Advertisement
ಸಾಮಾನ್ಯವಾಗಿ ಪ್ರತೀ ಮಳೆಗಾಲದಲ್ಲಿ ವೈರಾಣು ಜ್ವರ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಹವಾಮಾನ ವೈಪರೀತ್ಯ. ಇದುವರೆಗೆ ರಾಜ್ಯದಲ್ಲಿ ವರದಿಯಾಗುತ್ತಿದ್ದ ವೈರಾಣು ಜ್ವರಗಳು ಹೆಚ್ಚೆಂದರೆ ಮೂರರಿಂದ ಐದು ದಿನಗಳವರೆಗೆ ಕಾಡುತ್ತಿತ್ತು. ಆದರೆ ಕಳೆದೊಂದು ತಿಂಗಳಿನಿಂದ ವರದಿಯಾಗುತ್ತಿರುವ ಪ್ರಕರಣಗಳು ವೇಗವಾಗಿ ಹರಡುವುದರ ಜತೆಗೆ ಗುಣಮುಖರಾಗಲು ಕನಿಷ್ಠವೆಂದರೂ 6ರಿಂದ 10 ದಿನಗಳು ಬೇಕಾಗುತ್ತಿದೆ.
Related Articles
Advertisement
ವೈರಾಣು ಜ್ವರ ಕಾಣಿಸಿಕೊಂಡರೆ ತತ್‌ಕ್ಷಣ ವೈದ್ಯರನ್ನು ಭೇಟಿ ಮಾಡಿ, ಔಷಧ ಪಡೆಯಬೇಕು. ಸ್ವಯಂ ವೈದ್ಯ ಪದ್ಧತಿಯಿಂದ ದೂರ ಇರಬೇಕು. ಮಕ್ಕಳಲ್ಲಿ ವೈರಾಣು ಜ್ವರ ಕಾಣಿಸಿಕೊಂಡರೆ ಶಾಲೆಗೆ ಕಳಿಸಬಾರದು. ಜ್ವರದಿಂದ ಬಳಲುವವರಿಂದ ದೂರವಿರಬೇಕು. ರೋಗಿಗಳು ಬಳಸಿದ ಕರವಸ್ತ್ರ, ಮಾಸ್ಕ್ ಬಳಸಬಾರದು. ಜ್ವರ ಬಂದಿರುವ ವ್ಯಕ್ತಿಯು ಅಧಿಕ ಸಮಯದ ವಿಶ್ರಾಂತಿ ಪಡೆಯುವ ಜತೆಗೆ ಉತ್ತಮ ಆಹಾರ, ಬಿಸಿ ನೀರು ಸೇವಿಸಬೇಕು.
ವೈರಾಣು ಜ್ವರದ ಲಕ್ಷಣಗಳು
ಮೂರರಿಂದ ನಾಲ್ಕು ದಿನ ತೀವ್ರ ಜ್ವರ
ಮೈಕೈ ನೋವು
ಕೆಮ್ಮು
ಗಂಟಲು ನೋವು
ಕಣ್ಣು ಉರಿ
ಸಾಮಾನ್ಯವಾಗಿ ಮಳೆಗಾಲದಲ್ಲಿ ವೈರಲ್ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಬರುವವರ ಸಂಖ್ಯೆ ಏರಿಕೆಯಾಗುತ್ತದೆ. ಇದೀಗ ರೂಪಾಂತರಿ ವೈರಸ್ ಹಾವಳಿ ಹೆಚ್ಚಾಗಿದ್ದು ಇದು ರೋಗಿಯ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ವೈರಾಣು ಸೋಂಕಿಗೆ ಚಿಕಿತ್ಸೆ ನೀಡಿ ಗುಣಮುಖರಾಗುವ ಅವಧಿ 3ರಿಂದ 7 ದಿನಗಳಿಗೆ ವಿಸ್ತರಣೆಯಾಗಿದೆ.
– ಡಾ. ಶಿಲ್ಪಾ ನಾಯ್ಡು,
ಸಮಾಲೋಚಕಿ, ಇಂಟರ್‌ನಲ್ ಮೆಡಿಸಿನ್, ಮಣಿಪಾಲ್ ಆಸ್ಪತ್ರೆ