ಹೈದರಾಬಾದ್: ಚಿಕ್ಕ ವಯಸ್ಸಿನಲ್ಲಿ ಪೆನ್ಸಿಲ್ ಕಳೆದುಕೊಂಡು ಸ್ನೇಹಿತರೊಂದಿಗೆ ಗುದ್ದಾಡಿದ ನೆನೆಪು ಎಲ್ಲರಿಗೂ ಇದ್ದೇ ಇರುತ್ತದೆ. ಅದೇ ರೀತಿ ಪೆನ್ಸಿಲ್ ಕಳೆದುಕೊಂಡ ಪುಟಾಣಿಯೊಬ್ಬ ಮಾಡಿದ ಕೆಲಸ ಕೇಳಿದರೆ ನೀವೂ ಹುಬ್ಬೇರಿಸುತ್ತೀರಿ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೆಡ್ಡಕಬಡೂರ್ ಪ್ರದೇಶದಲ್ಲಿ ಒಂದನೇ ತರಗತಿ ಓದುತ್ತಿರುವ ಹನುಮಂತನ ಪೆನ್ಸಿಲ್ ಅನ್ನು ಆತನ ಸ್ನೇಹಿತ ತೆಗೆದುಕೊಂಡಿದ್ದನಂತೆ. ಎಷ್ಟೇ ಕೇಳಿದರೂ ಆತ ಅದನ್ನು ವಾಪಸ್ ಕೊಟ್ಟಿಲ್ಲ. ಈ ವಿಚಾರವಾಗಿ ಹನುಮಂತ, ಸ್ನೇಹಿತನನ್ನೂ ಕರೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾನೆ.
“ಈತನ ವಿರುದ್ಧ ದೂರು ದಾಖಲಿಸಿಕೊಳ್ಳಿ’ ಎಂದು ಕೇಳಿದ್ದಾನೆ. “ನೀವಿನ್ನೂ ಚಿಕ್ಕವರು, ಹಾಗೆ ಮಾಡಲಾಗದು’ ಎಂದು ಪೊಲೀಸರು ಹೇಳಿದಾಗ, “ಕನಿಷ್ಠ ಪಕ್ಷ ಅವನ ಅಮ್ಮನನ್ನಾದರೂ ಕರೆಸಿ’ ಎಂದು ಪಟ್ಟು ಹಿಡಿದಿದ್ದಾನೆ.
ಇದನ್ನೂ ಓದಿ:ಡುಕಾಟಿ ಪೆನಿಗೇಲ್ ವಿ4 2022 ಅನಾವರಣ
ಇಬ್ಬರೊಂದಿಗೂ ಸಾಕಷ್ಟು ಸಮಯ ಚರ್ಚಿಸಿದ ಪೊಲೀಸರು ಕೊನೆಯಲ್ಲಿ ಇಬ್ಬರಿಗೂ ರಾಜಿ ಮಾಡಿದಿದ್ದಾರೆ. ಅದರ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪೊಲೀಸರು, ಆಂಧ್ರ ಪೊಲೀಸರ ಬಗ್ಗೆ ಪುಟಾಣಿಗಳೂ ನಂಬಿಕೆ ಇಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.