ಮನುಷ್ಯ ಬೆಳೆದಂತೆ ಆತನ ಬುದ್ದಿ ಮತ್ತೆಯೂ ಬೆಳೆಯುತ್ತದೆ ಎಂಬುದಕ್ಕೆ ಈ ವಿಡಿಯೋ ಪ್ರಕ್ತ್ಯಕ್ಷ ಸಾಕ್ಷಿ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಏನಾದರೊಂದು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇರುತ್ತಾರೆ ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವನ್ನು ಮಾಡುತ್ತಾರೆ ಹೀಗೆ ಕೆಲವು ಉತ್ತಮ ಸಂದೇಶ ನೀಡುವಂತದ್ದಾದರೆ ಇನ್ನೂ ಕೆಲವು ಸಂದೇಶದ ಜೊತೆಗೆ ಹಾಸ್ಯಾಸ್ಪದವಾಗಿಯೂ ಇರುತ್ತದೆ.
ಇಲ್ಲೊಂದು ವಿಡಿಯೋ ನೋಡಿ ಇದರಲ್ಲಿ ವ್ಯಕ್ತಿಯೊಬ್ಬ ಮಿಕ್ಸಿ ಜಾರ್ ಗೆ ಜ್ಯೂಸ್ ಮಾಡಲು ಹಣ್ಣುಗಳನ್ನು ಹಾಕಿದ್ದಾನೆ ಆದರೆ ಆತ ಜ್ಯೂಸ್ ಮಾಡಲು ಮಿಕ್ಸಿ ಬಳಸುವ ಬದಲು ಡ್ರಿಲ್ಲಿಂಗ್ ಮೆಷಿನ್ ಬಳಸಿದ್ದಾನೆ.
ಇಲ್ಲಿ ಆತ ಮಿಕ್ಸಿ ಜಾರನ್ನು ಕೈಯಲ್ಲಿ ಹಿಡಿಕೊಂಡು ಇನ್ನೊಂದು ಕೈಯಲ್ಲಿ ಡ್ರಿಲ್ಲಿಂಗ್ ಮೆಷಿನ್ ಹಿಡಿದು ಮಿಕ್ಸಿ ಜಾರಿಗೆ ಸಿಕ್ಕಿಸಿ ಡ್ರಿಲ್ ಮೆಷಿನ್ ಆನ್ ಮಾಡಿದ್ದಾನೆ ಈ ವೇಳೆ ಮಿಕ್ಸಿ ಜಾರ್ ನಲ್ಲಿದ್ದ ಹಣ್ಣುಗಳು ಜ್ಯೂಸ್ ಆಗಿ ಮಾರ್ಪಟ್ಟಿದೆ. ಈ ವಿಡಿಯೋ ಇನ್ಸ್ಟಾ ಗ್ರಾಮ್ ನಲ್ಲಿ ಹರಿದಾಡುತ್ತಿದ್ದು ಕೇವಲ ಆರು ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.
ಇದನ್ನೂ ಓದಿ: FIR: ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಸೇತುವೆ ಉದ್ಘಾಟನೆ: ಆದಿತ್ಯ ಠಾಕ್ರೆ ವಿರುದ್ಧ ಕೇಸ್