Advertisement

ಕಾರಿನ ಮೇಲೆ ಲಿಪ್‌ಸ್ಟಿಕ್‌ ರಂಗೋಲಿ! ವಿಡಿಯೋ ಭಾರೀ ವೈರಲ್‌

09:11 PM Oct 21, 2022 | Team Udayavani |

ಮಕ್ಕಳಿರುವ ಮನೆಯ ಗೋಡೆಗಳಲ್ಲಿ ಚಿತ್ರಗಳು ಕಾಣಿಸುವುದು ಸಾಮಾನ್ಯ. ಆದರೆ ಈ ಮಗು ಮಾಡಿರುವ ಕೆಲಸ ನೋಡಿದರೆ ಮಗುವಿನ ಪೋಷಕರಿಗೆ ಒಂದು ಕ್ಷಣಕ್ಕೆ ಸಿಟ್ಟು, ದುಃಖ ಎರಡೂ ಒಟ್ಟಾಗಿ ಬರುವುದು ಗ್ಯಾರಂಟಿ.

Advertisement

ಏಕೆಂದರೆ ಪುಟಾಣಿ ಮಗುವು ಬಿಳಿ ಕಾರಿನ ಮೇಲೆ ಲಿಪ್‌ಸ್ಟಿಕ್‌ನಿಂದ ಮನಸೋಇಚ್ಛೆ ಗೀಚಿದೆ. ಅದಕ್ಕೆಂದೇ ಹತ್ತಾರು ಲಿಪ್‌ಸ್ಟಿಕ್‌ಗಳನ್ನೂ ಖಾಲಿ ಮಾಡಿದೆ.

ಮಗು ಈ ರೀತಿ ಕಾರಿನ ಮೇಲೆ ಚಿತ್ರ ಬರೆಯುವ ವಿಡಿಯೋವನ್ನು ಮೊರಿಸ್ಸಾ ಎನ್ನುವವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಭಾರೀ ವೈರಲ್‌ ಆಗಿದ್ದು, ನೆಟ್ಟಿಗರು ಕಾರು ಹಾಗೂ ಲಿಪ್‌ಸ್ಟಿಕ್‌ ಮಾಲೀಕರ ಬಗ್ಗೆ ಅನುಕಂಪ ತೋರಿಸಲಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next