ಗುವಾಹಟಿ: ನೀವು ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ನಿಮ್ಮ ಫುಡ್ ಆರ್ಡರ್ ಗೆ ಬರುವ ಡೆಲಿವೆರಿ ಬಾಯ್ ಹತ್ತಿರ ಯಾವತ್ತದ್ರೂ ಹಾಡು ಹಾಡಿಸಿದ್ದೀರ? ಇಂಥದ್ದೊಂದು ಪ್ರಸಂಗ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಇಲ್ಲೂಬ್ಬ ಹುಡುಗ ಫುಡ್ ಡೆಲಿವೆರಿ ಮಾಡಿ ಗ್ರಾಹಕನ ಮನವಿಗೆ ಸ್ಪಂದಿಸಿ ಹಳೆಯ ಹಾಡೊಂದನ್ನು ಹಾಡಿದ್ದಾನೆ. ಈ ವೀಡಿಯೋ ಈಗ ವೈರಲ್ ಆಗಿದೆ.
ಪ್ರಾಂಜಿತ್ ಹಲೋಯಿ ಎನ್ನುವ ಹುಡುಗ ಝೋಮೇಟೋದಲ್ಲಿ ಪಾರ್ಟ್ ಟೈಮ್ ಕಾಯಕವನ್ನು ಮಾಡುವಾತ. ಎಂದಿನಂತೆ ಆರ್ಡರ್ ಗಾಗಿ ಕಾಯುತ್ತಿದ್ದ ಈ ವೇಳೆಯಲ್ಲಿ ಅನಿರ್ಬನ್ ಚಕ್ರಬರ್ತಿ ಎನ್ನುವವರು ಫುಡ್ ಆರ್ಡರ್ ಮಾಡಿದ್ದಾರೆ. ಆರ್ಡರ್ ಮಾಡುವಾಗ ಅನಿರ್ಬನ್ ಪ್ರಾಂಜಿತ್ ನ ಪ್ರೊಫೈಲ್ ಅನ್ನು ಗಮನಿಸಿದ್ದಾರೆ. ಅದರಲ್ಲಿ ಪ್ರಾಂಜಿತ್ ಒಂದು ದಿನ ತಾನೊಬ್ಬ ಸಿಂಗರ್ ಆಗುವ ಆಸೆಯನ್ನು ನಮೋದಿಸಿ ಇರುತ್ತಾನೆ. ಇದನ್ನು ಗಮನಿಸಿದ ಅನಿರ್ಬನ್ ಪ್ರಾಂಜಿತ್ ನ ಸಣ್ಣ ಆಸೆಯನ್ನು ಪೂರ್ತಿಗೊಳಿಸುತ್ತಾರೆ.
ಫುಡ್ ಡೆಲಿವೆರಿಗೆ ಬಂದ ಪ್ರಾಂಜಿತ್ ನನ್ನು ಮಾತಾಡಿಸಿ ಒಂದು ಹಾಡು ಹಾಡಲು ಹೇಳುತ್ತಾರೆ. ಗ್ರಾಹಕನ ಈ ಮನವಿಯನ್ನು ಪ್ರಾಂಜಿತ್ ಒಪ್ಪಿ ಮೇಲೋಡಿ ಹಾಡನ್ನು ಹಾಡುತ್ತಾನೆ. 1976 ರ ಚಿತ್ರ ಚಿತ್ ಚೋರ್ ಚಿತ್ರದ ‘ಗೌರಿ ತೇರಾ ಗೌನ್ ಬಡಾ ಪ್ಯಾರಾ’ ಎನ್ನುವ ಹಾಡನ್ನು ಹಾಡುತ್ತಾನೆ. ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಫೇಸ್ ಬುಕ್ ಹಾಗೂ ಸಾಮಾಜಿಕ ಜಾಲತಣದಲ್ಲಿ ಆಪ್ಲೋಡ್ ಮಾಡುತ್ತಾರೆ ಅನಿರ್ಬನ್. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ 10 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು,8 ಸಾವಿರಕ್ಕೂ ಅಧಿಕ ಶೇರ್ ಆಗಿದೆ. ಎಲ್ಲೆಡೆಯೂ ಪ್ರಾಂಜಿತ್ ಅದ್ಭುತ ಧ್ವನಿ ಗೆ ಜನರಿಂದ ಬೆಂಬಲದ ಮಾತುಗಳು ಕೇಳಿ ಬರುತ್ತಿದೆ. ಪ್ರಾಂಜಿತ್ ಗೆ ಸೂಕ್ತ ವೇದಿಕೆ ಸಿಗಲಿ,ಅವರ ಪ್ರತಿಭೆಯನ್ನು ಜನ ಗುರುತಿಸಲಿ ಎನ್ನುವ ಶುಭ ನುಡಿಯನ್ನು ಅನಿರ್ಬನ್ ಹೇಳಿದ್ದಾರೆ.