ನವದೆಹಲಿ: ಚೀನಾದಲ್ಲಿ ಕೋವಿಡ್ ಮತ್ತೆ ಅಬ್ಬರಿಸುತ್ತಿದೆ. ವರದಿಯ ಪ್ರಕಾರ ಈ ವಾರದ ಒಂದು ದಿನ 37 ಮಿಲಿಯನ್ ಕೋವಿಡ್ ಪ್ರಕರಣಗಳು ಚೀನಾದಲ್ಲಿ ಪತ್ತೆಯಾಗಿದೆ. ನಿತ್ಯ ನೂರಾರು ಸಾವುಗಳು ಸಂಭವಿಸುತ್ತಿವೆ.
ಕಠಿಣ ನಿಯಮಗಳ ಹೊರತಾಗಿಯೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಕೈಮೀರಿ ಹೋಗುವ ಹಂತಕ್ಕೆ ತಲುಪಿದೆ. ಜನ ಸಾಮಾನ್ಯರು ಮನೆಯಿಂದ ಹೊರ ಬಂದರೂ ಜೀವ ಕೈಯಲ್ಲಿಡಿದು ಬರುವ ಸ್ಥಿತಿಯಲ್ಲಿದ್ದಾರೆ. ಆಸ್ಪತ್ರೆಯ ಬೆಡ್ ಗಳು ಭರ್ತಿಯಾಗಿವೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೋವಿಡ್ ನಿಂದ ರಕ್ಷಿಸಲು ಇರುವ ಕೊಡೆವೊಂದು ಹಾಕಿಕೊಂಡಿರುವ ದಂಪತಿಯ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಬಿಜೆಪಿಯು ರಾಮನಿಂದ ಸೀತೆಯನ್ನು ಬೇರ್ಪಡಿಸಿದೆ: ಕಾಂಗ್ರೆಸ್ ನಾಯಕ ಗೆಹ್ಲೋಟ್
ಮಾರುಕಟ್ಟೆಯಲ್ಲಿ ದಂಪತಿ ದೊಡ್ಡ ಪ್ಲ್ಯಾಸ್ಟಿಕ್ ನೊಳಗೆ ಇದ್ದುಕೊಂಡು ಬಂದಿದ್ದಾರೆ. ಇದೊಂದು ಕೊಡೆ, ಈ ಕೊಡೆಯಲ್ಲಿ ಇಬ್ಬರು ಇದ್ದುಕೊಂಡು ಬರಬಹುದು. ಮಾರುಕಟ್ಟೆಗೆ ಬಂದ ದಂಪತಿಗಳು ಕೊಡೆಯ ಪ್ಲ್ಯಾಸ್ಟಿಕನ್ನು ಸ್ವಲ್ಪ ಮೇಲಾಕ್ಕೆತ್ತಿ ಹಣ ಕೊಡುತ್ತಾರೆ. ಯಾರೊಂದಿಗೆ ಮಾತಾನಾಡದೆ, ಕೋವಿಡ್ ನಿಂದ ರಕ್ಷಿಸಲು ಇದೊಂದು ಉತ್ತಮ ಉಪಾಯವೆಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋವನ್ನು ಡೈಲಿ ಚೀನಾ ಪೋಸ್ಟ್ ಮಾಡಿದ್ದು, ಉಮಾಶಂಕರ್ ಎನ್ನುವವರು ಹಂಚಿಕೊಂಡಿದ್ದಾರೆ, ಇದುವರೆಗೆ 50 ಸಾವಿರಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ.