Advertisement

ಜನ್ಮದಿನದಂದು ಆಶೀರ್ವಚನ ನೀಡುತ್ತಿರುವಾಗಲೇ ಬಳೋಬಾಳ ಶ್ರೀಗಳು ವಿಧಿವಶ: ವಿಡಿಯೋ ವೈರಲ್

02:37 PM Nov 16, 2021 | Team Udayavani |

ಬೆಳಗಾವಿ: ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಸ್ವಾಮಿಗಳು ತಮ್ಮ ಜನ್ಮದಿನದಂದು ಪ್ರವಚನ ಮಾಡುತ್ತಿರುವಾಗಲೇ ವೇದಿಕೆ ಮೇಲೆ‌ ಕುಸಿದು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ನವೆಂಬರ್ 6ರಂದು ಈ ಘಟನೆ ನಡೆದಿದ್ದು, ಅದರ ವಿಡಿಯೋ ಈಗ ವೈರಲ್ ಆಗುತ್ತಿದೆ.

Advertisement

ಬಳೋಬಾಳ ಗ್ರಾಮದ‌ ಬಸವಯೋಗ ಮಂಟಪ ಟ್ರಸ್ಟ್ ನ ಬಳೋಬಾಳ ಮಠದ ಶ್ರೀ ಸಂಗನಬಸವ ಸ್ವಾಮೀಜಿ (53) ಲಿಂಗೈಕ್ಯರಾಗಿದ್ದಾರೆ.

ಇದನ್ನೂ ಓದಿ:ಪದವಿಯಲ್ಲಿ ಕನ್ನಡ ಕಡ್ಡಾಯ: ಸ್ವಾಗತಾರ್ಹ ಬೆಳವಣಿಗೆ ಎಂದ ನೆಟ್ಟಿಗರು

ಶ್ರೀಗಳು ತಮ್ಮ ಜನ್ಮದಿನದಂದು ಪ್ರವಚನ ಮಾಡುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಅವರು ವೇದಿಕೆಯ ಮೇಲೆ ನಿಧನರಾಗಿದ್ದಾರೆ. ನವೆಂಬರ್ 6 ರಂದು ಆಶೀರ್ವಚನ ನೀಡುತ್ತಿರುವಾಗ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಕ್ತರೊಬ್ಬರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next