Advertisement

ಆರ್ ಸಿಬಿ ನಾಯಕತ್ವಕ್ಕೆ ವಿದಾಯ ಹೇಳಿದ ಹಿಂದಿನ ಕಾರಣ ನೀಡಿದ ವಿರಾಟ್ ಕೊಹ್ಲಿ

04:20 PM Feb 24, 2022 | Team Udayavani |

ಬೆಂಗಳೂರು: ಕಳೆದ ಸೀಸನ್ ನ ಐಪಿಎಲ್ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದ ಹಿಂದೆ ಯಾವುದೇ ದುಗುಡ ಇರಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

Advertisement

ಆರ್ ಸಿಬಿ ಪಾಡ್ ಕಾಸ್ಟ್ ನಲ್ಲಿ ಮಾತನಾಡಿರುವ ಅವರು, ಆರ್ ಸಿಬಿ ನಾಯಕತ್ವ ತೊರೆಯುವ ನಿರ್ಧಾರವು ಸರಳ ಮತ್ತು ನೇರವಾಗಿತ್ತು. ಕೆಲಸದ ಹೊರೆಯನ್ನು ಕಡಿಮೆ ಮಾಡಲು ಈ ನಿರ್ಧಾರ ಮಾಡಲಾಗಿತ್ತು ಎಂದಿದ್ದಾರೆ.

ಕ್ರಿಕೆಟಿಗರು ತೆಗೆದುಕೊಳ್ಳುವ ನಿರ್ಧಾರಗಳನ್ನು ಹೊರಗಿನ ಜನರು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ ಎಂದು ಕೊಹ್ಲಿ ಹೇಳಿದರು. ಅಲ್ಲದೆ ಅವರ ನಿರ್ಧಾರದ ಸುತ್ತಲಿನ ಊಹಾಪೋಹಗಳನ್ನು ತಳ್ಳಿಹಾಕಿದರು.

ಆರ್‌ಸಿ ಬಿ ಸ್ಟಾರ್ ಆಟಗಾರ ವಿರಾಟ್, ಕಳೆದ ವರ್ಷ ಭಾರತದ ಟಿ 20 ನಾಯಕನ ಸ್ಥಾನವನ್ನು ತೊರೆದರು, ನಂತರ ಅವರನ್ನು ಏಕದಿನ ನಾಯಕತ್ವದಿಂದ ವಜಾಗೊಳಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 1-2 ಅಂತರದಿಂದ ಸೋತ ನಂತರ ವಿರಾಟ್ ಕೊಹ್ಲಿ ಅನಿರೀಕ್ಷಿತ ನಡೆಯಲ್ಲಿ ಭಾರತದ ಟೆಸ್ಟ್ ನಾಯಕತ್ವವನ್ನೂ ತ್ಯಜಿಸಿದ್ದರು.

ಇದನ್ನೂ ಓದಿ:ಉಕ್ರೇನ್ ಮೇಲ್ಯಾಕೆ ರಷ್ಯಾ ಕಣ್ಣು? ವಿವಾದದ ಮೂಲವೇನು? NATO ಕಂಡರೆ ಪುಟಿನ್ ಗೆ ಯಾಕೆ ಉರಿ?

Advertisement

“ನಾನು ನನಗಿಂತ ಹೆಚ್ಚು ವಿಷಯಗಳನ್ನು ಹಿಡಿದಿಟ್ಟುಕೊಳ್ಳುವವನಲ್ಲ. ನಾನು ಹೆಚ್ಚಿನ ಒತ್ತಡ ನಿಭಾಯಿಸಬಲ್ಲೆ ಎಂದು ನನಗೆ ತಿಳಿದಿದ್ದರೂ, ನಾನು ಆ ನಡುವಿನ ಪ್ರಕ್ರಿಯೆಯನ್ನು ಆನಂದಿಸಲು ಹೋಗದಿದ್ದರೆ, ಯಾವುದೇ ಕೆಲಸ ಮಾಡಲು ಹೋಗುವುದಿಲ್ಲ” ಎಂದು ಕೊಹ್ಲಿ ಹೇಳಿದರು.

ತನ್ನ ನಿರ್ಧಾರದ ಬಗ್ಗೆ ಜನರ ಮಾತನ್ನು ತಳ್ಳಿಹಾಕಿದ ಕೊಹ್ಲಿ, “ವಾಸ್ತವವಾಗಿ ಏನೂ ಇರಲಿಲ್ಲ. ನಾನು ನನ್ನ ಜೀವನವನ್ನು ತುಂಬಾ ಸರಳ ಇಟ್ಟುಕೊಳ್ಳುತ್ತೇನೆ, ನಾನು ನಿರ್ಧಾರ ತೆಗೆದುಕೊಳ್ಳಬೇಕೆಂದು ಬಯಸಿದಾಗ ತೆಗೆದುಕೊಂಡೆ ಮತ್ತು ಅದನ್ನು ಘೋಷಿಸಿದ್ದೇನೆ ಅಷ್ಟೇ” ಎಂದು ವಿರಾಟ್ ಹೇಳಿದರು.

ವಿರಾಟ್ ರಾಜೀನಾಮೆಯಿಂದ ತೆರವಾಗಿರುವ ಆರ್ ಸಿಬಿ ನಾಯಕತ್ವ ಸ್ಥಾನಕ್ಕೆ ಸದ್ಯ ಯಾರನ್ನೂ ನೇಮಿಸಲಾಗಿಲ್ಲ. ಗ್ಲೆನ್ ಮ್ಯಾಕ್ಸ್ ವೆಲ್ ಅಥವಾ ಫಾಫ್ ಡುಪ್ಲೆಸಿಸ್ ತಂಡದ ಚುಕ್ಕಾಣಿ ಹಿಡಿಯಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next