪ್ರಕಟಿಸಿದ್ದು, ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ,ಮತ್ತು ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.
ಜುಲೈ 29 ರಂದು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ T20 ಸರಣಿ ಆರಂಭವಾಗಲಿದೆ.
ತೊಡೆಸಂದು ಗಾಯದಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಂಡಿದ್ದ, ಕೊಹ್ಲಿ ಎರಡನೇ ಪಂದ್ಯಕ್ಕೂ ಅನಿಶ್ಚಿತರಾಗಿದ್ದಾರೆ.ಇನ್ನೊಂದೆಡೆ ಕಳಪೆ ಫಾರ್ಮ್ ಕೂಡ ಅವರನ್ನು ಕಾಡುತ್ತಿದೆ.
ತಂಡ ಇಂತಿದೆ
ರೋಹಿತ್ ಶರ್ಮಾ (ನಾಯಕ), ಐ ಕಿಶನ್, ಕೆಎಲ್ ರಾಹುಲ್*, ಸೂರ್ಯಕುಮಾರ್ ಯಾದವ್, ಡಿ ಹೂಡಾ, ಎಸ್ ಅಯ್ಯರ್, ಡಿ ಕಾರ್ತಿಕ್, ಆರ್ ಪಂತ್, ಎಚ್ ಪಾಂಡ್ಯ, ಆರ್ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಆರ್.ಬಿಷ್ಣೋಯ್, ಕುಲದೀಪ್ ಯಾದವ್
*, ಬಿ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
*ಕೆಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ಸೇರ್ಪಡೆ ಫಿಟ್ನೆಸ್ಗೆ ಒಳಪಟ್ಟಿರುತ್ತದೆ.