Advertisement

ವೈರಲ್ ಆಗುತ್ತಿದೆ ಕತ್ರಿನಾ ಕೈಫ್ ಮೆಹಂದಿ ಫೋಟೋ: ಅಸಲಿಯತ್ತೇನು?

10:54 AM Dec 09, 2021 | Team Udayavani |

ಜೈಪುರ: ಬಾಲಿವುಡ್ ಸ್ಟಾರ್ ಮದುವೆ ಸಡಗರದಲ್ಲಿದೆ. ಖ್ಯಾತ ನಟರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ರ ವಿವಾಹವು ಗುರುವಾರ ರಾಜಸ್ಥಾನದ ಸಿಕ್ಸ್ತ್ ಸೆನ್ಸ್ ರೆಸಾರ್ಟ್ ನಲ್ಲಿ ನಡೆಯುತ್ತಿದೆ. ಭಾರೀ ಭದ್ರತೆಯಲ್ಲಿ ಈ ಲವ್ ಬರ್ಡ್ಸ್ ಗಳ ವಿವಾಹ ನಡೆಯುತ್ತಿದ್ದು, ಬರುವ ಅತಿಥಿಗಳು ವಿವಾಹ ಸಮಾರಂಭಕ್ಕೆ ಮೊಬೈಲ್ ಫೋನ್ ತರುವುದನ್ನೂ ನಿಷೇಧಿಸಲಾಗಿದೆ.

Advertisement

ಆದರೆ ಇದೀಗ ಕತ್ರಿನಾ ಕೈಫ್ ರ ಮೆಹಂದಿ ಕಾರ್ಯಕ್ರಮದ್ದು ಎನ್ನಲಾದ ಫೋಟೋವೊಂದು ವೈರಲ್ ಆಗುತ್ತಿದೆ. ಹಸಿರು ಸೀರೆ ಧರಿಸಿರುವ ನಟಿ ಕತ್ರಿನಾ ಕೈಫ್ ನೃತ್ಯ ಮಾಡುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ಕತ್ರಿನಾ ಕೈಫ್ ಕೈಯಲ್ಲಿ ಆಭರಣಗಳು ಮತ್ತು ಮೊಣಕೈ ಉದ್ದದ ಮೆಹೆಂದಿ ಹಾಕಿರುವುದನ್ನು ಕಾಣಬಹುದು. “ಅವರು ಅಕ್ಷರಶಃ ಆನಂದಿಸುತ್ತಿದ್ದಾರೆ, ಅವರ ವಿಶೇಷ ದಿನದಂದು ತುಂಬಾ ಸಂತೋಷದಿಂದ ಹೊಳೆಯುತ್ತಿದ್ದಾರೆ” ಎಂದು ಕತ್ರಿನಾ ಅಭಿಮಾನಿ ಪೇಜ್ ನಲ್ಲಿ ಬರೆಯಲಾಗಿದೆ.

Advertisement

ಆದರೆ ಇದರ ಅಸಲಿಯತ್ತು ಬೇರೆಯದೇ ಇದೆ. ಕಳೆದ ವರ್ಷ ನಡೆದ ಜಾಹೀರಾತು ಶೂಟ್ ನ ಫೋಟೋಗಳಿವು. ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಕತ್ರಿನಾ ಕೈಫ್, ನಾಗಾರ್ಜುನ, ಶಿವ ರಾಜ್‌ಕುಮಾರ್ ಮತ್ತು ಪ್ರಭು ಒಳಗೊಂಡ ಕಲ್ಯಾಣ್ ಜ್ಯುವೆಲರ್ಸ್‌ನ ಜಾಹೀರಾತಿನ ಕೆಲವು ಬಿಟಿಎಸ್ ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದೇ ಚಿತ್ರಗಳು ಇದೀಗ ಕತ್ರಿನಾ ಮೆಹಂದಿ ಕಾರ್ಯಕ್ರಮದ ಚಿತ್ರಗಳು ಎಂಬಂತೆ ವೈರಲ್ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next