Advertisement
ಬಾಂಗ್ಲಾ ವಿರುದ್ಧ ಕೋಲ್ಕತಾದಲ್ಲಿ ಆಡಲಾದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ 136 ರನ್ ಬಾರಿಸುವ ಮೂಲಕ ಕೊಹ್ಲಿ ತಮ್ಮ ರೇಟಿಂಗ್ ಅಂಕವನ್ನು 928ಕ್ಕೆ ಏರಿಸಿಕೊಂಡರು. ಇನ್ನೊಂದೆಡೆ ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ 36 ರನ್ ಮಾಡಿದ ಸ್ಮಿತ್ 923 ಅಂಕಗಳಿಗೆ ಕುಸಿದರು. ಈ ಪಂದ್ಯಕ್ಕೂ ಮುನ್ನ ಅವರು 931 ಅಂಕ ಹೊಂದಿದ್ದರು.ಟಾಪ್-10 ಬ್ಯಾಟಿಂಗ್ ಯಾದಿಯಲ್ಲಿ ರುವ ಭಾರತದ ಮತ್ತಿಬ್ಬರು ಆಟಗಾರ ರೆಂದರೆ ಚೇತೇಶ್ವರ್ ಪೂಜಾರ ಮತ್ತು ರಹಾನೆ. ಇವರಲ್ಲಿ ಪೂಜಾರ 4ನೇ ಸ್ಥಾನ ಉಳಿಸಿಕೊಂಡರೆ, ವಾರ್ನರ್ ಅಬ್ಬರದಿಂದಾಗಿ ರಹಾನೆ ಒಂದು ಸ್ಥಾನ ಕುಸಿತ ಕಂಡಿದ್ದಾರೆ (6).
ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಭರ್ಜರಿ ಪ್ರಗತಿ ಕಂಡವರೆಂದರೆ ಆಸ್ಟ್ರೇಲಿಯದ ವಾರ್ನರ್ ಮತ್ತು ಮಾರ್ನಸ್ ಲಬುಶೇನ್. ಅಡಿಲೇಡ್ ಟೆಸ್ಟ್‌ನಲ್ಲಿ ಅಮೋಘ ತ್ರಿಶತಕ ಬಾರಿಸಿದ ವಾರ್ನರ್ 12 ಸ್ಥಾನ ನೆಗೆದು 5ನೇ ಸ್ಥಾನಕ್ಕೆ ಬಂದಿದ್ದಾರೆ. ಹಾಗೆಯೇ ಪಾಕಿಸ್ಥಾನ ವಿರುದ್ಧದ ಸರಣಿಯಲ್ಲಿ ಸತತ 2 ಶತಕ ಬಾರಿಸಿದ ಮಾರ್ನಸ್ ಲಬುಶೇನ್ ಮೊದಲ ಸಲ ಟಾಪ್-10 ಯಾದಿಯನ್ನು ಪ್ರವೇಶಿಸಿದರು (8). ಈ ವರ್ಷದ ಆರಂಭದಲ್ಲಿ ಲಬುಶೇನ್ 110ರಷ್ಟು ಕೆಳಸ್ಥಾನದಲ್ಲಿದ್ದರು. ನ್ಯೂಜಿಲ್ಯಾಂಡ್ ಎದುರಿನ ದ್ವಿತೀಯಟೆಸ್ಟ್ ಪಂದ್ಯದಲ್ಲಿ ದ್ವಿಶತಕ ದಾಖಲಿಸುವ ಮೂಲಕ ಇಂಗ್ಲೆಂಡಿನ ನಾಯಕ ಜೋ ರೂಟ್ ಮರಳಿ ಅಗ್ರ ಹತ್ತರಲ್ಲಿ ಕಾಣಿಸಿಕೊಂಡರು.
Related Articles
ಬೌಲಿಂಗ್ ವಿಭಾಗದ ನಂಬರ್ ವನ್ ಪಟ್ಟವನ್ನು ಪ್ಯಾಟ್ ಕಮಿನ್ಸ್ ಉಳಿಸಿಕೊಂಡಿದ್ದಾರೆ. ಈ ಆಸೀಸ್ ವೇಗಿ ಖಾತೆಯಲ್ಲಿ ಭರ್ತಿ 900 ಅಂಕ ಇದೆ.
Advertisement
ಟಾಪ್-10 ಯಾದಿಯಲ್ಲಿರುವ ಭಾರತದ ಮೂವರು ಬೌಲರ್‌ಗಳೆಂದರೆ ಜಸ್‌ಪ್ರೀತ್ ಬುಮ್ರಾ (5), ಆರ್. ಅಶ್ವಿನ್ (9), ಮೊಹಮ್ಮದ್ ಶಮಿ (10). ಜಾಸನ್ ಹೋಲ್ಡರ್ ಜೀವನಶ್ರೇಷ್ಠ 830 ಅಂಕಗಳೊಂದಿಗೆ 3ನೇ ಸ್ಥಾನಿಯಾಗಿದ್ದಾರೆ. ಜತೆಗೆ ನಂ.1 ಆಲ್‌ರೌಂಡರ್ ಸ್ಥಾನವನ್ನೂ ಗಟ್ಟಿ ಗೊಳಿಸಿದ್ದಾರೆ. ಆಲ್‌ರೌಂಡರ್‌ಗಳ ಅಗ್ರ ಐದರ ಯಾದಿಯಲ್ಲಿರುವ ಭಾರತೀಯರೆಂದರೆ ರವೀಂದ್ರ ಜಡೇಜ (2) ಮತ್ತು ಆರ್. ಅಶ್ವಿನ್ (5).
ಮೂರರಲ್ಲೂ ನಂ.1 ಆಗುವರೇ ಕೊಹ್ಲಿ?ಕೊಹ್ಲಿ ಈಗ ಏಕದಿನ ಹಾಗೂ ಟೆಸ್ಟ್‌ನಲ್ಲಿ ನಂ.1 ಆಗಿದ್ದಾರೆ. ಟಿ20ಯಲ್ಲೂ ಅಗ್ರಸ್ಥಾನಕ್ಕೇರುವು ದೊಂದು ಬಾಕಿ ಇದೆ. ಏಕಕಾಲದಲ್ಲಿ ಕ್ರಿಕೆಟಿನ ಮೂರು ಮಾದರಿಗಳಲ್ಲಿ ಈ ಎತ್ತರಕ್ಕೇರಿದರೆ ಅದು ಕ್ರಿಕೆಟಿನ ವಿಶಿಷ್ಟ ದಾಖಲೆ ಎನಿಸಲಿದೆ.