Advertisement

Ganga Shashidharan: ಉಡುಪಿಯಲ್ಲಿ ಖ್ಯಾತ ವಯೊಲಿನ್ ವಾದಕಿ ಗಂಗಾ ಶಶಿಧರನ್​

02:41 PM May 13, 2024 | Team Udayavani |

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮೇ​15ರಂದು ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆ ​ಮೂವತ್ತನೆ ಸಂವತ್ಸರಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ​ಹಾಗು ​ಪಂಚಮಿ ಟ್ರಸ್ಟ್, ಪಂಚಲಹರಿ ಫೌ೦ಡೇಶನ್ ಪ್ರಾಯೋಜಕತ್ವದಲ್ಲಿ ​ಖ್ಯಾತ ಬಾಲಕಿ ಗಂಗಾ ಶಶಿಧರನ್ ಗುರುವಾಯೂರು ಹಾಗೂ ಅವರ ಗುರು ಅನುರೂಪ್ ಗುರುವಾಯೂರು ಮತ್ತು​ ತಂಡದವರಿಂದ ವಯೊಲಿನ್ ವಾದನ ನಡೆಯಲಿದೆ​.

Advertisement

ತ್ರಿಶೂರ್ ನ ಹತ್ತು ವರ್ಷದ ಗಂಗಾ ಶಶಿಧರನ್ ವಯೊಲಿನ್ ವಾದನದ ಮೂಲಕ ಸಂಗೀತ ಪ್ರಿಯರ ಮನ ಗೆದ್ದಿದ್ದಾಳೆ. ಗುರುವಾಯೂರು ದೇವಸ್ಥಾನದ ವೇದಿಕೆಯಲ್ಲಿ ವೇದಿಕೆಯಲ್ಲಿ ವಯೊಲಿನ್ ನಲ್ಲಿ ಜಾದೂ ಪ್ರದರ್ಶಿಸಿ ಎಲ್ಲರನ್ನು ಬೆರಗುಗೊಳಿಸುವ ತಾರೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾ, ಸ್ವಿಟ್ಜರ್ಲೆಂಡ್, ದೆಹಲಿ ಮತ್ತು ಬೆಂಗಳೂರಿಗೆ ಆಹ್ವಾನಗಳೊಂದಿಗೆ ಕೇರಳ ಮತ್ತು ಹೈದರಾ ಬಾದ್‌ನಲ್ಲಿ ಅನೇಕ ಸ್ಥಳಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾಳೆ. ಕಳೆದ ನವೆಂಬರ್‌ನಲ್ಲಿ ಗುರುವಾಯೂರು ದೇವಸ್ಥಾನ ದಲ್ಲಿ ನಡೆದ ಜುಗಲ್ಬಂದಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದೀಗ ಉಡುಪಿಯಲ್ಲಿ ಆಕೆಯ ವಯೊಲಿನ್ ವಾದನ ಕಾರ್ಯಕ್ರಮವು   ಮೇ 15 ರಂದು ಸಂಜೆ ರಾಜಾಂಗಣದಲ್ಲಿ ನಡೆಯಲಿದ್ದು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next