Advertisement
ಕೊರಟಗೆರೆ ತಾಲೂಕಿನಲ್ಲಿ ಕಳೆದ 15 ದಿನದಿಂದ ಚಿಕ್ಕ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಹೆಚ್ಚಾಗಿದ್ದು, ಪೋಷಕರಲ್ಲಿ ಆತಂಕ ಹುಟ್ಟಿಸಿದೆ. ಕೊರೊನಾ ಮೊದಲ ಹಾಗೂ ಎರಡನೇ ಅಲೆ ಸಾರ್ವಜನಿಕರ ಬದುಕನ್ನು ಸಂಕಷ್ಟಗೊಳಿಸಿ, ದಿಕ್ಕು ಕಾಣದಂತೆ ಮಾಡಿದಂತ ಸನ್ನಿವೇಶದಲ್ಲಿ ಮೂರನೇ ಅಲೆ ಚಿಕ್ಕ ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಲ್ಲಿದೆ ಎನ್ನುವ ಸಂದರ್ಭದಲ್ಲಿ ತಾಲೂಕಿನಲ್ಲಿ ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
Related Articles
Advertisement
ರಾಜ್ಯ ಸರ್ಕಾರ ಕೊರೊನಾದ ನಿಯಮಸಡಿಲಿಸಿ, ಜನ ಜೀವನ ಯಥಾಸ್ಥಿತಿಗೆ ಮರಳಿದ್ದು, ಶಾಲಾ ಕಾಲೇಜುಗಳು ಪ್ರಾರಂಭಗೊಂಡು ವಿದ್ಯಾರ್ಥಿಗಳು ಶಾಲೆಗಳತ್ತ ಮುಖಮಾಡುವ ಸಂದರ್ಭದಲ್ಲಿ ಮಕ್ಕಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದ್ದು, ಕೊರಟಗೆರೆ ತಾಲೂಕಿನಲ್ಲೇ ಸಾವಿರಾರು ಜನ ಕೊರೊನಾ ಲಕ್ಷಣಗಳಿಂದ ನಿತ್ಯ ಆಸ್ಪತ್ರೆಗೆ ಹೋಗುವಂತಾಗಿದೆ.
ಮಕ್ಕಳಿಗೆ ಕೊರೊನಾ ಲಕ್ಷಣಗಳು ಕಂಡ ಕೂಡಲೇ ಆಸ್ಪತ್ರೆಗೆ ಹೋಗುತ್ತಿದ್ದು, ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆ ಮಕ್ಕಳ ಆರೋಗ್ಯ ರಕ್ಷಣೆಗೆ ಹೆಚ್ಚು ಗಮನ ನೀಡಬೇಕಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಿಕೋ ಎನ್ನುತ್ತಿದೆ ತಾಲೂಕು ಆಸ್ಪತ್ರೆ: ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ.ನಾಗಭೂಷನ್, ಡಾ.ಪ್ರಕಾಶ್, ಡಾ. ಅನಿಲ್ ಹಾಗೂ ಡಾ.ಜಯಂತ್ ಎಂಬ ವೈದ್ಯರು ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆ ವೈದ್ಯರು ಉತ್ತಮವಾಗಿ ಸ್ಪಂದಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.