ಭಾರತ ತಂಡದ ನಾಯಕ, ರನ್ ಮೆಷಿನ್ ವಿರಾಟ್ ಕೊಹ್ಲಿ ಪ್ರತೀ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆ ಬರೆಯುತ್ತಾರೆ. ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ವಿರಾಟ್ ತನ್ನ ಏಕದಿನ ಶತಕಗಳ ಸಂಖ್ಯೆಯನ್ನು 42ಕ್ಕೇರಿಸಿದ್ದಾರೆ.
ಅಂದಹಾಗೆ ಭಾರತದ ಮಾಜಿ ಆಟಗಾರರೋರ್ವರು ವಿರಾಟ್ ಕೊಹ್ಲಿ ಕಡಿಮೆಯೆಂದರೂ 75 ರಿಂದ 80 ಶತಕ ಬಾರಿಸುತ್ತಾರೆ ಎಂದು ಹೇಳಿದ್ದಾರೆ. ಹಾಗೆ ಹೇಳಿದವರು ಬೇರಾರು ಅಲ್ಲ ಮಾಜಿ ಆಟಗಾರ ವಾಸೀಂ ಜಾಫರ್.
ಕಳೆದ ಇನ್ನಿಂಗ್ಸ್ ಗಳಲ್ಲಿ ಅಬ್ಬರಿಸಿರದ ಕೊಹ್ಲಿ ರವಿವಾರ ವಿಂಡೀಸ್ ವಿರುದ್ಧ ಭರ್ಜರಿ ಶತಕ ಬಾರಿಸಿ ಮಿಂಚಿದ್ದರು. ವಿಶ್ವಕಪ್ ನಲ್ಲಿ ಕೆಲವು ಅರ್ಧ ಶತಕ ಮಾತ್ರ ಬಾರಿಸಿದ್ದ ಕೊಹ್ಲಿ ಶತಕ ಬಾರಿಸಿರಲಿಲ್ಲ.
ʼʼ11 ಇನ್ನಿಂಗ್ಸ್ ಗಳ ಒಂದು ಬ್ರೇಕ್ ನ ನಂತರ ಕೊಹ್ಲಿ ತಮ್ಮ ಮಾಮೂಲಿ ಕೆಲಸವನ್ನು ಆರಂಭಿಸಿದ್ದಾರೆ. ಕೊಹ್ಲಿ ಕಡಿಮೆಯೆಂದರೂ 75 ರಿಂದ 80 ಶತಕ ಹೊಡೆಯುತ್ತಾರೆ “ ಎಂದು ವಾಸೀಂ ಜಾಫರ್ ಕೊಹ್ಲಿ ಶತಕವನ್ನು ವರ್ಣಿಸಿದ್ದಾರೆ.
ವಿರಾಟ್ ಕೊಹ್ಲಿ ಈಗ ಒಟ್ಟು ಶತಕದ ಪಟ್ಟಿಯಲ್ಲಿಎರಡನೇ ಸ್ಥಾನದಲ್ಲಿದ್ದಾರೆ. 49 ನೇ ಶತಕದೊಂದಿಗೆ ಮಾಸ್ಟರ್ ಬ್ಲಾಸ್ಟರ್ ಮೊದಲ ಸ್ಥಾನದಲ್ಲಿದ್ದಾರೆ.