ಉತ್ತರ ಪ್ರದೇಶ: ಕಾಡು ಪ್ರಾಣಿಗಳ ಜೊತೆ ಎಚ್ಚರದಿಂದ ಇರಬೇಕು ಎನ್ನುವುದು ಎಲ್ಲರಿಗೂ ಗೊತ್ತು ಯಾವ ಕಾಲದಲ್ಲಿ ಕಾಡು ಪ್ರಾಣಿಗಳು ಏನು ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಆದಷ್ಟು ಕಾಡು ಪ್ರಾಣಿಗಳಿಂದ ದೂರವಿರುವುದು ಸುರಕ್ಷಿತ. ಆದರೆ ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳ ಹಿಂಡು ರಸ್ತೆ ದಾಟುತ್ತಿದ್ದಾಗ ಮೂವರು ವ್ಯಕ್ತಿಗಳು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ ಈ ವೇಳೆ ಆನೆಗಳ ಹಿಂಡು ಈ ಮೂವರ ಮೇಲೆ ದಾಳಿಗೆ ಮುಂದಾದ ಘಟನೆ ನಡೆದಿದೆ.
ರಾಷ್ಟ್ರೀಯ ಉದ್ಯಾನದ ಬಳಿ ಆನೆಗಳ ಹಿಂಡು ಯುವಕರನ್ನು ಓಡಿಸಿಕೊಂಡು ಬಂದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜೀವ ಉಳಿಸಿಕೊಳ್ಳಲು ಮೂವರು ಎದ್ನೋ ಬಿದ್ನೋ ಎಂದು ಓಡಿ ಜೀವ ಉಳಿಸಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನವನದ ಬಳಿ ಮೂವರು ಯುವಕರು ವಾಹನದಲ್ಲಿ ಬರುತ್ತಿದ್ದ ವೇಳೆ ಆನೆಗಳ ಹಿಂಡು ರಸ್ತೆ ದಾಟುತ್ತಿತ್ತು ಈ ವೇಳೆ ಮೂವರು ಯುವಕರು ಆನೆಗಳ ಜೊತೆ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ ಅದಕ್ಕಾಗಿ ಮೂವರು ಆನೆಗಳು ಇದ್ದ ಕಡೆ ತೆರಳಿದ್ದಾರೆ ಇದನ್ನು ದೂರದಲ್ಲಿ ಇದ್ದ ಇತರರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನೇನು ಸೆಲ್ಫಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಒಂದು ಆನೆ ಈ ಮೂವರನ್ನು ಅಟ್ಟಾಡಿಸಿಕೊಂಡು ಬಂದಿದೆ ಈ ವೇಳೆ ಮೂವರು ಜೀವ ಭಯದಲ್ಲಿ ಓಡಿ ಬಂದಿದ್ದಾರೆ ಓಡುವ ಭರದಲ್ಲಿ ಓರ್ವ ರಸ್ತೆಯಲ್ಲೇ ಬಿದ್ದಿದ್ದಾನೆ ಈ ವೇಳೆ ಆತನ ಮೊಬೈಲ್ ರಸ್ತೆಗೆ ಬಿದ್ದಿದೆ ಜೀವ ಭಯದಲ್ಲಿದ್ದ ಯುವಕ ಮೊಬೈಲ್ ಅಲ್ಲೇ ಬಿಟ್ಟು ಎದ್ದು ಓಡಿ ಬಂದು ಜೀವ ಉಳಿಸಿಕೊಂಡಿದ್ದಾನೆ.
ಈ ಎಲ್ಲ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ವೈರಲ್ ಆಗಿದೆ. ಆನೆಗಳನ್ನು ದೂರದಲ್ಲೇ ನೋಡಿ ಹೋಗುತ್ತಿದ್ದಾರೆ ಏನೂ ಆಗುತ್ತಿರಲಿಲ್ಲ ಆದರೆ ಅದರ ಹತ್ತಿರ ಹೋಗಿ ಅವುಗಳಿಗೆ ತೊಂದರೆ ಕೊಟ್ಟದ್ದಕ್ಕೆ ಕಾಡು ಪ್ರಾಣಿಗಳು ದಾಳಿಗೆ ಮುಂದಾಗಿವೆ.
ಇದನ್ನೂ ಓದಿ: Btown: ಅಂದು ಹಣಕ್ಕಾಗಿ ಬಟರ್ ಚಿಕನ್ ಮಾರಾಟ ಮಾಡುತ್ತಿದ್ದವ ಇಂದು ಬಾಲಿವುಡ್‌ನ ಸ್ಟಾರ್ ನಟ