Advertisement

ವಿರಾಟ್‌ ಕೊಹ್ಲಿ ಮೈಯಲ್ಲಿರುವ ನವ ಟ್ಯಾಟು ಗುಟ್ಟು

03:25 AM Nov 03, 2018 | |

ವಿರಾಟ್‌ ಕೊಹ್ಲಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಬೇರೆ ಬೇರೆ ಕಾರಣಕ್ಕಾಗಿ ಕೊಹ್ಲಿ ಇಷ್ಟಪಡುತ್ತಾರೆ. ಕೆಲವರಿಗೆ ಕೊಹ್ಲಿಯ ಬ್ಯಾಟಿಂಗ್‌ ಇಷ್ಟ. ಮತ್ತೆ ಕೆಲವರಿಗೆ ಕೊಹ್ಲಿಯ ನಾಯಕತ್ವ ಇಷ್ಟ. ಇನ್ನೂ ಕೆಲವರಿಗೆ ಕೊಹ್ಲಿಯ ಹೇರ್‌ಸ್ಟೈಲ್‌ ಮತ್ತು ಗಡ್ಡ ಇಷ್ಟವಂತೆ. ಮತ್ತೂ ಕೆಲವರಿಗೆ ಕೊಹ್ಲಿಯ ಟ್ಯಾಟು ಇಷ್ಟವಂತೆ. ಹೌದು, ಕ್ರಿಕೆಟ್‌ ಹೊರತಾಗಿಯೂ ಕೊಹ್ಲಿ ಅತ್ಯಂತ ಸ್ಟೈಲಿಶ್‌. ಮೈಯಲ್ಲಿ ಕಲರ್‌…ಕಲರ್‌ ಟ್ಯಾಟು ಹಾಕಿಸಿಕೊಳ್ಳುವುದೆಂದರೆ ಕೊಹ್ಲಿಗೆ ಅಚ್ಚುಮೆಚ್ಚು. ಅವರ ಮೈಯಲ್ಲಿರುವ ಒಂದೊಂದು ಟ್ಯಾಟು ಒಂದೊಂದು ಕಥೆ ಹೇಳುತ್ತದೆ. ಒಟ್ಟಾರೆ ಕೊಹ್ಲಿ ಮೈಯಲ್ಲಿ 9 ಟ್ಯಾಟು ಇದ್ದು ಇದರ ಬಗೆಗಿನ ಪರಿಚಯ ಇಲ್ಲಿದೆ ನೋಡಿ..

Advertisement

ಕೊಹ್ಲಿ 9 ಟ್ಯಾಟು ಕಥೆ

ತೋಳಿನಲ್ಲಿ ತಂದೆ-ತಾಯಿ


ಕೊಹ್ಲಿ ತಮ್ಮ ತೋಳಿನಲ್ಲಿ ತಂದೆ ಪ್ರೇಮ್‌ ಹಾಗೂ ತಾಯಿ ಸರೋಜಾ ಹೆಸರನ್ನು ಹಾಕಿಸಿಕೊಂಡಿದ್ದಾರೆ. ಪ್ರೇಮ್‌ ಅವರು ಕೊಹ್ಲಿಗೆ 18 ವರ್ಷ ತುಂಬಿದ್ದಾಗ ಸಾವನ್ನಪ್ಪಿದ್ದರು. 

ಪರಮೇಶ್ವರನ ಭಕ್ತಿ
ಶಿವನಿಗೆ ಸೃಷ್ಠಿಯ ನಾಶ ಮಾಡುವ ಸಾಮರ್ಥ್ಯವಿದೆ. ಅಂತೆಯೆ ಕೊಹ್ಲಿ ಕೂಡ ತಮ್ಮ ಎದುರಾಳಿಯನ್ನು ನಾಶ ಮಾಡುವ ಸಂಕಲ್ಪ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಶಿವನ ಚಿತ್ರವನ್ನು ಕೈಯಲ್ಲಿ ಹಾಕಿಸಿಕೊಂಡಿದ್ದಾರೆ. 

Advertisement

ಮಠದ ಮೇಲೆಯೂ ಪ್ರೀತಿ
ಎಡಗೈನಲ್ಲಿ ಕೊಹ್ಲಿ ಮಠದ ಚಿತ್ರ ಬರೆಸಿಕೊಂಡಿದ್ದಾರೆ. ಕೋಪ ಬಂದಾಗ ಕೊಹ್ಲಿಯನ್ನು ಶಾಂತಗೊಳಿಸಲು ಹಾಗೂ ಕ್ರಿಕೆಟ್‌ನಲ್ಲಿ ಮುಂದುವರಿಯಲು ಮಠದ ಟ್ಯಾಟು ಸಹಾಯ ಮಾಡುತ್ತದೆಯಂತೆ.

