Advertisement

ಕೊಹ್ಲಿ ನಾಯಕತ್ವದ ತಾಕತ್ತಿಗೆ ಇವು ಸಾಕ್ಷಿ

03:22 PM Jul 31, 2019 | Suhan S |

ಸಮಕಾಲೀನ ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಹೆಸರು ಗಳಿಸಿದ್ದಾರೆ. ಇದನ್ನು ಪ್ರಶ್ನೆ ಮಾಡುವುದು ಕಷ್ಟ. ಟೆಸ್ಟ್‌ನಲ್ಲಿ 25, ಏಕದಿನದಲ್ಲಿ 41 ಶತಕ ಗಳಿಸಿರುವ ಅವರು ಹೀಗೆ ಆಡಿಕೊಂಡು ಹೋದರೆ, ಸಚಿನ್‌ ತೆಂಡುಲ್ಕರ್‌ ಅವರ ಎಲ್ಲ ದಾಖಲೆಗಳನ್ನು ನಿರ್ನಾಮ ಮಾಡುವುದು ಖಚಿತ. ಆದರೆ ಅವರು ಉತ್ತಮ ನಾಯಕ ಹೌದೋ, ಅಲ್ಲವೋ ಎಂಬ ಪ್ರಶ್ನೆ ಮಾತ್ರ ಈಗ ಎಲ್ಲ ಕಡೆ ಚರ್ಚೆಯಾಗುತ್ತಿದೆ. ಕೆಲವರಂತೂ ಅವರು ನಾಯಕತ್ವವನ್ನು ರೋಹಿತ್‌ ಶರ್ಮಗೆ ಬಿಟ್ಟುಕೊಡಬೇಕೆಂದು ವಾದಿಸುತ್ತಿದ್ದಾರೆ. ಆದರೆ ನಾಯಕನಾಗಿ ಕೊಹ್ಲಿ ವಿಫ‌ಲ ಆಟಗಾರನೇನಲ್ಲ. ಅವರ ಸಾಧನೆ ಗಣನೀಯವಾಗಿಯೇ ಇದೆ. ಹಾಗಿದ್ದರೆ ಕೊಹ್ಲಿ ವಿರುದ್ಧದ ವಾದಗಳೇನು?ಹುಳುಕುಗಳೇನು?

Advertisement

ಕೊಹ್ಲಿಗೆ ಸಿಟ್ಟು ಜಾಸ್ತಿ!:

ನಾಯಕನಾಗಿರುವ ಕೊಹ್ಲಿಗೆ ಸಿಟ್ಟು ಜಾಸ್ತಿ, ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಗುಣವಿಲ್ಲ ಎಂದು ಹೇಳಲಾಗುತ್ತದೆ. ಮೈದಾನದಲ್ಲಿ ಅವರ ವರ್ತನೆಯನ್ನು ನೋಡಿ ಇಂತಹ ಅಪಖ್ಯಾತಿ ಬಂದಿದೆ. ಜೊತೆಗೆ ಎದುರಾಳಿ ಆಟಗಾರರೊಂದಿಗೆ ಕಾಲು ಕೆರೆದುಕೊಂಡ ಜಗಳಕ್ಕೆ ಹೋಗುತ್ತಾರೆ, ಬಹಳ ದುರಹಂಕಾರಿ ಎಂದು ಸ್ವದೇಶಿ, ವಿದೇಶಿ ಆಟಗಾರರಿಂದ ಬೈಸಿಕೊಂಡಿದ್ದಾರೆ.

ತಂಡದ ಆಯ್ಕೆಯಲ್ಲಿ ಸ್ಥಿರತೆಯಿಲ್ಲ:

ಕೊಹ್ಲಿ ನಾಯಕತ್ವದ ಒಂದು ಮಹತ್ವದ ದೋಷವೆಂದರೆ ಪದೇ ಪದೇ ತಂಡದ ಆಟಗಾರರನ್ನು ಬದಲಿಸುವುದು. ಒಮ್ಮೆಯಂತೂ ಆಟಗಾರರನ್ನು ಬದಲಿಸದ ಪಂದ್ಯಗಳೇ ಇಲ್ಲ ಎನ್ನುವಂತಾಗಿತ್ತು. ಇದರಿಂದ ಆಟಗಾರರ ಮೇಲೆ ಬಹಳ ಒತ್ತಡವಾಗುತ್ತಿದೆ ಎನ್ನುವುದು ಹಲವರ ಅಭಿಪ್ರಾಯ.

