ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ವಿಶಿಷ್ಟ ದಾಖಲೆಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ. ಬರೋಬ್ಬರಿ 100 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದುವ ಮೂಲಕ, ಇನ್ಸ್ಟಾದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಸೋಮವಾರ(ಮಾ.1) ಕೊಹ್ಲಿ ಇನ್ ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 10 ಕೋಟಿ ದಾಟಿದ್ದು, ಈ ಸಾಧನೆ ಮಾಡಿದ ಮೊದಲ ಅಂತರಾಷ್ಟ್ರೀಯ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಕೊಹ್ಲಿಯ ವಿಶಿಷ್ಟ ದಾಖಲೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕೂಡ ಅಭಿನಂದನೆ ತಿಳಿಸಿದೆ.
ಅತೀ ಹೆಚ್ಚು ಫಾಲೋವರ್ಸ್ ಸಂಖ್ಯೆ ಹೊಂದಿರುವ ಕ್ರೀಡಾತಾರೆಗಳ ಪಟ್ಟಿಯಲ್ಲಿ ಪೋರ್ಚುಗಲ್ ನ ಕ್ರಿಶ್ಚಿಯಾನೊ ರೊನಾಲ್ಡೋ (26.6 ಕೋಟಿ) ಮೊದಲ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ಅರ್ಜೆಂಟಿನಾದ ಲಿಯೊನಲ್ ಮೆಸ್ಸಿ(18.7 ಕೋಟಿ), ಬ್ರೆಜಿಲ್ ನ ನೆಯ್ಮರ್ (14.7) ಇದ್ದಾರೆ. ‘
ಪಾಪ್ ಸ್ಟಾರ್ ಡಮಿ ಲೆವೆಟೋ (9.9 ಕೋಟಿ). ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್( 9.5 ಕೋಟಿ) ಬಾರ್ಸಿಲೋನಾ ಎಫ್. ಸಿ(9.4 ಕೋಟಿ) ಫಾಲೋವರ್ಸ್ ಹೊಂದಿದ್ದು, ಇದೀಗ ವಿರಾಟ್ ಕೊಹ್ಲಿ ಇವರನ್ನು ಹಿಂದಿಕ್ಕಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇನ್ ಸ್ಟಾಗ್ರಾಂ ನಲ್ಲಿ 60.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.