Advertisement

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಡ್ಯಾನ್ಸ್ ವೀಡಿಯೋ ಹಿಂದಿರುವ ಹುಡುಗನ ಕಥೆ ಗೊತ್ತಾ?

06:04 PM Jun 10, 2020 | Suhan S |

ಎಲ್ಲರೊಳಗೊಬ್ಬ ಸಾಧಕನಿರುತ್ತಾನೆ.ಅವಕಾಶಗಳು ಬಂದಾಗ ಹೊರ ಬರುತ್ತದೆ. ಆದರೆ ನಮ್ಮಲ್ಲಿ ಇವತ್ತಿಗೂ ಎಷ್ಟೋ ಜನ ಅವಕಾಶಗಳು ಇವತ್ತಲ್ಲ ನಾಳೆ ಬಂದೇ ಬರುತ್ತದೆ ಎನ್ನುವ ನಂಬಿಕೆಯಲ್ಲಿ ದಿನ ದೂಡುತ್ತಾರೆ ಅಥವಾ ಯಾವುದೇ ಪ್ರಯತ್ನಗಳನ್ನು ಮಾಡದೆ ಹಾಗೆಯೇ ಇರುತ್ತಾರೆ. ಇವತ್ತಿನ ದಿನಗಳಲ್ಲಿ ನಮ್ಮೊಳಗೆ ಏನೇ ಮನೋರಂಜನಾ ಕಲೆ ಇದ್ದರೆ ಅದು ಸುಲಭವಾಗಿ ಸಾಮಾಜಿಕ ಜಾಲತಾಣದಲ್ಲಿ ಜನರ ಕಣ್ಣಿಗೆ ಬೀಳುತ್ತದೆ. ಅದೃಷ್ಟ ಗಟ್ಟಿಯಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಒಂದೇ ಒಂದು ಸಣ್ಣ ಮನೋರಂಜನೆಯ ತುಣುಕು ಕೂಡ ರಾತ್ರಿ ಬೆಳಗ್ಗೆ ಆಗುವ ಮುನ್ನ ವೈರಲ್ ಆಗಿ ಬಿಡುತ್ತದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಅರುಕು ಮುರುಕು ಬಟ್ಟೆ ಹಾಕಿಕೊಂಡು ಖ್ಯಾತ ಹಾಡೊಂದಕ್ಕೆ ಬೆರಗುಗೊಳಿಸುವ ಹೆಜ್ಜೆಗಳನ್ನು ಹಾಕುವ ವಿಡಿಯೋಯೊಂದು ಬಾರೀ ವೈರಲ್ ಆಗಿತ್ತು. ಫೇಸ್‌ಬುಕ್‌, ಟಿಕ್ ಟಾಕ್, ಯೂಟ್ಯೂಬ್, ಇನ್ಸ್ಟಾ ಗ್ರಾಮ್ ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣದಲ್ಲಿ ಬಡವನೊಬ್ಬನ ಪ್ರತಿಭೆಯನ್ನು ನೋಡಿ ಶಹಬ್ಬಾಸ್ ಎಂದು ಎಲ್ಲೆಡೆ ಶೇರ್  ಆಗುತ್ತಲೇ ಇದೆ. ಈ ವೈರಲ್ ವಿಡಿಯೋ ಹಿಂದಿರುವ ಪ್ರತಿಭೆ ಅರ್ಮಾನ್ ರಾಥೋಡ್.

ಅರ್ಮಾನ್ ರಾಥೋಡ್ ತೀರ ಬಡ ಕುಟುಂಬದ ಹಿನ್ನಲೆಯಿಂದ ಬಂದವರು.  ಗುಜರಾತಿನ ಬಲ್ಸಾರ್ ಗ್ರಾಮದಲ್ಲಿ ಬೆಳೆದ ಅರ್ಮಾನ್ ಚಿಕ್ಕಂದಿನಿಂದಲೇ ತಂದೆಯ ಅನಾರೋಗ್ಯ, ತಾಯಿಯ ಅಸಹಾಯಕತೆಯನ್ನು ನೋಡುತ್ತಲೇ ಬೆಳೆದವರು. ಉಚಿತ ಶಿಕ್ಷಣವೆಂದು ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಕಲಿಯುತ್ತಾರೆ. ಏಳನೇ ತರಗತಿ ಫೇಲಾದ್ರೂ ಅಲ್ಲಿಂದ ಮನೆಯ ಪರಿಸ್ಥಿತಿ ತೀರಾ ಹದಗೆಟ್ಟಾಗ ಬಹು ಬೇಗನೆ ದುಡಿಮೆಯ ಜವಾಬ್ದಾರಿಗೆ ಇಳಿಯುತ್ತಾರೆ. ಕಾರ್ಮಿಕನಾಗಿ ಹೊತ್ತಿನ ಊಟಕ್ಕೆ ಶ್ರಮವಹಿಸಿ ಕುಟುಂಬಕ್ಕೆ ಆಸರೆಯಾಗುತ್ತಾರೆ. ಅರ್ಮಾನ್ ಬಾಲ್ಯದಿಂದಲೇ ಪ್ರತಿಭಾವಂತ ಹುಡುಗ. ಡ್ಯಾನ್ಸ್‌ ಗಳನ್ನು ಮಾಡುವುದು ಅಂದರೆ ಅಚ್ಚು ಮೆಚ್ಚಿನ ಕಾಯಕ. ಅದರೊಂದಿಗೆ ಗಣಪತಿಯ ಮೂರ್ತಿಗಳಿಗೆ ಸಮರ್ಥವಾಗಿ ಬಣ್ಣಗಳನ್ನು ಬಳಿಯುವುದು ದುಡಿಮೆಯ ಒಂದು ಭಾಗವಾಯಿತು.

