Advertisement

ಸ್ನಾನ ಮಾಡಿಸಿಕೊಳ್ಳಲು ಇಷ್ಟವಿಲ್ಲದ ನಾಯಿಯ ಐಡಿಯಾ ಇದು : ಈ ನಟನೆಗೆ ನೆಟ್ಟಿಗರು ಫಿದಾ!

01:25 PM Apr 20, 2021 | Team Udayavani |

ನವದೆಹಲಿ : ನಾಯಿಗಳಿಗೆ ಸ್ನಾನ ಮಾಡಿಸುವುದು ಅಂದರೆ ಅದರ ಮಾಲೀಕರಿಗೆ ತಲೆ ನೋವಿನ ಕೆಲಸ. ಕೆಲವು ನಾಯಿಗಳೋ, ಸ್ನಾನ ಮಾಡಿಸಿಕೊಳ್ಳಲು ದೊಡ್ಡ ಕಿರಿ ಕಿರಿ ಮಾಡುತ್ತವೆ. ಬಾತ್ ರೋಮ್ ಗೆ ಕರೆದುಕೊಂಡು ಹೋಗುತ್ತಿದ್ದರೆ ಕೈಯಿಂದ ಬಿಡಿಸಿಕೊಂಡು ಓಡಿ ಹೋಗುವುದು, ಇಲ್ಲ ಅಂದರೆ ಇಷ್ಟವಿಲ್ಲದೆ ಕುಣಿದಾಡುವುದನ್ನು ಮಾಡುತ್ತದೆ. ಆದ್ರೆ ಇಲ್ಲೊಂದು ಶ್ವಾನ ತನಗೆ ಸ್ನಾನ ಮಾಡಿಸುತ್ತಾರೆ ಎಂದು ಗೊತ್ತಾದಾಗ ಸಖತ್ ಐಡಿಯಾ ಮಾಡಿ ನಟಿಸಿದೆ. ಇದನ್ನು ನೋಡಿದ ನೆಟ್ಟಿಗರು ಈ ನಟನೆಗೆ ಆಸ್ಕರ್ ಪ್ರಶಸ್ತಿ ಕೊಡಲೇ ಬೇಕು ಎಂದು ಕ್ಯೂಟ್ ಕಮೆಂಟ್ ಮಾಡಿದ್ದಾರೆ.

Advertisement

ಹೌದು ನಾಯಿಯೊಂದು ತನಗೆ ಸ್ನಾನ ಮಾಡಿಸುತ್ತಾರೆ ಎಂದು ತಿಳಿದು ಬಾತ್ ರೂಮಿನಲ್ಲಿ ಸತ್ತ ರೀತಿಯಲ್ಲಿ ನಟನೆ ಮಾಡಿದೆ. ಆ ನಾಯಿಯನ್ನ ತಕ್ಷಣ ನೋಡಿದರೆ ಅಯ್ಯೋ.. ಪಾಪ ನಾಯಿಯು ಸತ್ತು ಹೋಗಿದೆ ಎಂದು ಭಾಸವಾಗುತ್ತದೆ. ಮಾಲೀಕರು ಅನ್ನು ಅಲುಗಾಡಿಸಿದರೂ ಕೂಡ ಎಚ್ಚರವಾಗದ ರೀತಿಯಲ್ಲಿ ಮಲಗಿದೆ.

ಕೊನೆಯಲ್ಲಿ ನಾಯಿಯ ಬಾಯಿಯನ್ನು ಹಿಡಿದು ಎಳೆದಾಗ ಮಿಣ ಮಿಣ ಕಣ್ಣು ಬಿಟ್ಟು ನೋಡಿದೆ. ಈ ವಿಡಿಯೋ ನೋಡಿದರೆ ಎಲ್ಲರಿಗೂ ನಗು ಬಂದೇ ಬರುತ್ತದೆ. ನಾಯಿಗಳು ಕೂಡ ಇಷ್ಟು ಚೆನ್ನಾಗಿ ನಟನೆ ಮಾಡುತ್ತವೆಯೇ ಎಂದೆನಿಸುತ್ತದೆ.

ಸದ್ಯ ನಾಯಿಯ ಈ ನಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಒಬ್ಬ ನೆಟ್ಟಿಗರು ಈ ನಟನೆಗೆ ಆಸ್ಕರ್ ಪ್ರಶಸ್ತಿ ಕೊಡಬೇಕು ಎಂದಿದ್ದಾರೆ. ಇನ್ನು ಹಲವಾರು ನೆಟ್ಟಿಗರು ಲವ್ವಿಂಗ್ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next