ನವದೆಹಲಿ: ದೇವರ ದರ್ಶನ ಪಡೆಯುವ ವೇಳೆ ದೇವಸ್ಥಾನದಲ್ಲಿದ್ದ ಆನೆಯ ಪ್ರತಿಮೆ ಆರಾಧಿಸಲು ಹೋಗಿ, ಭಕ್ತನೊಬ್ಬ ಅದರ ಮಧ್ಯಭಾಗದಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ಆನೆಯ ಪ್ರತಿಮೆಯ ಮಧ್ಯಭಾಗದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ.ಈತ ಆನೆ ಪ್ರತಿಮೆಯ ಮಧ್ಯಭಾಗದಲ್ಲಿ ನುಸುಳಲು ಹೋಗಿದ್ದಾನೆ. ಆದರೆ ಅಲ್ಲಿಂದ ಹೊರ ಬರಲಾಗದೆ ಹೆಣಗಾಟ ನಡೆಸುತ್ತಿದ್ದಾನೆ.
ಸಿಕ್ಕಿಹಾಕಿಕೊಂಡ ವ್ಯಕ್ತಿ ಎಲ್ಲಾ ಪ್ರಯತ್ನ ಮಾಡಿ ಸುಮ್ಮನಿದ್ದು, ಉಳಿದ ವ್ಯಕ್ತಿ ಹಾಗೂ ದೇವಸ್ಥಾನದ ಪೂಜಾರಿಯೂ ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ಹೊರಗೆಳೆಯುವ ಯತ್ನವನ್ನು ಮಾಡಿದ್ದಾರೆ. ಅಲ್ಲಿದ್ದವರಲ್ಲಿ ಒಬ್ಬರು ಇದರ ವಿಡಿಯೋ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟ್ವಿಟರ್ ನಲ್ಲಿ 1.80 ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ.
ಇದನ್ನೂ ಓದಿ: ಪಂದ್ಯದ ನಡುವೆ ಹೀಯಾಳಿಸಿದ ಪ್ರೇಕ್ಷಕ: ರೊಚ್ಚಿಗೆದ್ದು ಹಲ್ಲೆಗೆ ಮುಂದಾದ ಪಾಕ್ ವೇಗಿ; ವಿಡಿಯೋ ವೈರಲ್
ಈ ವಿಡಿಯೋ ಎಲ್ಲಿಯದು ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆತ ಹೊರಗೆ ಬಂದಿದ್ದಾನೆಯೇ ಎನ್ನುವುದನ್ನು ಕೂಡ ವಿಡಿಯೋದಲ್ಲಿ ತೋರಿಸಿಲ್ಲ.
ಭಕ್ತಿಯೂ ಹೆಚ್ಚಾದರೆ ಆರೋಗ್ಯಕ್ಕೆ ಹಾನಿಕಾರಕವೆಂದು ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ಈತ ಅಲ್ಲಿ ಹೊರ ಬರಲು ಆಗದೇ ಇದ್ರೆ, ಒಳಗೆ ಹೋದದ್ದು ಹೇಗೆ ಎಂದು ಅನೇಕರು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.