ಬೆಂಗಳೂರು: 2020ರ ಐಪಿಎಲ್ ಕೆಲ ತಿಂಗಳ ಹಿಂದೆಯಷ್ಟೇ ಕೊನೆಗೊಂಡಿತ್ತು. ಅದಾಗಲೇ 2021 ರ ಐಪಿಎಲ್ ಗೆ ಭರ್ಜರಿ ತಯಾರಿ ನಡೆಯುತ್ತಿದ್ದು ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಾರೆಲ್ಲಾ ಆಡಲಿದ್ದಾರೆ ಎಂಬ ಕುತೂಹಲಕ್ಕೆ ತೆರಬಿದ್ದಿದೆ. 12 ಮಂದಿ ಆಟಗಾರರ ಪಟ್ಟಿಯನ್ನು ಬೆಂಗಳೂರು ಫ್ರಾಂಚೈಸಿ ಬಿಡುಗಡೆಗೊಳಿಸಿದೆ.
ವಿರಾಟ್ ಕೊಹ್ಲಿಯೇ ಈ ಬಾರಿಯೂ ಬೆಂಗಳೂರು ತಂಡವನ್ನು ಮುನ್ನಡೆಸಲಿದ್ದಾರೆ. 2020ರಲ್ಲಿ ತಂಡದಲ್ಲಿ ಗುರುತಿಸಿಕೊಂಡಿದ್ದ ಬಹುತೇಕರು 2021ರಲ್ಲೂ ಮುಂದುವರೆಯಲಿದ್ದಾರೆ. ಎಬಿ ಡಿವಿಲಿಯರ್ಸ್, ಯಜುವೇಂದ್ರ ಚಹಾಲ್, ದೇವದತ್ತ್ ಪಡಿಕಲ್, ಪವನ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಆ್ಯಡಂ ಝಾಂಪಾ, ಶಹಬಾಜ್ ಆಹಮ್ಮದ್, ಜೋಶ್ ಫಿಲಿಫ್, ಕೇನ್ ರಿಚರ್ಡ್ ಸನ್, ದೇವದತ್ತ್ ಪಡಿಕಲ್, ಪವನ್ ದೇಶಪಾಂಡೆ ತಂಡದಲ್ಲಿದ್ದಾರೆ.
2020ರ ತಂಡದಲ್ಲಿದ್ದ, ಕ್ರಿಸ್ ಮೋರಿಸ್, ಆ್ಯರನ್ ಫಿಂಚ್, ಮೋಯಿನ್ ಆಲಿ, ಇಸುರು ಉಡಾನ, ಡೇಲ್ ಸ್ಟೇನ್, ಶಿವಂ ದುಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಸಿಂಗ್ ಮನ್, ಪಾರ್ಥಿವ್ ಪಟೇಲ್ ಹೆಸರು ಬೆಂಗಳೂರು ತಂಡದ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
Related Articles
ಇನ್ನು 2021ರ ಐಪಿಎಲ್ ಗೆ ಬೆಂಗಳೂರು ತಂಡಕ್ಕೆ ಡೇನಿಯಲ್ ಸ್ಯಾಮ್ಸ್ ಹಾಗೂ ಹರ್ಷಲ್ ಪಟೇಲ್ ಸೇರ್ಪಡೆಗೊಂಡಿದ್ದಾರೆ.