Advertisement

ಕೊಹ್ಲಿಯ ಉದ್ವೇಗವೇ ರೋಹಿತ್‌ ಪಟ್ಟದ ಹಿಂದಿನ ರಹಸ್ಯ

02:35 PM Dec 28, 2021 | Team Udayavani |

ಅದು 2018, ಸೆ.28ರ ಮಾತು. ಭಾರತ ರೋಹಿತ್‌ ಶರ್ಮ ಅವರ ಹಂಗಾಮಿ ನಾಯಕತ್ವದಲ್ಲಿ ಬಾಂಗ್ಲಾ ವನ್ನು ಸೋಲಿಸಿ ಏಷ್ಯಾ ಕಪ್‌ ಗೆದ್ದಿತ್ತು. ಆಗ ಮಾತ ನಾಡಿದ್ದ ರೋ ಹಿತ್‌, ತಾನು ಧೋನಿಯಿಂದ ಶಾಂತ ಸ್ವಭಾವವನ್ನು ಕಲಿತ್ತಿ ದ್ದೇನೆ. ಅವಕಾಶ ಬಂದಾಗ ನಾಯಕತ್ವ ವಹಿಸಲು ಪೂರ್ಣ ಸಿದ್ಧ ಎಂದಿದ್ದರು. ಆಗಲೇ ಅವರು ತಾನು ಪಟ್ಟದ ಮೇಲೆ ದೃಷ್ಟಿ ನೆಟ್ಟಿದ್ದೇನೆ ಎಂದು ಸ್ಪಷ್ಟವಾಗಿ ಸೂಚಿಸಿ ದ್ದರು. ಮುಂದೆ ಅವರು ಮುಂಬೈ ನಾಯಕನಾಗಿ ಐದು ಬಾರಿ ಐಪಿಎಲ್‌ ಟ್ರೋಫಿ ಗೆದ್ದು ತಮ್ಮ ಶಾಂತಶಕ್ತಿಯನ್ನು ಜಗತ್ತಿನೆದುರು ತೆರೆದಿಟ್ಟರು. ಇನ್ನೊಂದು ಕಡೆ ಕೊಹ್ಲಿ ಒಮ್ಮೆಯೂ ಐಪಿಎಲ್‌ ಟ್ರೋಫಿ ಗೆದ್ದಿಲ್ಲ, ಜತೆಗೆ ತಮ್ಮ ಉದ್ವೇಗವನ್ನೂ ಕಳೆದುಕೊಂಡಿಲ್ಲ!

Advertisement

2015, ಜೂನ್‌ ತಿಂಗಳಲ್ಲಿ ಧೋನಿ ನಾಯಕತ್ವದಲ್ಲಿ ಭಾರತ, ಬಾಂಗ್ಲಾ ಪ್ರವಾಸ ಮಾಡಿತ್ತು. ಅಲ್ಲಿ 2-1ರಿಂದ ಸೋತು ಹೋಗಿ ಎಲ್ಲ ಕಡೆಯಿಂದ ಅವಮಾನಕ್ಕೆ ತುತ್ತಾ ಗಿತ್ತು. ಈ ಪ್ರವಾಸದ ವೇಳೆ ಧೋನಿ-ಕೊಹ್ಲಿ ಸಂಬಂಧ ಹಳಸಿದೆ ಎಂದು ದೊಡ್ಡ ಸುದ್ದಿಯಾಗಿತ್ತು. ಸ್ವತಃ ಧೋನಿ-ಕೊಹ್ಲಿಯ ಕೋಚ್‌ಗಳು ಪರವಿರೋಧ ಹೇಳಿಕೆ ನೀಡಿದ್ದರು. ಅಲ್ಲದೇ ಕೊಹ್ಲಿ ಕೂಡ ಡ್ರೆಸ್ಸಿಂಗ್‌ ಕೊಠಡಿ ಯಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದಿದ್ದರು. ಅದು ಪರೋಕ್ಷವಾಗಿ ಧೋನಿ ವಿರುದ್ಧ ನಡೆಸಿದ್ದ ದಾಳಿ ಎನ್ನುವುದು ವಿಶ್ಲೇಷಣೆ.

