Advertisement

ಫೇಕ್ ನ್ಯೂಸ್! ವಾಹನ ಸವಾರರಿಗೆ ಹೆಲ್ಮೆಟ್ ಅಗತ್ಯವಿಲ್ಲ-ವೈರಲ್ ಆದ ವಾಟ್ಸಪ್ ಸಂದೇಶ

01:23 PM Aug 08, 2020 | Nagendra Trasi |

ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಹಲವಾರು ಸುಳ್ಳು ಸುದ್ದಿಯ ಸಂದೇಶಗಳು ಹರಿದಾಡುತ್ತಿದ್ದು, ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ವಾಹನ ಸವಾರರು ಹೆಲ್ಮೆಟ್ ಧರಿಸಬೇಕಾದ ಅಗತ್ಯ ಇಲ್ಲ ಎಂದು ಸುದ್ದಿ ವಾಟ್ಸಪ್ ಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ವರದಿ ತಿಳಿಸಿದೆ.

Advertisement

ಸಾಮಾಜಿಕ ಜಾಲತಾಣ ವಾಟ್ಸಪ್ ಗಳಲ್ಲಿ, ನಗರದೊಳಗೆ 15 ಕಿಲೋ ಮೀಟರ್ ಅಂತರದಲ್ಲಿ ಸಂಚರಿಸುವ ವಾಹನ ಸವಾರರು ಹೆಲ್ಮೆಟ್ ಧರಿಸಬೇಕಾದ ಅಗತ್ಯವಿಲ್ಲ ಎಂಬ ಸಂದೇಶ ಹರಿದಾಡುತ್ತಿದೆ. ಅಲ್ಲದೇ ಒಂದು ವೇಳೆ ನೀವು ನಗರದೊಳಗೆ ಹೆಲ್ಮೆಟ್ ಧರಿಸದೇ ವಾಹನ ಸವಾರಿ ಮಾಡುತ್ತಿದ್ದರು ಕೂಡಾ ಟ್ರಾಫಿಕ್ ಪೊಲೀಸರು ನಿಮ್ಮನ್ನು ತಡೆದು ನಿಲ್ಲಿಸುವುದಿಲ್ಲ ಎಂದು ಸಂದೇಶದಲ್ಲಿ ಹೇಳಿದೆ!

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಮಾತ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಸಂದೇಶ ತಿಳಿಸಿದೆ. ಆದರೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಪ್ರೆಸ್ ಇನ್ ಫಾರ್ಮೆಶನ್ ಬ್ಯೂರೋ(ಪಿಐಬಿ) ಫ್ಯಾಕ್ಟ್ ಚೆಕ್ ಮಾಡಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ತಿಳಿದು ಬಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಿಐಬಿ, ವಾಹನ ಸವಾರರು ಹೆಲ್ಮೆಟ್ ಧರಿಸವುದು ಕಡ್ಡಾಯ. 2019ರ ಸೆಪ್ಟೆಂಬರ್ 1ರಂದು ನೂತನ ಮೋಟಾರು ವಾಹನ(ತಿದ್ದುಪಡಿ) ಕಾಯ್ದೆ ಜಾರಿಗೊಳಿಸಲಾಗಿತ್ತು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕಾಯ್ದೆಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಿತ್ತು. ಹೊಸ ಕಾಯ್ದೆ ಪ್ರಕಾರ, ವಾಹನ ಸವಾರರು ಹೆಲ್ಮೆಟ್ ಧರಿಸದೇ ಸಂಚರಿಸಿದರೆ ಒಂದು ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಕುಡಿದು ವಾಹನ ಚಲಾಯಿಸಿದರೆ ಹತ್ತು ಸಾವಿರ ರೂಪಾಯಿವರೆಗೆ ದಂಡ ಅಥವಾ ಜೈಲುಶಿಕ್ಷೆ ವಿಧಿಸುವ ಅವಕಾಶ ಇದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next