ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವೀಡಿಯೋಗಳು ಕಾಡು ಪ್ರಾಣಿಗಳಾಗಿದ್ದರೆ, ಕೆಲವು ಸಾಕು ಪ್ರಾಣಿಗಳದ್ದು ಕೂಡಿದೆ.
ಸಾಮಾನ್ಯವಾಗಿ ಜನರು ತಮ್ಮ ಸಾಕುಪ್ರಾಣಿಗಳ ಕೆಲವು ಸುಂದರ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಾರೆ ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಾರೆ, ಇಂತಹ ಹಲವಾರು ವೀಡಿಯೊಗಳನ್ನು ಪ್ರತಿದಿನ ಇಂಟರ್ನೆಟ್‌ನಲ್ಲಿ ನಾವು ನೋಡುತ್ತೇವೆ.
ಇದೇ ರೀತಿ ಜರ್ಮನ್ ಶೆಫರ್ಡ್ ನಾಯಿಯೊಂದು ದೇವಸ್ಥಾನದ ಗಂಟೆ ಬಾರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಂದಹಾಗೆ ದೇವಸ್ಥಾನದ ಒಳಗೆ ಅಳವಡಿಸಿದ್ದ ಗಂಟೆಗೆ ಕಟ್ಟಿದ ದಾರವನ್ನು ನಾಯಿ ಬಾಯಿಯಲ್ಲಿ ಕಚ್ಚಿ ಎಳೆಯುವುದನ್ನು ಕಾಣಬಹುದಾಗಿದೆ.
ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣ ಇನ್ಸ್ಟಾ ಗ್ರಾಮ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದು ಇದುವರೆಗೆ 3.5 ಮಿಲಿಯನ್‌ಗಿಂತಲೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ 4 ಲಕ್ಷ 37 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಜೊತೆಗೆ ವಿಡಿಯೋಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : 76 ವರ್ಷ ವಯಸ್ಸಾಗಿದೆ, ಇನ್ನು ಎಷ್ಟು ವರ್ಷ ಬದುಕುತ್ತೀನೋ ಗೊತ್ತಿಲ್ಲ: ಸಿದ್ದರಾಮಯ್ಯ