ಈ ವಿಷಯ ಇಲ್ಲಿಗೇ ನಿಲ್ಲುವುದಿಲ್ಲ. 2015ರ ಏಕದಿನ ವಿಶ್ವಕಪ್‌ ವೇಳೆ ಕೊಹ್ಲಿ ಪತ್ರಕರ್ತರೊಬ್ಬರಿಗೆ ಬಾಯಿಗೆ ಬಂದಂತೆ ಬೈದಿದ್ದರು. ಒಂದು ಸಣ್ಣ ಅಪಾರ್ಥ ಅದಕ್ಕೆ ಕಾರಣ. ಪತ್ರಕರ್ತನ ವಿರುದ್ಧ ಕೊಹ್ಲಿ ಬೈಯಬಾರದಿತ್ತು ಎನ್ನು ವುದಲ್ಲ ವಿಷಯ, ಒಂದು ವ್ಯವಸ್ಥೆಯನ್ನು ಮುನ್ನ ಡೆಸುವ ವ್ಯಕ್ತಿಗೆ ತಾಳ್ಮೆ ಬಹಳ ಮುಖ್ಯವಲ್ಲವೇ? ಇನ್ನು ಮೈದಾನದಲ್ಲಿ ಕೊಹ್ಲಿ ವರ್ತನೆಯನ್ನು ವಿವರಿಸುವ ಅಗತ್ಯವೇ ಇಲ್ಲ. ಎದುರಾಳಿ ತಂಡದ ಒಂದು ವಿಕೆಟ್‌ ಬಿದ್ದರೆ ಅವರು ವಿಪರೀತವಾಗಿ, ವಿಚಿತ್ರವಾಗಿ ಸಂಭ್ರಮಿ ಸುವ ರೀತಿ, ತಾನೇ ಔಟಾದಾಗ ಅವರು ಎದುರಾಳಿ ತಂಡ ಬೌಲರ್‌ಗಳ ವಿರುದ್ಧ ಸಿಟ್ಟಾಗುವುದು, ತೀರಾ ಆಕ್ರೋಶ ಗೊಳ್ಳುವುದು…!

ಅರ್ಥವಾಗದ ಧೋರಣೆಗಳು: ಕೊಹ್ಲಿ ನಾಯಕನಾದ ಮೇಲೆ ತಂಡದ ಆಟಗಾರರಿಗೆ ಎಷ್ಟು ಅರ್ಥವಾಗಿ ದೆಯೋ, ಏನೋ? ಹೊರಗಿನಿಂದ ನಿಂತು ನೋಡುವ ವರಿಗೂ ಅರ್ಥವಾಗದ ಹಲವು ವಿಚಾರಗಳಿವೆ. ಗೊತ್ತಿದ್ದವರು ತಿಳಿಸ ಬಹುದು. ಕೊಹ್ಲಿ ನಾಯಕತ್ವದಲ್ಲಿ ಶೇ.95 ಬಾರಿ ತಂಡಗಳನ್ನು ಬದಲಿಸಲಾಗಿದೆ. ಅಂದರೆ ಇವತ್ತಿದ್ದ ಆಟಗಾರರು ನಾಳಿನ ಪಂದ್ಯ ಕ್ಕಿರುವುದಿಲ್ಲ. ಮುಖ್ಯವಾಗಿ ಕರ್ನಾಟಕದ ಪ್ರತಿ ಭಾವಂತ ಆಟಗಾರ ಮನೀಷ್‌ ಪಾಂಡೆ ಅವಕಾಶ ಸಿಕ್ಕಾಗಲೆಲ್ಲ ತಮ್ಮ ಅರ್ಹತೆ ಯನ್ನು ಸಾಬೀತುಮಾಡಿದರೂ, ಅವರಿಗೆ ಸಾಕಷ್ಟು ಅವಕಾಶಗಳು ಸಿಗಲೇ ಇಲ್ಲ. ಇದರಿಂದ ಅವರ ಅಂತಾ ರಾಷ್ಟ್ರೀಯ ಕ್ರಿಕೆಟ್‌ ಜೀವನ ಬಹುತೇಕ ಮುಗಿದೇ ಹೋಗಿದೆ. ಇನ್ನು ಮಾಯಾಂಕ್‌ ಅಗರ್ವಾಲ್‌ ಅದೃಷ್ಟವಶಾತ್‌ ನ್ಯೂಜಿಲೆಂಡ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ ಮಿಂಚಿ ಉಳಿದುಕೊಂಡಿದ್ದಾರೆ!

