Advertisement

ಗಾಲೆ ಟೆಸ್ಟ್‌: ಲಂಕಾ 291ಕ್ಕೆ ಆಲೌಟ್‌; ಭಾರತ ಲೀಡ್‌ 498 ರನ್‌

06:52 PM Jul 28, 2017 | Team Udayavani |

ಗಾಲೆ : ಇಲ್ಲೀಗ ಸಾಗುತ್ತಿರುವ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ, ಮಳೆ ಅಡಚಣೆಗೆ ಗುರಿಯಾದ ಇಂದಿನ ಮೂರನೇ ದಿನ, ಪ್ರವಾಸಿ ಭಾರತ ತಂಡ ಲಂಕೆಯ ಇನ್ನಿಂಗ್ಸ್‌ ಆಟವನ್ನು 291 ರನ್‌ಗಳಿಗೆ ಕೊನೆಗೊಳಿಸಿ ಆ ಮೂಲಕ 309 ರನ್‌ಗಳ ಪ್ರಥಮ ಇನ್ನಿಂಗ್ಸ್‌ ಲೀಡ್‌ ಪಡೆಯಿತು. 

Advertisement

ಹಾಗಿದ್ದರೂ ಲಂಕೆಗೆ ಫಾಲೋ ಆನ್‌ ವಿಧಿಸದೆ ಎರಡನೇ ಇನ್ನಿಂಗ್ಸ್‌ ಆಟವಾಡಿದ ಭಾರತ ದಿನಾಂತ್ಯಕ್ಕೆ ಮೂರು ವಿಕೆಟ್‌ ನಷ್ಟಕ್ಕೆ  189 ರನ್‌ ಮಾಡಿ ತನ್ನ ಒಟ್ಟಾರೆ ಲೀಡನ್ನು 498 ರನ್‌ಗಳಿಗೆ ಏರಿಸಿಕೊಂಡಿತು. ಭಾರತ ಮೊದಲ ಇನ್ನಿಂಗ್ಸ್‌ ನಲ್ಲಿ 600 ರನ್‌ಗಳ ಬೃಹತ್‌ ಮೊತ್ತವನ್ನು ಕಲೆ ಹಾಕಿತ್ತು.

ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ  ನಾಯಕ ವಿರಾಟ್‌ ಕೊಹ್ಲಿ  ಗಳಿಸಿದ ಅಜೇಯ 76 ರನ್‌ ಹಾಗೂ ಅಭಿನವ್‌ ಮುಕುಂದ್‌ ಗಳಿಸಿದ 81 ರನ್‌ಗಳು ಭಾರತದ ಲೀಡನ್ನು 498 ರನ್‌ಗೆ ಏರಿಸಲು ಕಾರಣವಾದವು. 

ಭಾರತ ಈಗ ಅತ್ಯಂತ ಸುಭದ್ರ ಸ್ಥಿತಿಯಲ್ಲಿದ್ದು  ಪಂದ್ಯ ಗೆಲವಿನ ಹೊಸ್ತಿಲಲ್ಲಿದೆ ಎನ್ನಬಹುದು. 

Advertisement

Udayavani is now on Telegram. Click here to join our channel and stay updated with the latest news.

Next