Advertisement

ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸ್ನಾನ ; ವಿಡಿಯೋ ವೈರಲ್ ; ಇಬ್ಬರು ಅರೆಸ್ಟ್

06:02 PM Nov 05, 2022 | Team Udayavani |

ಕೊಲ್ಲಂ (ಕೇರಳ) : ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಇಬ್ಬರು ಯುವಕರನ್ನು ವಿವಿಧ ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಭರಣಿಕ್ಕಾವು ನಿವಾಸಿಗಳಾದ ಅಜ್ಮಲ್ ಮತ್ತು ಬಾದುಷಾ ಮಳೆಯ ನಡುವೆಯೇ ಸಾಬೂನು ಹಚ್ಚಿಕೊಂಡು ಬೈಕ್ ಓಡಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ವೀಡಿಯೊ ವೈರಲ್ ಆದ ನಂತರ, ರಸ್ತೆಯಲ್ಲಿ ಅಪಾಯಕಾರಿ ಚಾಲನೆಯಲ್ಲಿ ತೊಡಗಿದ್ದಕ್ಕಾಗಿ ಪೊಲೀಸರು ಅವರಿಗೆ 5,000 ರೂ. ದಂಡ ವಿಧಿಸಿ ಪ್ರಕರಣವನ್ನು ದಾಖಲಿಸಿದ್ದಾರೆ.

ಕ್ರೀಡಾಕೂಟ ಮುಗಿಸಿಕೊಂಡು ಬರುತ್ತಿದ್ದು, ಮಳೆ ಬರುತ್ತಿದ್ದರಿಂದ ಮೋಜಿಗಾಗಿ ಸವಾರಿ ಮಾಡುತ್ತಿದ್ದು ಸ್ನಾನಕ್ಕೆ ಯತ್ನಿಸಿರುವುದಾಗಿ ಯುವಕರು ಪೊಲೀಸರಿಗೆ ತಿಳಿಸಿದ್ದಾರೆ. ನವೆಂಬರ್ 1 ರಂದು ಭರಣಿಕಾವು ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next