ಇದಕ್ಕೆ ಮತ್ತೂಬ್ಬ ಬಲಿಪಶು ವಿಶ್ವವಿಖ್ಯಾತ ಸ್ಪಿನ್ನರ್‌ ಆರ್‌.ಅಶ್ವಿ‌ನ್‌. ಒಂದು ಕಾಲದಲ್ಲಿ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಅವರು ಅವಿಭಾಜ್ಯ ಅಂಗವಾಗಿದ್ದರು. ಕಾಲಕ್ರಮೇಣ ಏಕದಿನ, ಟಿ20ಗಳಿಂದ ಹೊರಗಿಡಲಾ ಯಿತು. ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ಅಷ್ಟೂ ಟೆಸ್ಟ್‌ ಪಂದ್ಯಗಳಿಂದಲೂ ಅವರನ್ನು ಹೊರಗಿಡಲಾಗಿತ್ತು. ಇದಕ್ಕೆ ನೀಡುವ ಪರೋಕ್ಷ ಕಾರಣ, ಬ್ಯಾಟಿಂಗ್‌ ಕಷ್ಟ ಎನ್ನುವುದು. ಆದರೆ ಅವರು ಸಂದರ್ಭ ಸಿಕ್ಕಾಗಲೆಲ್ಲ ತಮ್ಮ ಅತ್ಯುತ್ತಮ ಬ್ಯಾಟಿಂಗ್‌ನಿಂದ ತಂಡದ ನೆರವಿಗೆ ನಿಂತಿದ್ದಾರೆ. ಆಸ್ಟ್ರೇಲಿಯ ಪ್ರವಾಸದಲ್ಲಂತೂ ಅಶ್ವಿ‌ನ್‌ ಆಟದಿಂದ ಭಾರತ ಸರಣಿಯನ್ನೇ ಗೆದ್ದಿತ್ತು. ಆಗಲೇ ಈ ಶಕ್ತಿ ಸಾಬೀತಾಗಿದ್ದರೂ ಅಶ್ವಿ‌ನ್‌ ಬದಲು ಟೆಸ್ಟ್‌ನಲ್ಲೂ ಜಡೇಜ ಆಯ್ಕೆಯಾಗುತ್ತಾರೆ. ಜಡೇಜ ಮೂರೂ ಮಾದರಿಯಲ್ಲಿ ಅವಕಾಶ ಹೊಂದಿ ದ್ದಾರೆ. ಸದ್ಯ ಅಶ್ವಿ‌ನ್‌ ಟೆಸ್ಟ್‌ಗಳಿಗೆ ಮಾತ್ರ ಮುಖ್ಯ ಆಟ ಗಾರನಾಗಿ ಪರಿಗಣಿಸ ಲ್ಪಡುತ್ತಿದ್ದಾರೆ. ಇಂತಹ ಹೊತ್ತಿನಲ್ಲೂ ಅವರಿಗೆ ಅವಕಾಶವಿಲ್ಲವೆಂದರೆ, ಅವರು ಇನ್ನೇನು ತಾನೇ ಮಾಡಲು ಸಾಧ್ಯ? ಒಬ್ಬ ಪ್ರತಿಭಾವಂತ ಆಟಗಾರ ಅಷ್ಟೊಂದು ಪ್ರಯಾಸ ಪಡಬೇಕೇ?

