Advertisement

ಬದಲಾವಣೆ ಬಗ್ಗೆ ಆಡಿಯೋ ವೈರಲ್ ಆದ ಕಾರಣ ನಮ್ಮ ಸಮಾವೇಶ ನಡೆಯುತ್ತಿದೆ: ದಿಂಗಾಲೇಶ್ವರ ಶ್ರೀ

01:26 PM Jul 25, 2021 | Team Udayavani |

ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರವಾಗಿ ಆಡಿಯೋ ತುಣುಕು ಹರಿದಾಡಿದ ಪರಿಣಾಮವಾಗಿ ಈ ಸಮಾವೇಶ ಸೃಷ್ಟಿಯಾಗಿದೆ. ಯಾರ ಸಲಹೆ, ಪ್ರಚೋದನೆ, ಒತ್ತಡಕ್ಕೆ ಮಣಿದು ಈ ಸಮಾವೇಶ ಮಾಡುತ್ತಿಲ್ಲ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

Advertisement

ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ “ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ” ವಿಷಯದ ಮಠಾಧೀಶರ ಮಹಾ ಸಮಾವೇಶದಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಠಾಧೀಶರು ಇದೇ ಮೊದಲ ಬಾರಿಗೆ ಬೆಂಬಲಿಸಿಲ್ಲ. ಈ ಹಿಂದೆ ಯಡಿಯೂರಪ್ಪ ಅವರಿಗೆ ಅನ್ಯಾಯ ಆಗುತ್ತಿದೆ ಎಂಬ ಮಾತು ಕೇಳಿ ಬಂದಾಗ ಸ್ವತಃ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ್ ಸ್ವಾಮೀಜಿಗಳು ಬಹಿರಂಗ ಬೆಂಬಲಕ್ಕೆ ನಿಂತಿದ್ದರು. ಈಗ ನಾಡಿನ ಎಲ್ಲಾ ಮಠಾಧೀಶರು ಬೆಂಬಲಿಸುತ್ತಿದ್ದಾರೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ:ಸಂಜೆಯವರೆಗೆ ಕಾದು ನೋಡೋಣ, ವರಿಷ್ಠರ ಮೇಲೆ ನನಗೆ ವಿಶ್ವಾಸವಿದೆ: ಯಡಿಯೂರಪ್ಪ

ಇದು ಮಠಾಧೀಶರ ಶಕ್ತಿ ಪ್ರದರ್ಶನ ಅಲ್ಲ. ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ದವೂ ಮಠಾಧೀಶರು ಇಲ್ಲಿ ಸೇರಿಲ್ಲ. ಅನ್ಯಾಯದ ವಿರುದ್ಧ ಈ ಸಮಾವೇಶ. ನಾಡಿನ ಹಿತಕ್ಕಾಗಿ ಈ ಸಮಾವೇಶ ಆಯೋಜಿಸಲಾಗಿದೆ. ಯಡಿಯೂರಪ್ಪ ಹಾಗೂ ಅವರ ಪುತ್ರರು ಈ ಸಮಾವೇಶಕ್ಕೆ ಸಹಾಯ ಮಾಡಿದ್ದಾರೆ ಅನ್ನುವುದು ಸುಳ್ಳು ಎಂದು ಸ್ಪಷ್ಟಪಡಿಸಿದರು.

Advertisement

ಸ್ವಪಕ್ಷದ ವಿರೋಧಿಗಳನ್ನು ಹೈಕಮಾಂಡ್ ನಿಯಂತ್ರಿಸಿಲ್ಲ ಎಂಬ ಕಾರಣಕ್ಕೆ ಮಠಾಧೀಶರಿಗೆ ನೋವಾಗಿದೆ. ಪಕ್ಷ ಅಧಿಕಾರಕ್ಕೆ ತರಲು ಯಡಿಯೂರಪ್ಪ ಬೇಕು. ಅಧಿಕಾರ ನಡೆಸಲು ನಾನು-ನೀವು ಎಂದು ಬೇರೆಯವರು ಮುಂದೆ ಬರುತ್ತಾರೆ. ಇದು ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ಹೊಕ್ಕಂತೆ ಆಗುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿಗಳು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next