Advertisement

ಮಹಿಳೆಯ ಮೇಲಿನ ದೌರ್ಜನ್ಯ ವಿಷಾದನೀಯ: ನೂರುನ್ನೀಸಾ

08:48 PM Sep 23, 2019 | Team Udayavani |

ಮಡಿಕೇರಿ: ಪುರುಷ ಪ್ರಧಾನ ದೃಷ್ಟಿಕೋನದ ಆಧಾರದಲ್ಲಿ ನಿರ್ಮಾಣವಾಗಿರುವ ನಮ್ಮ ಸಮಾಜದಲ್ಲಿ ಇಂದಿಗೂ ಆ ದೃಷ್ಟಿಕೋನ ಬದಲಾಗಿಲ್ಲ. ಮಹಿಳೆಯ ಮೇಲಿನ ಶೋಷಣೆ ಮುಂದುವರಿದಿರುವುದು ದುರಂತ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ನೂರುನ್ನೀಸಾ ವಿಷಾದಿಸಿದ್ದಾರೆ.

Advertisement

ನಗರದ ಚೇಂಬರ್‌ ಆಫ್ ಕಾಮರ್ಸ್‌ ಬ್ಯಾಂಕ್‌ ಸಭಾಂಗಣದಲ್ಲಿ ಕರ್ನಾಟಕ ದಕ್ಷಿಣ ವಲಯದ ಅಹ್ಮದಿಯಾ ಮುಸ್ಲಿಂ ಜಮಾಅತಿನ ಮಹಿಳಾ ಘಟಕ ಹಾಗೂ ಮಡಿಕೇರಿಯ ಘಟಕದ ವತಿಯಿಂದ ರವಿವಾರ ನಡೆದ ಸರ್ವಧರ್ಮ ಮಹಿಳಾ ಶಾಂತಿ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ| ಕವಿತಾ ರೈ ಮಾತನಾಡಿ, ಸೃಷ್ಟಿಕರ್ತನ ದೃಷ್ಟಿಯಲ್ಲಿ ಭೂಮಿಯ ಮೇಲಿನ ಎಲ್ಲಾ ಜೀವಿಗಳು ಒಂದೇ ಆಗಿವೆ. ಇಲ್ಲಿ ಗಂಡು ಹೆಣ್ಣು ಎನ್ನುವ ಎರಡು ಜಾತಿ ಬಿಟ್ಟರೇ ಬೇರೆ ಜಾತಿಗಳು ವಿಭಿನ್ನ ಭಾಷೆ, ಸಂಸ್ಕೃತಿ ನೆಲೆಯಲ್ಲಿ ಹುಟ್ಟಿಕೊಂಡಿದೆಯಷ್ಟೇ ಎಂದು ಪ್ರತಿಪಾದಿಸಿದರು.

ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ| ಪುಷ್ಪಾ ಕುಟ್ಟಣ್ಣ ಮಾತನಾಡಿ, ವಿವಿಧ ಧರ್ಮಗಳ ಆಚರಣೆಗಳು ಬೇರೆ ಬೇರೆಯಾಗಿದ್ದರೂ, ಅವುಗಳ ಉದ್ಧೇಶ, ಸಂದೇಶ ಒಂದೇ ಆಗಿವೆ. ರಾಜಕೀಯ ಪ್ರೇರಿತ ಶಕ್ತಿಗಳಿಂದ ಧರ್ಮಗಳ ನಡುವೆ ಒಡಕು ಉಂಟು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜನರಲ್ಲಿ ಭಾಷೆ, ಉಡುಪು, ಆಹಾರ, ಆಚಾರ ವಿಚಾರಗಳಲ್ಲಿ ಭಿನ್ನತೆಗಳನ್ನು ಕಾಣಬಹುದು. ಇಂತಹ ಭಿನ್ನತೆಗಳ ಹೊರತಾಗಿಯೂ ದೇಶವಾಗಿ ಒಟ್ಟಾಗಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ವಿವಿಧತೆಯೇ ಭಾರತದ ಪ್ರಮುಖ ಶಕ್ತಿಯಾಗಿ ಇತರ ದೇಶಕ್ಕೆ ಮಾದರಿಯಾಗಬೇಕಿದೆ ಎಂದು ಹೇಳಿದರು.

ಮಡಿಕೇರಿಯ ಸೇಂಟ್‌ ಮೈಕಲ್‌ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ಸಿಸ್ಟರ್‌ ಪ್ರತಿಮಾ ರೋಡ್ರಿಗಸ್‌” ಮಾನವೀಯ ಗುಣಗಳಿಂದ ದೂರ ಸರಿಯುತ್ತಿದ್ದಾರೆ. ನಾವೆಲ್ಲರೂ ಒಂದೇ ಎಂಬ ಮಾನವೀಯ ಮೌಲ್ಯ ಅರಿತಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

Advertisement

ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಅಹ್ಮದಿಯಾ ಮುಸ್ಲಿಂ ಜಮಾಅತಿನ ಮಹಿಳಾ ಘಟಕದ ರಾಷ್ಟ್ರೀಯ ಉಪಾಧ್ಯಕ್ಷೆ ನುಸ್ರತ್‌ ಮೊಹಮೂದ್‌ ಮಾತನಾಡಿ, ವಿವಿಧ ಧರ್ಮಗಳ ನಡುವೆ ಶಾಂತಿ,ಸೌಹಾರ್ದ ಮೂಡಿಸಿ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ ಎಂದು ವಿವರಿಸಿದರು.

ಸಮ್ಮೆಳನದಲ್ಲಿ ಜಮೀಯ ಅನ್ಸರ್‌ ಸೌಹಾರ್ದ ಗೀತೆ ಹಾಡಿದರು, ರೇಷ್ಮಾ ಮತ್ತು ತಂಡದವರು ಅರಬಿ ಗೀತೆಗಳನ್ನು ಪ್ರಸ್ತುತ ಪಡಿಸಿದರು.ಬೆಂಗಳೂರು ಘಟಕದ ನಸೀಮಾ ನಾಸೀರ್‌, ಬಾಷಿತ ಅನ್ಸರ್‌, ಮಡಿಕೇರಿ ಘಟಕದ ಅಧ್ಯಕ್ಷೆ ನಸೀರಾ ರಫೀ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next