ಚಿಕ್ಕಬಳ್ಳಾಪುರ: ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಮತದಾನ ಮಾಡಿರುವ 7 ಸದಸ್ಯರತೀರ್ಪಿನ ವಿರುದ್ಧ ರಾಜ್ಯ ಹೈಕೋರ್ಟ್‌ನಲ್ಲಿ ಮೇಲ್ಮನವಿಸಲ್ಲಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಅಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿಅಡ್ಡಮತದಾನ ಮಾಡಿರುವ 7 ನಗರಸಭಾ ಸದಸ್ಯರವಿರುದ್ಧ ಪೂರಕ ದಾಖಲೆಗಳನ್ನು ಡೀಸಿ ನ್ಯಾಯಾಲಯದಲ್ಲಿಸಲ್ಲಿಸಿದರೂ ಅವರು ರಾಜಕೀಯ ಒತ್ತಡಕ್ಕೆ ಮಣಿದುಉದ್ದೇಶ ಪೂರ್ವಕವಾಗಿಯೇ ಪೂರ್ವಗ್ರಹ ಪೀಡಿತರಾಗಿಜಿಲ್ಲಾಧಿಕಾರಿಗಳು ಈ ಪ್ರಕರಣದಲ್ಲಿ ತೀರ್ಪು ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದರು.
ರಾಜಕೀಯ ಒತ್ತಡಕ್ಕೆ ಮಣಿದು ಪಕ್ಷಾಂತರ ನಿಷೇಧ ಕಾನೂನು ದುರ್ಬಲಗೊಳಿಸುವ ಉದ್ದೇಶದಿಂದ ಡೀಸಿ ವಿಪ್ ಉಲ್ಲಂಘನೆ ಮಾಡಿದ 7 ಮಂದಿ ಸದಸ್ಯರ ವಿರುದ್ಧಶಿಸ್ತು ಕ್ರಮ ಕೋರಿ ಸಲ್ಲಿಸಿದ್ದ ದೂರನ್ನು ಸಮರ್ಪಕವಾಗಿವಿಚಾರಣೆ ನಡೆಸದೇ ವಾದಕ್ಕೂ ನಮಗೆ ಅವಕಾಶಕೊಡದೇ ದೂರನ್ನು ವಜಾಗೊಳಿಸಿದ್ದಾರೆ ಎಂದು ಇದರವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.
ವಕೀಲ ನಾರಾಯಣಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿಗಳು ತೀರ್ಪು ಪ್ರಕಟಿಸುವ ಮೊದಲೇ ತೀರ್ಪಿನಪ್ರತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದು ಹೇಗೆ ಸಾಧ್ಯವೆಂದು ಪ್ರಶ್ನಿಸಿದರಲ್ಲದೆ,ನ್ಯಾಯಾಲಯದ ಗೌರವ, ಘನತೆಯನ್ನು ಯಾರುಕಾಪಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ತೀರ್ಪು ಬರುವ ಮುನ್ನ ತೀರ್ಪಿನ ಪ್ರತಿಯನ್ನು ಹೇಗೆ ಬಂತು ಎಂಬುದು
ಇದು ರಾಜಕೀಯ ದುರುದ್ದೇಶ ಇಲ್ಲದಿದ್ದರೇ ಮತ್ತೇನು ಎಂದು ಪ್ರಶ್ನಿಸಿ, ಜಿಲ್ಲಾಧಿಕಾರಿಗಳ ನ್ಯಾಯಾಲಯದ ತೀರ್ಪಿನ ವಿರುದ್ಧ ರಾಜ್ಯ ಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲಿಯೂ ಪ್ರಶ್ನಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಮುನೇಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷಸುಮಿತ್ರಾ, ನಗರಸಭೆ ಸದಸ್ಯರಾದ ನರಸಿಂಹಮೂರ್ತಿ,ಅಂಬರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ನಗರಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ್, ಹಮೀಂ, ಬಾಬಾಜಾನ್ ಮತ್ತಿತರರು ಉಪಸ್ಥಿತರಿದ್ದರು.