Advertisement

ಗೂಗಲ್ ನಲ್ಲಿ ಪಾಕ್ ನಲ್ಲಿ ಹೆಚ್ಚು ಹುಡುಕಾಡಲ್ಪಟ್ಟ ಭಾರತೀಯ ಕ್ರಿಕೆಟಿಗ

06:08 PM Dec 16, 2017 | Team Udayavani |

ಇಸ್ಲಾಮಾಬಾದ್: ಇದನ್ನು ನಂಬೋದು, ಬಿಡೋದು ನಿಮಗೆ ಬಿಟ್ಟಿದ್ದು! ಕಳೆದ ಒಂದು ವರ್ಷದಲ್ಲಿ ಭಾರತೀಯ ಕ್ರಿಕೆಟ್ ಕಪ್ತಾನ ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಅತೀ ಹೆಚ್ಚು ಸರ್ಜ್ ಗೊಳದ ಕ್ರಿಕೆಟಿಗ ಎಂದು ಗೂಗಲ್ ಟ್ರೆಂಡ್ಸ್ ತಿಳಿಸಿದೆ.

Advertisement

ಕ್ರಿಕೆಟ್ ಜಗತ್ತಿನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿರುವ ವಿರಾಟ್ ಕೊಹ್ಲಿ(29ವರ್ಷ) ಗೂಗಲ್ ನಲ್ಲಿ ಪಾಕಿಸ್ತಾನಿಯರು ಅತೀ ಹೆಚ್ಚು ಹುಡುಕಾಡಿದ್ದು ಕೊಹ್ಲಿಯನ್ನ!

ಗಡಿಭಾಗದ ಕ್ರಿಕೆಟಿಗರ ಜತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿರುವ ಕೆಲವೇ, ಕೆಲವು ಭಾರತೀಯ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಕೂಡಾ ಒಬ್ಬರು ಎಂದು ವರದಿ ತಿಳಿಸಿದೆ.

ಗೂಗಲ್ ನಲ್ಲಿ ಹೆಚ್ಚು ಸರ್ಚ್ ಗೊಳಗಾದ ಪಟ್ಟಿಯಲ್ಲಿ ಕೊಹ್ಲಿ ಮೊದಲಿಗನಾಗಿದ್ದರೆ, ನಂತರ ಪಾಕಿಸ್ತಾನ ತಂಡದ ಕಪ್ತಾನ, ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್, ವೇಗಿ ಮೊಹಮ್ಮದ್ ಅಮಿರ್ ಹಾಗೂ ಅಹ್ಮದ್ ಶೆಹಝಾದ್. ಕ್ರಿಕೆಟ್ ಜೀವನ ಆರಂಭಿಸಿದ್ದ ಸಂದರ್ಭದಲ್ಲಿ ಈ ಹಿಂದೆಯೂ ಹಾಗೂ ಈಗಲೂ ಪಾಕ್ ಕ್ರೆಕಿಟಿಗರೂ ಕೊಹ್ಲಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಇಟಲಿಯಲ್ಲಿ ಅನುಷ್ಕಾ ಶರ್ಮಾ ಜತೆ ವಿವಾಹವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next