Advertisement

ಧೋನಿಯನ್ನೇ ಅವಲಂಬಿಸುತ್ತಾರೆ:

ಕೊಹ್ಲಿ ನಾಯಕನಾಗಿ ಸಂಪೂರ್ಣ ಧೋನಿಯನ್ನು ಅವಲಂಬಿಸುತ್ತಾರೆ. ಸೀಮಿತ ಓವರ್‌ಗಳಲ್ಲಿ ಅನಿವಾರ್ಯವಿದ್ದಾಗಲೆಲ್ಲ ಕೊಹ್ಲಿಯನ್ನು ಮೈದಾನದಲ್ಲಿ ಕಾಪಾಡುವುದೇ ಧೋನಿ ಎಂಬ ವಾದವೊಂದು ಬೆಳೆದುಬಂದಿದೆ.

ಐಪಿಎಲ್ನಲ್ಲಿ ವಿಫ‌ಲ ನಾಯಕತ್ವ:

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ದೀರ್ಘ‌ಕಾಲ ಐಪಿಎಲ್ನಲ್ಲಿ ನಾಯಕತ್ವ ವಹಿಸಿದ್ದರೂ ಕೊಹ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ರೋಹಿತ್‌ ಶರ್ಮ ನಾಲ್ಕು ಬಾರಿ ಮುಂಬೈ ಇಂಡಿಯನ್ಸ್‌ ತಂಡವನ್ನು ಗೆಲ್ಲಿಸಿದ್ದಾರೆ.

ಕೊಹ್ಲಿಯ ವೈಫ‌ಲ್ಯಗಳೇನು?:

2017 ಏಕದಿನ ಚಾಂಪಿಯನ್ಸ್‌ ಟ್ರೋಫಿ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಹೀನಾಯ ಸೋಲನುಭವಿಸಿತ್ತು.

ವಿರಾಟ್ ಕೊಹ್ಲಿ ಯಶಸ್ಸುಗಳು ಇವು!:

2015ರ ಆರಂಭದಲ್ಲಿ ಕೊಹ್ಲಿ ಭಾರತ ಟೆಸ್ಟ್‌ ತಂಡದ ನಾಯಕರಾಗಿ ಆಯ್ಕೆಯಾದರು. 2017ರ ಆರಂಭದಲ್ಲಿ ಎಲ್ಲ ಮಾದರಿಗೂ ನಾಯಕರಾದರು. ಅಲ್ಲಿಂದ ಇಲ್ಲಿಯವರೆಗೆ ಅವರು ನಾಯಕನಾಗಿ ಯಶಸ್ವಿಯೇ ಆಗಿದ್ದಾರೆ. ಅವರ ಮೇಲಿನ ಆರೋಪಗಳು ಏನೇ ಇದ್ದರೂ ನಾಯಕರಾಗಿ ಅವರು ಮಾಡಿರುವ ಸಾಧನೆಗಳು ಅತ್ಯಂತ ಮಹತ್ವದ್ದು.

2019 ಏಕದಿನ ವಿಶ್ವಕಪ್‌ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದು.ರೋಹಿತ್‌ರನ್ನು ನಾಯಕನಾಗಿ ನೇಮಿಸಿ ಎಂದು ಹಲವರ ವಾದ

ರೋಹಿತ್‌ ಶರ್ಮಗೆನಾಯಕತ್ವ ಕೊಡಬೇಕೆ?:

ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡ ರೋಹಿತ್‌ ಶರ್ಮ ಅಷ್ಟೂ ಸರಣಿಗಳನ್ನು ಜಯಿಸಿದ್ದಾರೆ. ಜೊತೆಗೆ ಅವರಿಗೆ ಶಾಂತ ಸ್ವಭಾವವಿದೆ ಎನ್ನುವುದು ರೋಹಿತ್‌ ಪರ ವಾದಿಸುವವರ ಅಭಿಪ್ರಾಯ. ಸ್ವತಃ ರೋಹಿತ್‌ ಕೂಡ ತಾನು ನಾಯಕತ್ವ ವಹಿಸಲು ಸಿದ್ಧ ಎಂದು ಒಮ್ಮೆ ಹೇಳಿಕೊಂಡಿದ್ದಾರೆ. ಇದೇ ವೇಳೆ ಕೊಹ್ಲಿ ನಾಯಕತ್ವ ಕಳಪೆ ಎಂದು ಭಾರತ ಕ್ರಿಕೆಟ್ ತಂಡದ ದಂತಕಥೆ ಸುನೀಲ್ ಗಾವಸ್ಕರ್‌ ಹೇಳಿಕೆ ನೀಡಿದ್ದಾರೆ. ಇದು ನಾಯಕನಾಗಿ ಕೊಹ್ಲಿ ಸಾಮರ್ಥ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ದ.ಆಫ್ರಿಕಾದಲ್ಲಿ ಏಕದಿನ, ಟಿ20 ಜಯ:

ಅದಕ್ಕೂ ಮುನ್ನ ದ.ಆಫ್ರಿಕಾ ನೆಲದಲ್ಲಿ ಭಾರತ 3 ಟೆಸ್ಟ್‌ ಆಡಿ 2ರಲ್ಲಿ ಸೋತು ಹೋಗಿತ್ತು. ಏಕದಿನ ಸರಣಿಯನ್ನು 5-1ರಿಂದ, ಟಿ20ಯನ್ನು 2-1ರಿಂದ ಗೆದ್ದುಕೊಂಡಿತು. ದ.ಆಫ್ರಿಕಾದಲ್ಲಿ ಇಂತಹ ಯಶಸ್ಸು ಪಡೆದ ಭಾರತದ ಮೊದಲ ನಾಯಕ ಅವರು.
ನ್ಯೂಜಿಲೆಂಡ್‌ನ‌ಲ್ಲೂ ಅಪರೂಪದ ಸರಣಿ ಜಯ:

ಭಾರತ ಹಲವು ಬಾರಿ ನ್ಯೂಜಿಲೆಂಡ್‌ ಪ್ರವಾಸ ಮಾಡಿದ್ದರೂ, ಆ ದೇಶದಲ್ಲಿ ದ್ವಿಪಕ್ಷೀಯ ಏಕದಿನ ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕೊಹ್ಲಿ ನಾಯಕತ್ವದಲ್ಲಿ 2019ರಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ ಭಾರತ, ಏಕದಿನ ಸರಣಿಯನ್ನು 4-1ರಿಂದ ಜೈಸಿತು. ಇದೊಂದು ಅಪರೂಪದ ಸಾಧನೆಯಾಗಿ ದಾಖಲಾಯಿತು.
ಭಾರತ ನಂ.1 ಟೆಸ್ಟ್‌, ನಂ.2 ಏಕದಿನ ತಂಡ:

ಕೊಹ್ಲಿ ನಾಯಕತ್ವದಲ್ಲಿ ಭಾರತ ನಂ.1 ಟೆಸ್ಟ್‌ ತಂಡವಾಗಿ ಬಹಳ ಕಾಲದಿಂದ ಮುಂದುವರಿದಿದೆ. ಈ ಓಟವನ್ನು ತಡೆಯಲು ಯಾರಿಗೂ ಸಾಧ್ಯವಾಗುತ್ತಿಲ್ಲ. ನಾಯಕನಾಗಿ ಸತತ 9 ಟೆಸ್ಟ್‌ ಸರಣಿ ಗೆದ್ದು ರಿಕಿ ಪಾಂಟಿಂಗ್‌ ವಿಶ್ವ ದಾಖಲೆಯನ್ನು ಸಮಗೊಳಿಸಿದ್ದಾರೆ. ಭಾರತ ವಿಶ್ವ ನಂ.2 ಏಕದಿನ ತಂಡವಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next