Advertisement

ಅನಾಥ ಶಿಶುವಿಗೆ ವಿರಾಟ್‌ ಹೆಸರು

11:31 PM Jun 18, 2019 | Team Udayavani |

ತಿರುವನಂತಪುರ: ಅನಾಥ ಮಕ್ಕಳ ಪೋಷಣೆಗಾಗಿಯೇ ಕೇರಳ ಸರಕಾರ ತೆರೆದಿರುವ “ಥನಲ್‌’ ಕೇಂದ್ರಕ್ಕೆ ಶನಿವಾರ ರಾತ್ರಿ ಸುಮಾರು 8 ಗಂಟೆಗೆ ಸೇರ್ಪಡೆಯಾದ 3 ದಿನಗಳ ಗಂಡು ಮಗುವಿಗೆ ಭಾರತೀಯ ಪುರುಷರ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಪ್ರತೀಕವಾಗಿ ವಿರಾಟ್‌ ಎಂದು ಹೆಸರಿಡಲಾಗಿದೆ. ಜತೆಗೆ, ಮಂಗಳವಾರ ಮಧ್ಯಾಹ್ನ 12:30ರ ಸುಮಾರಿಗೆ ಸಿಕ್ಕಿದ್ದ 4 ದಿನಗಳ ಹೆಣ್ಣು ಶಿಶುವಿಗೆ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ಅವರ ಪ್ರತೀಕವಾಗಿ ಮಿಥಾಲಿ ಎಂಬ ಹೆಸರನ್ನು ಇಡಲಾಗಿದೆ. ಎಲ್ಲೆಲ್ಲೂ ಕ್ರಿಕೆಟ್‌ ವಿಶ್ವಕಪ್‌ ಸಡಗರ ಹರಡಿರುವುದರಿಂದ ಇವರಿಗೆ ಕ್ರಿಕೆಟಿಗರ ಹೆಸರುಗಳನ್ನೇ ಇಡಲಾಗಿದೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಸಿಎಂ ಪಿಣರಾಯಿ ವಿಜಯನ್‌ ಅವರಿಂದ ಉದ್ಘಾಟನೆಗೊಂಡ “ಥನಲ್‌’ ಕೇಂದ್ರದಲ್ಲಿ ನೂರಾರು ಅನಾಥ ಶಿಶುಗಳಿಗೆ ಆಶ್ರಯ ಸಿಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next