Advertisement

ಗೆರೆ ದಾಟಿಲ್ಲ: ವಿರಾಟ್‌ ಕೊಹ್ಲಿ

11:45 AM Dec 19, 2018 | |

ಪರ್ತ್‌: ದ್ವಿತೀಯ ಟೆಸ್ಟ್‌ ಪಂದ್ಯದ ವೇಳೆ ಆಸ್ಟ್ರೇಲಿಯ ತಂಡದ ನಾಯಕ ಟಿಮ್‌ ಪೇನ್‌ ಜತೆ ಮಾತಿನ ಸಮರ ನಡೆದಾಗ ವೈಯಕ್ತಿಕ ದಾಳಿ ಅಥವಾ ಕೆಟ್ಟ ಮಾತು ಆಡಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

Advertisement

ನಿಜ ಹೇಳಬೇಕೆಂದರೆ 2014ರ ಘಟನೆಗೆ ಹೋಲಿಸಿದರೆ ಇದು ಏನೂ ಅಲ್ಲ. ಮೈದಾನದಲ್ಲಿ ನಾವು ಕೆಟ್ಟ ಮಾತು ಆಡಿಲ್ಲ ಮತ್ತು ಯಾವುದೇ ವೈಯಕ್ತಿಕ ದಾಳಿ ನಡೆದಿಲ್ಲ. ನಾವು ಗೆರೆ ದಾಟಿಲ್ಲ, ಅಷ್ಟೇ ಎಂದು ಭಾರತೀಯ ತಂಡ 146 ರನ್ನುಗಳಿಂದ ಸೋತ ಬಳಿಕ ಹೇಳಿದರು. 4ನೇ ದಿನದ ಬೆಳಗ್ಗೆ ಕೊಹ್ಲಿ ಮತ್ತು ಪೇನ್‌ ನಡುವೆ ಮಾತಿನ ಸಮರ ನಡೆದಿತ್ತು. ಅಂಪಾಯರ್‌ ಕ್ರಿಸ್‌ ಗಫಾನಿ ಅವರಿಬ್ಬರ ಬಳಿ ತೆರಳಿ ಮಾತಿನ ಚಕಮಕಿ ಬಿಡಿಸಿದ್ದರು.

ಔಟಾದ ವೇಳೆ ನಾನು ಅಸಮಾಧಾನ ವ್ಯಕ್ತಪಡಿಸಿದ್ದೇನೆ ಎಂದು ಭಾವಿಸುವುದಿಲ್ಲ. ಆದರೆ ಔಟ್‌ನ ಬಗ್ಗೆ ಮನವಿ ಮಾಡಿದ್ದೇನೆ. ಅಷ್ಟೇ ಎಂದ ಕೊಹ್ಲಿ ಆಸ್ಟ್ರೇಲಿಯ ನಮಗಿಂತ ಉತ್ತಮ ಕ್ರಿಕೆಟ್‌ ಆಡಿದೆ ಮತ್ತು ಗೆಲ್ಲಲು ಅವರು ಅರ್ಹರಾಗಿದ್ದರು ಎಂದರು.

ಸಂಭ್ರಮಕ್ಕೆ ಆಹ್ವಾನ
ಕೊಹ್ಲಿ ನಡುವಣ ಮಾತಿನ ಸಮರವನ್ನು ಆಸ್ಟ್ರೇಲಿಯ ನಾಯಕ ಟಿಮ್‌ ಪೇನ್‌ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಮುಂದಿನ ಪಂದ್ಯಗಳ ವೇಳೆ ಇಂತಹ ಘಟನೆ ಮರುಕಳಿಸಿದಲ್ಲಿ ಸುಮ್ಮನೆ ಇರುವುದಿಲ್ಲ. ಹಾಗೆಯೇ ತಂಡದ ಸಂಪ್ರದಾಯ ವೆಂಬಂತೆ ಸರಣಿ ಮುಗಿದ ಬಳಿಕ ವಿಶ್ರಾಂತಿ ಕೊಠಡಿಯಲ್ಲಿ ಸಂಭ್ರಮ ಆಚರಿಸಲು ಭಾರತೀಯ ತಂಡಕ್ಕೆ ಆಹ್ವಾನ ನೀಡುವೆ ಎಂದಿದ್ದಾರೆ. ಕೊಹ್ಲಿ ಆಟವನ್ನು ಯಾವಾಗಲೂ ನೋಡಿ ಆನಂದಿಸುವೆ. ಅವರು ಬಹಳಷ್ಟು ಕ್ರಿಕೆಟಿಗರಲ್ಲಿ ಸ್ಪರ್ಧೆಯ ಸ್ಫೂರ್ತಿ ತುಂಬಿದವರಾಗಿದ್ದಾರೆ ಎಂದು ಪೇನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next