Advertisement

ಒಲಿಂಪಿಕ್ಸ್‌ ಉದ್ಘಾಟನೆಗೆ ವಿಐಪಿ ಪ್ರೇಕ್ಷಕರು ಮಾತ್ರ

11:03 PM Jul 06, 2021 | Team Udayavani |

ಟೋಕಿಯೊ : ಟೋಕಿಯೊ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕೆ ಕೇವಲ ವಿಐಪಿ ಪ್ರೇಕ್ಷಕರಿಗಷ್ಟೇ ಪ್ರವೇಶಾವಕಾಶ ನೀಡಲು ಜಪಾನ್‌ ಸರಕಾರ ಮತ್ತು ಸಂಘಟನಾ ಸಮಿತಿ ನಿರ್ಧರಿಸಿದೆ.

Advertisement

ಈ ಮೊದಲು 10 ಸಾವಿರದಷ್ಟು ವೀಕ್ಷಕರಿಗೆ ಅವಕಾಶ ನೀಡಲು ಯೋಚಿಸಲಾಗಿತ್ತು. ಆದರೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಈ ಸಂಖ್ಯೆಯನ್ನು ಇನ್ನಷ್ಟು ಕಡಿತಗೊಳಿಸಲು ತೀರ್ಮಾನಿಸಿದೆ.

ಬೃಹತ್‌ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾ ಸ್ಪರ್ಧೆಗಳಿಂದ ಹಾಗೂ ರಾತ್ರಿ 9 ಗಂಟೆಯ ಬಳಿಕ ನಡೆಯುವ ಸ್ಪರ್ಧೆಗಳಿಂದ ವೀಕ್ಷಕರನ್ನು ಸಂಪೂರ್ಣವಾಗಿ ದೂರ ಇರಿಸಲಾಗುವುದು. ಈ ಸ್ಪರ್ಧೆಗಳೆಲ್ಲ ಖಾಲಿ ಸ್ಟೇಡಿಯಂಗಳಲ್ಲಿ ನಡೆಯಲಿವೆ.
ಈಗಾಗಲೇ ವಿದೇಶಿ ವೀಕ್ಷಕರಿಗೆ ಟೋಕಿಯೊ ಒಲಿಂಪಿಕ್ಸ್‌ ಪ್ರವೇಶ ನಿಷೇಧಿಸಲಾಗಿದೆ. ಆಯ್ದ ಸ್ಟೇಡಿಯಂಗಳಲ್ಲಿ ಶೇ. 50ರಷ್ಟು ಮಂದಿಗೆ, ಗರಿಷ್ಠ 10 ಸಾವಿರದ ಮಿತಿಯಲ್ಲಿ ವೀಕ್ಷಕರಿಗೆ ಅವಕಾಶ ನೀಡಲಾಗುವುದು.

ಟೋಕಿಯೊ ಹಾಗೂ ಆಸುಪಾಸಿನ 3 ನಗರಗಳಲ್ಲಿ ಕೊರೊನಾ ತುರ್ತುಸ್ಥಿತಿ ಬಹುತೇಕ ಮುಂದುವರಿಯಲಿದ್ದು, ಗುರುವಾರ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು. ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಕೂಡ ಅಂದೇ ಜಪಾನ್‌ಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ : ಕೊಪಾ ಅಮೆರಿಕ ಫುಟ್ ಬಾಲ್‌ : ಫೈನಲ್‌ಗೆ ನೆಗೆದ ಬ್ರಝಿಲ್‌

Advertisement

ಜಯಶಾಲಿಯಾಗಿ ಬನ್ನಿ: ಸಚಿನ್‌ ಶುಭ ಹಾರೈಕೆ
ಮುಂಬಯಿ: ಟೋಕಿಯೊ ಒಲಿಂಪಿಕ್ಸ್‌ಗೆ ತೆರಳುವ ಭಾರತೀಯ ಕ್ರೀಡಾಪಟುಗಳಿಗೆ ಸಚಿನ್‌ ತೆಂಡುಲ್ಕರ್‌ ಶುಭ ಹಾರೈಸಿದ್ದಾರೆ.
“ಟೋಕಿಯೊಗೆ ತೆರಳುವ ಕ್ರೀಡಾಪಟುಗಳ ಜೀವನವೆಲ್ಲ ಕಷ್ಟಕರವಾಗಿದ್ದರೂ ದೇಶವನ್ನು ಪ್ರತಿನಿಧಿಸುವಾಗ ಈ ಎಲ್ಲ ಕಷ್ಟ ಮರೆತು ಹೋಗುತ್ತದೆ.
ತ್ರಿವರ್ಣ ಧ್ವಜದಡಿಯಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಈ ಅವಕಾಶ ನಿಮಗೆ ಸಿಕ್ಕಿದೆ. ಇಡೀ ದೇಶದ ಜನತೆ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ. ಧೈರ್ಯವಾಗಿ ಮುನ್ನುಗ್ಗಿ, ಜಯಶಾಲಿಯಾಗಿ ಬನ್ನಿ…’ ಎಂದು ಸಚಿನ್‌ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next