ಏಕದಿನ, ಟೆಸ್ಟ್‌ ಪಾದಾರ್ಪಣೆ ನಂಬರ್‌
 ವಿರಾಟ್‌ ಕೊಹ್ಲಿ 2008ರಲ್ಲಿ ಲಂಕಾ ವಿರುದ್ಧ 175ನೇ ಏಕದಿನ ಕ್ರಿಕೆಟಿಗನಾಗಿ ಹಾಗೂ 2011ರಲ್ಲಿ ಕಿಂಗ್‌ಸ್ಟನ್‌ನಲ್ಲಿ ವಿಂಡೀಸ್‌ ವಿರುದ್ಧ 269ನೇ ಟೆಸ್ಟ್‌ ಕ್ರಿಕೆಟಿಗನಾಗಿ ಪಾದಾರ್ಪಣೆ ಮಾಡಿದ್ದರು. ಈ ನೆನಪಿಗೆ ಪಾದಾರ್ಪಣೆ ಸಂಖ್ಯೆಯನ್ನು ಹಾಕಿಸಿಕೊಂಡಿದ್ದಾರೆ. 

 ಬುಡಕಟ್ಟು ಕಲೆ: ಕೊಹ್ಲಿ ಹಾಕಿಸಿಕೊಂಡಿದ್ದ ಮೊದಲ ಟ್ಯಾಟು ಇದು. ತಮ್ಮ ಆಕ್ರಮಣಕಾರಿ ಪ್ರದರ್ಶನ ಹಾಗೂ ಬುಡಕಟ್ಟು ಜನಾಂಗದ ಕಲೆ ಬಗೆಗಿನ ಗೌರವದಿಂದ ಹಾಕಿಸಿಕೊಂಡಿದ್ದಾರೆ. 

ಸ್ಕಾರ್ಫಿಯೊ ಕೊಹ್ಲಿ ರಾಶಿ:  ಕೊಹ್ಲಿ ನ.5ಕ್ಕೆ ಜನನಗೊಂಡವರಾಗಿದ್ದಾರೆ. ರಾಶಿ ಪ್ರಕಾರ ಚಿಹ್ನೆ ಸ್ಕಾರ್ಫಿಯೊ. ಹೀಗಾಗಿ ಸ್ಕಾರ್ಫಿಯೋ ಎಂದು ಬರೆಸಿಕೊಂಡಿದ್ದಾರೆ. 

 ಜಪಾನಿ ಸಮರ ಕಲೆ ಅಭಿಮಾನಿ: ಜಪಾನ್‌ನ ಸಮರ ಕಲೆ ಸಮುರಾಯ್‌ ಮೇಲೆ ಕೊಹ್ಲಿಗೆ ತುಂಬಾ ಅಭಿಮಾನ.  ಕಲೆಯ ನೆನಪಿಗಾಗಿ ಕೊಹ್ಲಿ ಟ್ಯಾಟು ಹಾಕಿಸಿಕೊಂಡಿದ್ದಾರೆ. 

ದೇವರ ಕಣ್ಣು: ಏನೇ ಆದರು ಪರವಾಗಿಲ್ಲ, ಯಾರು ಏನು ಅಂದರು ಚಿಂತಿಸಬೇಕಿಲ್ಲ. ಸರಿತಪ್ಪು ಎಲ್ಲವನ್ನು ನೋಡುವ ಭಗವಂತನೊಬ್ಬನಿದ್ದಾನೆ ಎನ್ನುವ ತತ್ವವನ್ನು ಕೊಹ್ಲಿ ಪಾಲಿಸುತ್ತಿರುವ ಪ್ರತೀಕದ ಟ್ಯಾಟು. 

 ಓಂಕಾರ ಪ್ರೇಮ: ಓಂ ಎನ್ನುವ ಪದ ವಿಶ್ವದೆಲ್ಲೆಡೆ ಪ್ರತಿಫ‌ಲಿಸಬೇಕು. ಜೀವನದ ತತ್ವವಾಗಿರಬೇಕು ಎನ್ನುವುದರ ಸಂದೇಶ ಸಾರುವ ಟ್ಯಾಟು ಇದು. 

Advertisement

Udayavani is now on Telegram. Click here to join our channel and stay updated with the latest news.

Next