ತಿರುವನಂತಪುರಂ: ಕೇರಳ ಪೊಲೀಸರೊಬ್ಬರು ಪುಟ್ಟಪಕ್ಷಿಯೊಂದು ಮಕರಂದ ಹೀರಲು ಸಹಾಯ ಮಾಡಿದ್ದಾರೆ. 25 ಸೆಕೆಂಡ್‌ಗಳ ಈ ವಿಡಿಯೊವನ್ನು ನೋಡಿದ ಜನ ಆರ್ದ್ರಗೊಂಡಿದ್ದಾರೆ. ಸುಂದರವಾದ, ಗುಬ್ಬಚ್ಚಿಗಿಂತ ಸಣ್ಣಗಾತ್ರದ ಹಕ್ಕಿಯೊಂದು ಅಧಿಕಾರಿಯೊಬ್ಬರ ಸಮವಸ್ತ್ರದ ದಾರದ ಮೇಲೆ ಕುಳಿತು ಹೂವಿನ ಜೇನನ್ನು ಹೀರಲು ಆರಂಭಿಸಿದೆ. ಆಗ ಅಧಿಕಾರಿ ಅದಕ್ಕೆ ತೊಂದರೆಯಾಗದಂತೆ ಹೂವನ್ನು ಬೇರೆಬೇರೆ ರೀತಿಯಲ್ಲಿ ಹಿಡಿದು ನೆರವು ನೀಡಿದ್ದಾರೆ. ಪಕ್ಷಿ ಪೊಲೀಸ್ ಅಧಿಕಾರಿಯ ಈ ನೆರವನ್ನು ಸಂತೋಷದಿಂದ ಸ್ವೀಕರಿಸಿದಂತೆ ಕಾಣಿಸುತ್ತದೆ. ಏ.22ರಂದು ಈ ವಿಡಿಯೊವನ್ನು ಕೇರಳ ಪೊಲೀಸರು ಬಿಡುಗಡೆ ಮಾಡಿದರು.
ಇಲ್ಲಿಯವರೆಗೆ 18,000ಕ್ಕೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಮೆಚ್ಚಿಕೊಂಡಿದ್ದಾರೆ. ಪೊಲೀಸರೆಂದರೆ ಜನಸಾಮಾನ್ಯರು ಬೆಚ್ಚಿಬೀಳುತ್ತಾರೆ. ಅದೇ ಒಂದು ಪುಟ್ಟ ಪಕ್ಷಿ ಅಷ್ಟು ಸುಂದರವಾಗಿ ಹೊಂದಿಕೊಂಡ ದೃಶ್ಯ ಗಮನ ಸೆಳೆದಿದೆ.