ಹುಲಿಯೊಂದು ಬ್ರಹ್ಮಪುತ್ರ ನದಿಯಲ್ಲಿ ಸತತ ಹತ್ತು ಗಂಟೆಗಳ ಕಾಲ ಈಜಾಡಿ ಸುಮಾರು 120 ಕಿ.ಮೀ. ದೂರದ ದ್ವೀಪ ತಲುಪಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಹುಲಿಯು ವೇಗವಾಗಿ ಬ್ರಹ್ಮಪುತ್ರ ನದಿಯಲ್ಲಿ ಈಜಾಡುತ್ತಿರುವುದು ಕಂಡುಬಂದಿದೆ. ನಂತರ ಗುವಾಹಟಿ ಸಮೀಪದ ನವಿಲು ದ್ವೀಪದ ಗುಹೆ ಒಂದರಲ್ಲಿ ಕಾಣಿಸಿಕೊಂಡಿದೆ.
ಈ ದ್ವೀಪವು ಉಮಾನಂದ ದೇಗುಲದಿಂದ ಪ್ರಖ್ಯಾತವಾಗಿದ್ದು, ಹುಲಿಯನ್ನು ಕಂಡು ದೇಗುಲದ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರ ವಿಡಿಯೋ ಈಗ ವೈರಲ್ ಆಗಿದೆ. “ಹುಲಿಯು ಒರಂಗ ರಾಷ್ಟ್ರೀಯ ಉದ್ಯಾನಕ್ಕೆ ಸೇರಿರಬಹುದು.
ನೀರು ಕುಡಿಯಲು ಹುಲಿಯು ಬ್ರಹ್ಮಪುತ್ರ ನದಿ ಬಳಿ ಹೋಗಿ, ನೀರಿನ ವೇಗದ ಹರಿವಿಗೆ ಕೊಚ್ಚಿ ಬಂದಿರಬಹುದು. ಹುಲಿ ಸುಮಾರು 120 ಕಿ.ಮೀ. ಈಜುವ ಮೂಲಕ ಮಂಗಳವಾರ ಬೆಳಗ್ಗೆ ದ್ವೀಪವನ್ನು ತಲುಪಿದೆ ಎಂದಿದ್ದಾರೆ.