ಡ್ಯಾನ್ಸ್ ಮಾಡುವುದು ಅಂದರೆ ಅರ್ಮಾನ್ ಗೆ ಒಂದು ರೀತಿಯ ಖುಷಿ. ಡ್ಯಾನ್ಸ್ ರ್ ಆಗವೇಕೆನ್ನುವ ಒಂದು ಸಣ್ಣ ಕನಸಿನ ಝಲಕ್ ನ್ನು ಚಿಕ್ಕಂದಿನಿಂದ ಊರಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತೋರಿಸುತ್ತಲೇ ಬೆಳೆದ ಅರ್ಮಾನ್, ಕನಸು ಕಾಣುತ್ತಾ ಖ್ಯಾತ ಡ್ಯಾನ್ಸ್ ರಿಯಾಲಿಟಿ ಶೋ ಗಳಲ್ಲಿ ಆಡಿಷನ್ ನೀಡಿ ಬರುತ್ತಾರೆ. ಅದೃಷ್ಟದ ಹಿನ್ನಡೆಯಿಂದ ಯಾವ ಕಾರ್ಯಕ್ರಮಗಳಲ್ಲೂ ಅರ್ಮಾನ್ ಆಯ್ಕೆ ಆಗುವುದಿಲ್ಲ. ಊರಿಗೆ ಬಂದು ತನ್ನ ಡ್ಯಾನ್ಸ್ ಹುಚ್ಚನ್ನು ಮುಂದುವರೆಸುತ್ತಾರೆ ಜೊತೆಗೆ ದಿನ ನಿತ್ಯದ ದುಡಿಮೆ.

ಅರ್ಮಾನ್ ಬಡ ಕುಟುಂಬದ ಹಿನ್ನಲೆಯಿಂದ ಬಂದವರು. ಅವಕಾಶಗಳು ಸಿಗದೆ ಇದ್ರು ಪರವಾಗಿಲ್ಲ, ಇವತ್ತಲ್ಲ ನಾಳೆ ಸಿಗಬಹುದೆಂದು ಟಿವಿ ನೋಡುತ್ತಾ, ಬಾಲಿವುಡ್ ನಟ ಹೃತಿಕ್ ರೋಶನ್ ರನ್ನು ಅನುಕರಣೆ ಮಾಡುತ್ತಾ ಡ್ಯಾನ್ಸ್ ಕಲಿಯುವುದನ್ನು ಎಂದು ನಿಲ್ಲಿಸಲಿಲ್ಲ.

Advertisement

ಪ್ರತಿಭೆ ಹೊರ ಬಂದ ಘಳಿಗೆ :  ಅದೊಂದು ದಿನ ಅರ್ಮಾನ್ ಸ್ನೇಹಿತನೊಬ್ಬ ನಿನೊಂದು ಟಿಕ್ ಟಾಕ್ ಖಾತೆ ತೆರೆದು ಅದರಲ್ಲಿ ‌ನಿನ್ನ ವಿಡಿಯೋಗಳನ್ನು ಹಾಕು ಎನ್ನುವ ಸಲಹೆಯನ್ನು ನೀಡುತ್ತಾರೆ. ಇದಕ್ಕೂ ಮುನ್ನ ಒಂದೋ ಎರಡೋ ಬಾರಿ ಹಾಸ್ಯಭರಿತವಾದ ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಅರ್ಮಾನ್ ಟಿಕ್ ಟಾಕ್ ನಲ್ಲಿ ಹಾಕಿದ್ದರು. ಅಲ್ಲಿ ಯಾವ ಪ್ರಯೋಜನವೂ ಅಗದೆ ಈ ಬಾರಿ ಸ್ನೇಹಿತನ ಸಲಹೆಗೆ ಒಪ್ಪಿಕೊಂಡು ಮುನ್ನಡೆಯವ ನಿರ್ಧಾರ ಮಾಡಿದ್ದನ್ನು. ಇದೇ ಅವರ ಬದುಕಿನ ಅದೃಷ್ಟವಾಗಿತ್ತು.

