ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ ನಿಲ್ದಾಣಗಳು ಭಾರೀ ಸುದ್ದಿಯಲ್ಲಿದೆ. ಕಳೆದ ವಾರವಷ್ಟೇ ಯುವತಿಯೊಬ್ಬಳು ತುಂಡುಡುಗೆ ತೊಟ್ಟು ಮೆಟ್ರೋದಲ್ಲಿ ಪ್ರಯಾಣಿಸಿದ್ದು ದೇಶಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು.
ಈಗ ದೆಹಲಿ ಮೆಟ್ರೋ ನಿಲ್ದಾಣ ಮತ್ತೊಮ್ಮೆ ಸದ್ದು ಮಾಡಿದೆ. ಆದರೆ ಇದು ಇತರೆ ಪ್ರಯಾಣಿಕರಿಗೆ ಮುಜುಗರ ತರುವ ವಿಚಾರದಲ್ಲಿ ಅಲ್ಲ. ಬದಲಾಗಿ ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ಭೋಜ್‌ಪುರಿ ಹಾಡಿಗೆ ಯುವತಿಯೊಬ್ಬಳು ರೀಲ್ಸ್ ವಿಡಿಯೋ ಮಾಡಿದ್ದು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.
ಅನ್ವಿ ಕಾರಿಶ್ ಎಂಬ ಯುವತಿಯೊಬ್ಬಳು ಭೋಜ್‌ಪುರಿ ಭಾಷೆಯ ಪ್ರಸಿದ್ಧ ʻಸಜ್ ಕೆ ಸವಾರ್ ಕೆʼ ಎಂಬ ಹಾಡಿಗೆ ಪ್ಲಾಟ್‌ಫಾರ್ಮ್‌ನಲ್ಲೇ ನೃತ್ಯ ಮಾಡಿದ್ದಾಳೆ.
ಅಂದ ಹಾಗೆ ಈಗೀಗ ಯುವಕ-ಯುವತಿಯರು ಎಲ್ಲೆಂದರಲ್ಲಿ ರೀಲ್ಸ್ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದ್ದರೂ ಈಕೆ ತನ್ನ ರೀಲ್ಸ್ ಜೊತೆಗೆ ಮೆಟ್ರೋ ನಿಲ್ದಾಣದಲ್ಲಿ ರೀಲ್ಸ್ ಮಾಡಲು ತುಂಬಾ ಧೈರ್ಯ ಬೇಕು ಎಂದು ಕ್ಯಾಪ್ಷನ್ ಬೇರೆ ಹಾಕಿಕೊಂಡಿದ್ದಾರೆ.
ಈ ವೀಡಿಯೋವನ್ನು ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. ಈ ಬಗ್ಗೆ ಕಾಮೆಂಟ್ ಮಾಡಿರುವ ಕೆಲವರು DMRC ಯಾವುದೇ ರೀತಿಯ ವೀಡಿಯೋಗ್ರಫಿ ಮತ್ತು ಫೋಟೋಗ್ರಫಿಯನ್ನು ಮೆಟ್ರೋ ನಿಲ್ದಾಣದ ಒಳಗೆ ನಿಷೇಧಿಸಿದ್ದರೂ ಈಕೆ ಹೇಗೆ ರೀಲ್ಸ್ ಮಾಡಿದ್ದಾಳೆ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, ದೆಹಲಿ ಮೆಟ್ರೋದ ಭದ್ರತೆಯನ್ನು ನೋಡಿಕೊಳ್ಳುತ್ತಿರುವ CISF ಪಡೆ ಈಕೆಯ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
Insta model: ಚಾಟ್,ಬೆತ್ತಲೆ ಫೋಟೋ ಬ್ಲ್ಯಾಕ್ ಮೇಲ್.. ಪೊಲೀಸರ ಬಲೆಗೆ ಬಿದ್ದ ಮೋಸದ ಬೆಡಗಿ