Advertisement

“ಕಾಫಿ ವಿದ್‌ ಕರಣ್‌’ನಲ್ಲಿ ಕೊಹ್ಲಿ-ಅನುಷ್ಕಾ?

06:20 AM Feb 08, 2018 | Team Udayavani |

ಮುಂಬಯಿ: “ಸ್ಟಾರ್‌ ಪ್ಲಸ್‌’ ವಾಹಿನಿಯ ಜನಪ್ರಿಯ ಶೋ “ಕಾಫಿ ವಿದ್‌ ಕರಣ್‌’ನ ಮುಂದಿನ ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮ ಕಾಣಿಸಿಕೊಳ್ಳುವರೆ? ಇಂಥದೊಂದು ಸಾಧ್ಯತೆ ಇದೆ ಎಂಬುದೀಗ ಸುದ್ದಿಯಾಗಿದೆ.

Advertisement

ಸದ್ಯದಲ್ಲೇ ಈ ಕಾರ್ಯಕ್ರಮದ 6ನೇ ಆವೃತ್ತಿ ಆರಂಭವಾಗಲಿದ್ದು, ಇದರಲ್ಲಿ ಪಾಲ್ಗೊಳ್ಳುವವರ ಯಾದಿ ಅಂತಿಮಗೊಳ್ಳುತ್ತಿದೆ. ಇದರಲ್ಲಿ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮ ಕೂಡ ಇದ್ದಾರೆ ಎಂಬುದು ಬ್ರೇಕಿಂಗ್‌ ನ್ಯೂಸ್‌. ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಕಳೆದ ವರ್ಷವೇ “ಕಾಫಿ ವಿದ್‌ ಕರಣ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗ ಮತ್ತೋರ್ವ ನಟಿ ಕತ್ರಿನಾ ಕೈಫ್ ಇವರ ಜತೆಗಿದ್ದರು. ಈ ಬಾರಿ ಪತಿ ವಿರಾಟ್‌ ಕೊಹ್ಲಿ ಜತೆ ಆಗಮಿಸಲಿದ್ದಾರೆ.

ಸದ್ಯ ವಿರಾಟ್‌ ಕೊಹ್ಲಿ ಟೀಮ್‌ ಇಂಡಿಯಾ ಜತೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದರೆ, ಅನುಷ್ಕಾ ಶರ್ಮ “ಜೀರೋ’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಶಾರುಖ್‌ ಖಾನ್‌, ಕತ್ರಿನಾ ಕೈಫ್ ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next