ಮೇ 18 ರಂದು ಟಿಕ್ ಟಾಕ್ ನಲ್ಲಿ ಅರ್ಮಾನ್ ತನ್ನ ನೃತ್ಯದ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಬಾಲಿವುಡ್ ಸೇರಿದಂತೆ ಬೇರೆ ಬೇರೆ ಶೈಲಿಯ ಡ್ಯಾನ್ಸ್ ವಿಧಾನದಲ್ಲಿ ಇದ್ದ ಆ ವಿಡಿಯೋ ತನ್ನ ಮೆಚ್ಚಿನ ನಟ ಹೃತಿಕ್ ರೋಶನ್ ಅಭಿನಯದ ‘ ಯೂ ಆರ್ ಮೈ ಸೋನಿಯಾ’ ಹಾಡಿನೊಂದಿಗೆ ಇತ್ತು. ಮನೆ ಬದಿಯ ಗದ್ದೆಯಲ್ಲಿ, ಅಪ್ಪನ ಹಳೆಯ ಬಟ್ಟೆ ಹಾಕಿಕೊಂಡು ಹಾಕಿದ ಹೆಜ್ಜೆಗಳು ಕೋಟ್ಯಾಂತರ ಜನ ಮನಸ್ಸನ್ನು ರಾತ್ರೋ ರಾತ್ರಿ ಗೆಲ್ಲುತ್ತದೆ. ಬಡತನದ ಬೇಗೆ, ಪ್ರತಿಭೆಯಿದ್ದರೂ ಸಿಗದ ಅವಕಾಶ, ಇವೆಲ್ಲವೂ ಅರ್ಮಾನ್ ನೃತ್ಯದಲ್ಲಿ ಕಂಡ ಜನ ಅರ್ಮಾನ್ ವಿಡಿಯೋವನ್ನು ಸೋಶಿಯಲ್ ನೆಟ್ವರ್ಕ್ ನಲ್ಲಿ ಹೆಚ್ಚು ವೀಕ್ಷಣೆ ಪಡೆದು ವೈರಲ್ ಆಗುತ್ತದೆ. ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡ ವಿಡಿಯೋ ಅರ್ಮಾನ್ ರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಬಳಿಕ ಅಂಥದೇ ನೃತ್ಯಗಳನ್ನು ಮಾಡುತ್ತಲೇ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ನೋಡು ನೋಡುತ್ತಿದ್ದಂತೆ ಎಲ್ಲಾ ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಪಡೆದುಕೊಳ್ಳುತ್ತವೆ. ಇದೇ ವೇಳೆಗೆ ಅರ್ಮಾನ್ ಪ್ರಸಿದ್ದಿಯನ್ನು ಸಹಿಸದ ಕೆಲವರು ಅರ್ಮಾನ್ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಬಡವರ ಹತ್ತಿರ ಬಟ್ಟೆಗಳನ್ನು ಪಡೆದು ಬಡವರ ಹಾಗೆ ನಟಿಸುತ್ತಾ ಇದ್ದಾನೆ ಎನ್ನುವ ಆರೋಪಕ್ಕೆ ಅರ್ಮಾನ್ ಮರುದಿನ ಟಿಕ್ ಟಾಕ್ ವಿಡಿಯೋದ ಮೂಲಕ ತನ್ನ ಮನೆ ಮನದ ಪರಿಸ್ಥಿತಿಯನ್ನು ವಿವರಿಸಿ ಸ್ಪಷ್ಟನೆ ನೀಡುತ್ತಾರೆ.

ಏನೇ ಇರಲಿ ಅರ್ಮಾನ್ ಬಡತನದಲ್ಲಿ ಬೆಳೆದಿರಬಹುದು.ಆದರೆ ಅವರ ಪ್ರತಿಭೆಯಲ್ಲಿ ಯಾವುದೇ ಕೊರತೆ ಇಲ್ಲ. ಈಗಾಗಲೇ ಬಾಲಿವುಡ್ ನಲ್ಲಿ ಇವರ ನೃತ್ಯವನ್ನು ಕೆಲ ಆಫರ್ ಗಳು ಬಂದಿದ್ದಾವೆ ಅಂತೆ. ಇವರ ಪ್ರತಿಭೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ‌.  ನಿನ್ನೆ ಮೊನ್ನೆ ಶುರು ಮಾಡಿದ ಇವರ ಟಿಕ್ ಟಾಕ್  ಖಾತೆಯಲ್ಲಿ ನಲ್ಲಿ 3 ಮಿಲಿಯನ್ ಗೂ ಹೆಚ್ಚು ಹಿಂಬಾಲಕರು ಇದ್ದಾರೆ. ಸದ್ಯ ಸೋಶಿಯಲ್ ನೆಟ್ವರ್ಕ್ ನಲ್ಲಿ ಇವರು ಸ್ಟಾರ್. ಮುಂದೆ ಸಿನಿಮಾರಂಗದಲ್ಲೂ ಒಳ್ಳೆ ಅವಕಾಶಗಳು ಸಿಗಬಹುದು.ಸಿಗಲಿ ಎನ್ನುವುದು ನಮ್ಮ ಆಶಯ.

 

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next