ಕೋಲ್ಕತ್ತಾ: ಬಿಜೆಪಿ ಸಂಸದ ಖಗೇನ್ ಮುರ್ಮು ಅವರು ತಮ್ಮ ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಮುತ್ತಿಕ್ಕಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಸಂಸದ ಮಹಿಳೆಗೆ ಮುತ್ತಿಕ್ಕಿದ ವಿಡಿಯೋದ ಚಿತ್ರಣಗಳನ್ನು ತೃಣಮೂಲ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬಿಜೆಪಿ ನಾಯಕರು ಮಹಿಳಾ ವಿರೋಧಿಗಳು ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ಮಹಿಳೆಗೆ ಚುಂಬಿಸಿದ ಬಿಜೆಪಿ ಸಂಸದನ ವಿಡಿಯೋದ ಸ್ಕ್ರೀನ್ ಶಾಟ್ ಹಾಕಿ ಇದು ಬಿಜೆಪಿ ಸಂಸದ ಮತ್ತು ಮಲ್ದಹಾ ಉತ್ತರ ಕ್ಷೇತ್ರದ ಅಭ್ಯರ್ಥಿಯಾದ ಖಗೆನ್ ಮುರ್ಮು ಅವರ ಚುನಾವಣಾ ಪ್ರಚಾರ, ಬಿಜೆಪಿ ನಡೆಸುತ್ತಿರುವ ಚುನಾವಣೆ ಪ್ರಚಾರದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಆದರೆ ಈ ಕುರಿತು ಮಹಿಳೆ ಪ್ರತಿಕ್ರಿಯೆ ನೀಡಿದ್ದು ನನ್ನ ತಂದೆಗೆ ಸಮಾನರಾದ ವ್ಯಕ್ತಿ ನನ್ನ ಮೇಲೆ ಪ್ರೀತಿಯನ್ನು ತೋರಿಸಿ ನನ್ನ ಕೆನ್ನೆಗೆ ಮುತ್ತು ಕೊಟ್ಟರೆ ಸಮಸ್ಯೆ ಎಲ್ಲಿದೆ? ಜನರು ಅಂತಹ ಕೊಳಕು ಮನಸ್ಥಿತಿಯನ್ನು ಏಕೆ ಹೊಂದಿದ್ದಾರೆ? ಅದರಲ್ಲಿ ಯಾವುದೇ ತಪ್ಪಿಲ್ಲ, ”ಎಂದು ಅವರು ಹೇಳಿಕೊಂಡಿದ್ದಾರೆ.
ಕಳೆದ ಸೋಮವಾರ ಮುರ್ಮು ಅವರು ತಮ್ಮ ಮಲ್ದಹಾ ಉತ್ತರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದ್ದು ಇದರ ಕುರಿತು ಸ್ವತಃ ಮುರ್ಮು ಅವರೇ ಪ್ರತ್ರಿಕ್ರಿಯೆ ನೀಡಿದ್ದು ಕಾಂಗ್ರೆಸ್ ಕಣ್ಣಿಗೆ ಎಲ್ಲವೂ ಕೆಟ್ಟ ಭಾವನೆಗಳೇ ಕಾಣುತ್ತಿದೆ ಅವರ ಮನಸ್ಸಿನಲ್ಲಿ ತಂದೆ ಮಗಳ ಭಾವನೆ ಬರುವುದಿಲ್ಲ ಯಾಕೆಂದರೆ ಅವರ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳೇ ತುಂಬಿರುವಾಗ ಒಳ್ಳೆಯ ಆಲೋಚನೆ ಬರುವುದಾದರೂ ಎಲ್ಲಿಂದ ಎಂದು ಹೇಳಿದ್ದಾರೆ.
ಇದನ್ನೂ ಓದಿ: Delhi Liquor Scam:ತಿಹಾರ್ ಜೈಲಿನೊಳಗೆ ಬಿಆರ್ ಎಸ್ ನಾಯಕಿ ಕವಿತಾಳನ್ನು ಬಂಧಿಸಿದ ಸಿಬಿಐ