Advertisement

ಇನ್ನು ಕೊಹ್ಲಿ ಒಮ್ಮೆಯೂ ಐಸಿಸಿ ಟ್ರೋಫಿ ಗೆದ್ದಿಲ್ಲ ಎನ್ನುವುದು, ಈ ಟ್ರೋಫಿಗಳನ್ನು ಗೆಲ್ಲದಿ ದ್ದರೇನಾಯಿತು ಒಟ್ಟಾರೆ ಅವರೊಬ್ಬ ಅದ್ಭುತ ನಾಯಕ, ಅಂಕಿಸಂಖ್ಯೆಗಳೇ ಅದನ್ನು ಸಾಬೀತುಪಡಿಸುತ್ತವೆ ಎನ್ನುವುದು ಮಾಮೂಲಿ ವಾದಗಳು. ಅವರು ಶತಕ ಬಾರಿಸದೆಯೇ ಹತ್ತಿರಹತ್ತಿರ ಎರಡು ವರ್ಷ ಗಳಾಗಿವೆ. ಮೂರೂ ಮಾದರಿಯ ನಾಯಕನಾಗಿ ಕೊಹ್ಲಿ ಅನುಭವಿಸುತ್ತಿರುವ ಒತ್ತಡ ಎದ್ದು ಕಾಣುವಂತೆ ಅವರ ಬ್ಯಾಟಿಂಗನ್ನು ಹಾಳು ಗೆಡವಿದೆ.

ಪ್ರಸ್ತುತ ಟೆಸ್ಟ್‌ ಮತ್ತು ಸೀಮಿತ್‌ ಓವರ್‌ಗಳಿಗೆ ಆಟಗಾರರ ಆಯ್ಕೆಪ್ರಕ್ರಿಯೆ ಈಗ ಬೇರೊಂದು ರೀತಿಯಲ್ಲಿದೆ. ಮೊದಲೆಲ್ಲ ಟೆಸ್ಟ್‌, ಏಕದಿನಗಳಿಗೆ ಹೆಚ್ಚು ಕಡಿಮೆ ಒಂದೇ ತೆರನಾದ ಆಟಗಾರರು ಇರುತ್ತಿದ್ದರು. ಈಗ ಟಿ20, ಏಕದಿನಗಳಲ್ಲಿ ಸ್ಫೋಟಕ ಆಟಗಾರರು, ಆಲ್‌ರೌಂಡರ್‌ಗಳು ಬೇಕೆಂದು ತಂಡಗಳು ಬಯಸುತ್ತವೆ. ಇದಕ್ಕೆ ಕಾರಣವೂ ಇದೆ. ಕ್ರಿಕೆಟ್‌ ಹಿಂದಿನಂತೆ ಕೇವಲ ಒಂದು ಆಟವಾಗಿ ಉಳಿದಿಲ್ಲ, ಕೇವಲ ಕಲಾಭಿವ್ಯಕ್ತಿ, ರಸಪೂರ್ಣ ಶಕ್ತಿಯಾಗಿ ಕಾಣಿಸುತ್ತಿಲ್ಲ. ಅದೀಗ ಮಾರಾಟದ ಸರಕು. ಅಲ್ಲಿ ರನ್‌ಗಳ ಸುರಿಮಳೆಯಾಗಬೇಕು, ಕ್ಷಣಕ್ಷಣಕ್ಕೂ ರೋಚಕತೆ ಉಕ್ಕಿ ಹರಿಯಬೇಕು. ಹೀಗಾಗಿ ಟೆಸ್ಟ್‌ ಮತ್ತು ಸೀಮಿತ ಓವರ್‌ಗಳ ಬಗ್ಗೆ ಯೋಚಿಸುವ ರೀತಿಯೇ ಬದಲಾಗಿದೆ. ಇಂತಹ ಹೊತ್ತಿನಲ್ಲಿ ಸೀಮಿತ ಓವರ್‌ಗಳಲ್ಲಿ ಎರಡು ಭಿನ್ನ ವ್ಯಕ್ತಿತ್ವದ ನಾಯಕತ್ವವಿದ್ದರೆ ಅಲ್ಲಿ ಉಂಟಾಗುವ ಒಳಜಗಳಗಳಿಗೆ ಕೊನೆಯಿದೆಯೇ?

– ಪೃಥ್ವಿಜಿತ್‌

Advertisement

Udayavani is now on Telegram. Click here to join our channel and stay updated with the latest news.

Next